ಬ್ರೇಕಿಂಗ್ ನ್ಯೂಸ್
03-11-23 05:43 pm Mangalore Correspondent ಕ್ರೈಂ
ಮಂಗಳೂರು, ನ.3: ಬೆಂಗಳೂರಿನಲ್ಲಿ ಡೈರಿ ರಿಚ್ ಹೆಸರಿನ ಐಸ್ ಕ್ರೀಮ್ ಸಂಸ್ಥೆ ನಡೆಸುತ್ತಿರುವ ಸುಳ್ಯ ಮೂಲದ ಪ್ರತಿಷ್ಠಿತ ಕುಟುಂಬ ಸದಸ್ಯರು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಡೈರಿ ರಿಚ್ ಕಂಪನಿಯ ಮಾಲಕ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗುತ್ತಿದ್ದಂತೆ ಗೋವಿಂದರಾಜನಗರ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.
ಐಶ್ವರ್ಯಾ ಪತಿ ರಾಜೇಶ್, ಮಾವ ಗಿರಿಯಪ್ಪ ಗೌಡ, ಅತ್ತೆ ಸೀತಾ, ಮೈದುನ ವಿಜಯ್, ಮೈದುನನ ಪತ್ನಿ ತಸ್ಮಿನ್ ಬಂಧಿತರು. ವರದಕ್ಷಿಣೆ ಕಿರುಕುಳ, ಮಾನಹಾನಿ ಹಾಗೂ ನಿರಂತರ ಮಾನಸಿಕ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಗಿ ಐಶ್ವರ್ಯಾ ತಾಯಿ ಉಷಾ ಪೊಲೀಸರಿಗೆ ದೂರು ನೀಡಿದ್ದರು. ಮೃತ ಐಶ್ವರ್ಯಾ ಅವರು ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯ ತಾಲೂಕಿನ ಉಬರಡ್ಕ ಮೂಲದ ಎಂ.ಎಸ್. ಸುಬ್ರಹ್ಮಣ್ಯ – ಉಷಾ ದಂಪತಿಯ ಪುತ್ರಿಯಾಗಿದ್ದು ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲೇ ನೆಲೆಸಿರುವ ಡೈರಿ ರಿಚ್ ಸಂಸ್ಥೆಯ ಮಾಲಕ ಗಿರಿಯಪ್ಪ ಗೌಡರ ಪುತ್ರ ರಾಜೇಶ್ ಜೊತೆಗೆ ಮದುವೆ ಮಾಡಿಕೊಂಡಿದ್ದರು.
ಪ್ರಸ್ತುತ ಸಂಸ್ಥೆಯನ್ನು ಮಗ ರಾಜೇಶ್ ಮತ್ತು ವಿಜಯ್ ನೋಡಿಕೊಳ್ಳುತ್ತಿದ್ದರು. ಐಶ್ವರ್ಯಾ ಕುಟುಂಬವೂ ಶ್ರೀಮಂತರಾಗಿದ್ದು, ಅಮೆರಿಕದಲ್ಲಿ ವ್ಯಾಸಂಗ ಮಾಡಿ ಎಂಬಿಎ ಪೂರೈಸಿದ್ದರು. ಈ ನಡುವೆ, ಎರಡೂ ಕುಟುಂಬಗಳ ಮಧ್ಯೆ ಮನಸ್ತಾಪ ಉಂಟಾಗಿತ್ತು. ಇದೇ ಕಾರಣಕ್ಕೆ ಪತಿಯ ಮನೆಯಿಂದ ಐಶ್ವರ್ಯಾ ಅ.1ರಂದು ಬೆಂಗಳೂರಿನ ತನ್ನ ತವರು ಮನೆಗೆ ಆಗಮಿಸಿದ್ದರು. ಅ.26ರಂದು ಆಕೆ ಮೂರು ಪುಟದ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ಸಾವಿಗೆ ಶರಣಾಗಿದ್ದರು. ಬಳಿಕ ಆಕೆಯ ಅಂತ್ಯಸಂಸ್ಕಾರ ಸುಳ್ಯದ ಉಬರಡ್ಕದ ಮನೆಯಲ್ಲಿ ನಡೆದಿತ್ತು.
