ಬ್ರೇಕಿಂಗ್ ನ್ಯೂಸ್
16-03-26 09:48 pm Mangaluru Staffer ಕರಾವಳಿ
ಮಂಗಳೂರು, ಮಾರ್ಚ್ 16: ನಗರದ ಬೆಂದೂರುವೆಲ್, ಶಿವಭಾಗ್, ನಂತೂರು, ಲಾಲ್ ಬಾಗ್ ಮುಂತಾದೆಡೆ ರಾತ್ರೋರಾತ್ರಿ ಹಂಪ್ಸ್ ಗಳನ್ನು ಹಾಕುತ್ತಿದ್ದು, ದ್ವಿಚಕ್ರ ವಾಹನ ಸವಾರರು ಇದರ ಅರಿವಿಲ್ಲದೆ ಅಪಘಾತಕ್ಕೀಡಾಗುತ್ತಿದ್ದಾರೆ. ಸ್ಥಳೀಯರು ದಿನವೂ ಸ್ಕೂಟರ್, ಬೈಕಿನಿಂದ ಬಿದ್ದು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸುತ್ತಿದ್ದಾರೆ.
ಬೆಂದೂರು ವೆಲ್ ನಲ್ಲಿರುವ ಡೊಮಿನೋಸ್ ಮುಂದೆ ಇದೇ ರೀತಿಯ ಹಂಪ್ಸ್ ಒಂದನ್ನು ವಾರದ ಹಿಂದೆ ಹಾಕಿದ್ದು, ಅದಕ್ಕೆ ಪ್ರತಿಫಲನದ ಫಲಕವನ್ನೂ ಹಾಕಿಲ್ಲ. ಜನರಿಗೆ ತಿಳಿಯುವಂತೆ ಬಿಳಿಯ ಗೆರೆಯನ್ನೂ ಹಾಕಿಲ್ಲ. ಇಲ್ಲಿ ಹಂಪ್ಸ್ ಇರುವುದನ್ನು ತಿಳಿಯದೆ ರಾತ್ರಿ ಹೊತ್ತಿನಲ್ಲಿ ವೇಗವಾಗಿ ಸಾಗುವ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದಾರೆ. ಡೊಮಿನೋಸ್ ಮುಂದಿನ ಅಪಾರ್ಟ್ಮೆಂಟ್ ಸಿಸಿಟಿವಿಯಲ್ಲಿ ಹಲವಾರು ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.






ಈ ಬಗ್ಗೆ ಅಲ್ಲಿನ ನಿವಾಸಿಗಳು ಹೆಡ್ ಲೈನ್ ಕರ್ನಾಟಕದ ಗಮನಕ್ಕೆ ತಂದಿದ್ದು, ದಿನವೂ ಅಪಘಾತಗಳಾಗುತ್ತಿದ್ದು ದ್ವಿಚಕ್ರ ವಾಹನಗಳಿಂದ ಬಿದ್ದು ಕೈಕಾಲಿಗೆ ಏಟು ಮಾಡಿಕೊಂಡವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸವಾಗಿದೆ. ಇಲ್ಲಿ ಯಾರೋ ಹಂಪ್ಸ್ ಹಾಕಿ ಹೋಗಿದ್ದು, ಅದಕ್ಕೊಂದು ಬಣ್ಣವನ್ನೂ ಬಳಿಯದೆ ಇರುವುದರಿಂದ ರಾತ್ರಿ ವೇಳೆ ಹಂಪ್ಸ್ ತಿಳಿಯದೆ ಸ್ಕಿಡ್ ಆಗಿ ಬೀಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಅಪಾರ್ಟ್ಮೆಂಟ್ ಪಕ್ಕದ ರಸ್ತೆ ಬದಿಯಲ್ಲಿ ಕೆಲವರು ಕಾರು ನಿಲ್ಲಿಸುತ್ತಿದ್ದು, ಹೀಗೆ ಬಿದ್ದ ದ್ವಿಚಕ್ರ ವಾಹನಗಳು ಅಲ್ಲಿರುವ ಕಾರುಗಳಿಗೆ ಬಡಿದು ಇನ್ನೊಂದು ವರಾತ ಸೃಷ್ಟಿಯಾಗುತ್ತಿದೆ. ಕಾರಿನ ಮಾಲೀಕರು ಬಂದು ಸ್ಕೂಟರ್ ತಾಗಿದ್ದು ನಿಮ್ಮದಲ್ವಾ.. ಕಾರು ರಿಪೇರಿಗೆ ಹಣ ಕೊಡಿ ಎಂದು ಜೋರು ಮಾಡುವುದು, ಹಣ ಕೀಳುವುದು ಆಗುತ್ತಿದೆ. ಯಾಕಾದ್ರೋ ಇಲ್ಲಿಂದ ಬಂದೆನೋ ಎಂದು ಕೈಕಾಲಿಗೆ ಏಟು ಜೊತೆಗೆ ಹಣ ಕಟ್ಟುವ ದುಸ್ಥಿತಿ ದ್ವಿಚಕ್ರ ಸವಾರರದ್ದಾಗಿದೆ.
ಸಿಸಿಟಿವಿಯಲ್ಲಿ ಸ್ಕೂಟರ್, ಬೈಕುಗಳು ನೆಲಕ್ಕೆ ಬಿದ್ದು ರಸ್ತೆಗೆ ಜಜ್ಜಿಕೊಂಡು ಬೆಂಕಿ ಕಿಡಿಯೆದ್ದು ದೂರಕ್ಕೆ ಎಗರಿ ಬೀಳುವ ದೃಶ್ಯಗಳಿವೆ. ರಾತ್ರಿ ವೇಳೆಯೇ ಅಪಘಾತಗಳಾಗುತ್ತಿದ್ದು, ಸ್ಥಳೀಯರಿಗೆ ಇಂಥವರನ್ನು ಆಸ್ಪತ್ರೆಗೆ ಸೇರಿಸುವುದೇ ಆಗಿದೆ. ಇದೇ ರೀತಿಯಲ್ಲಿ ಶಿವಭಾಗ್, ನಂತೂರು ಸೇರಿದಂತೆ ನಗರದ ಹಲವೆಡೆ ಹಂಪ್ಸ್ ಹಾಕಿದ್ದು, ವೇಗ ನಿಯಂತ್ರಣಕ್ಕೆ ಮಾಡುತ್ತಿದ್ದರೂ ಇದರಿಂದ ಮತ್ತೊಂದು ಅಪಘಾತಕ್ಕೆ ಕಾರಣವಾಗುತ್ತಿರುವುದು ವ್ಯವಸ್ಥೆಯ ಲೋಪವಲ್ಲದೆ ಬೇರೇನಲ್ಲ. ಸ್ಥಳೀಯರು ಬೇಸತ್ತು ಚಾಕ್ ಪೀಸ್ ನಲ್ಲಿ ಗೆರೆ ಎಳೆದಿದ್ದರೂ, ಅದು ಮರುದಿನ ಎದ್ದು ಹೋಗುತ್ತಿದೆ. ಟ್ರಾಫಿಕ್ ಪೊಲೀಸರು, ಮಹಾನಗರ ಪಾಲಿಕೆಯವರು ಇಂತಹ ಹಂಪ್ಸ್ ಗಳಿಗೆ ಬಣ್ಣದ ಗೆರೆಯೆಳೆದು ಪುಣ್ಯ ಕಟ್ಟಿಕೊಳ್ಳಬೇಕು.
Unmarked speed breakers in #Bendoorwell, #Mangaluru are causing frequent night accidents. No paint, no reflectors, no warning signs—two-wheeler riders are skidding and getting injured.
— Headline Karnataka (@hknewsonline) March 16, 2026
Authorities installed #humps for safety, but forgot visibility. pic.twitter.com/s7bxxL2dQh
Residents have raised concerns over a series of accidents caused by newly installed speed breakers in several parts of the city, including Bendorewell, Shivabhag, Nantoor and Lalbagh. The speed humps, reportedly constructed overnight, have been causing accidents as two-wheeler riders are unaware of their presence.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am