ಮದುವೆ ಮಾಡಿಸಿದವರೇ ಹುಳಿ ಹಿಂಡಿದರು
ಡೈರಿ ರಿಚ್ ಕಂಪನಿಯಲ್ಲಿ ಐಶ್ವರ್ಯಾ ತಂದೆ ಎಂ.ಎಸ್.ಸುಬ್ರಹ್ಮಣ್ಯ ಅವರ ತಂಗಿಯ ಗಂಡ ರವೀಂದ್ರ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದರು. ಸೌಂದರ್ಯವತಿಯಾಗಿದ್ದ ಐಶ್ವರ್ಯಾಳನ್ನು ತನ್ನ ಸಂಸ್ಥೆಯ ಮಾಲಕರ ಪುತ್ರನಿಗೆ ರವೀಂದ್ರ ಅವರೇ ಮಧ್ಯವರ್ತಿಯಾಗಿ ನಿಂತು ಮದುವೆ ಮಾಡಿಸಿದ್ದರು. ಆನಂತರ ಕುಟುಂಬದ ಆಸ್ತಿಯ ವಿಚಾರದಲ್ಲಿ ಸುಬ್ರಹ್ಮಣ್ಯ ಮತ್ತು ರವೀಂದ್ರ ನಡುವೆ ಜಗಳ ಆಗಿತ್ತು. ಇದೇ ದ್ವೇಷದಲ್ಲಿ ರವೀಂದ್ರ ಅವರು ತನ್ನ ಸಂಸ್ಥೆಯ ಮಾಲಕರಿಗೆ ಹುಳಿ ಹಿಂಡಿದ್ದು, ಐಶ್ವರ್ಯಾ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ್ದರು. ತಂದೆ ಮೇಲಿನ ದ್ವೇಷಕ್ಕೆ ಮಗಳನ್ನು ಬಲಿ ಕೊಡಲು ನಾನಾ ರೀತಿಯಲ್ಲಿ ಎರಡು ಕುಟುಂಬ ಬೇರೆಯಾಗುವಂತೆ ಪಿತೂರಿ ಮಾಡಿದ್ದಾರೆ ಎನ್ನಲಾಗಿದೆ.
ರವೀಂದ್ರ ಕುಟುಂಬಸ್ಥರು ಐಶ್ವರ್ಯಾ ಬಗ್ಗೆ ಸುಳ್ಳು ಕತೆಗಳನ್ನು ಪತಿ ರಾಜೇಶ್ ಗೆ ಹೇಳಿದ್ದರಂತೆ. ಇದರಿಂದ ರಾಜೇಶ್ ಕುಟುಂಬ ಸದಸ್ಯರು ಐಶ್ವರ್ಯಾಳಿಗೆ ಮಾನಸಿಕ ಕಿರುಕುಳ ನೀಡಲಾರಂಭಿಸಿದ್ದರು ಎನ್ನಲಾಗಿದೆ. ಮಾವ ಗಿರಿಯಪ್ಪ ಗೌಡ, ಅತ್ತೆ ಸೀತಾ, ಮೈದುನ ವಿಜಯ್, ಆತನ ಪತ್ನಿ ತಸ್ಮಿನ್ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪವನ್ನು ದೂರಿನಲ್ಲಿ ತಿಳಿಸಿದ್ದಾರೆ. ಇದಲ್ಲದೆ, ಎರಡು ಕುಟುಂಬದ ಮಧ್ಯೆ ಹುಳಿ ಹಿಂಡಿದ ರವೀಂದ್ರ, ಗೀತಾ, ಶಾಲಿನಿ, ಓಂಪ್ರಕಾಶ್ ಎಂಬವರ ಮೇಲೂ ದೂರು ದಾಖಲಾಗಿದೆ.
Sullia Five including owner of Dairy Rich ice cream arrested in connection with daughter in law suicide case. The city police have arrested five people including the owner of Dairy Rich icecream owner Giriyappa Gowda in connection with the suicide of his daughter-in-law. 26-year-old Aishwarya, the elder daughter-in-law of Seeta Ice cream owner who ran the Dairy Rich ice cream brand died by suicide on October 26. Aishwarya left a suicide note accusing her in-laws of dowry harassment.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm