Kollur Temple, Fraud: ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿ ವಂಚನೆ ; ವಿಶೇಷ ಪೂಜೆ ಹೆಸರಲ್ಲಿ 30 ಲಕ್ಷ ಪಡೆದು ಬೆಂಗಳೂರಿನ ಕುಟುಂಬಕ್ಕೆ ಮೋಸ 

04-11-23 09:30 pm       Udupi Correspondent   ಕ್ರೈಂ

ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬೆಂಗಳೂರು ಮೂಲದ ಭಕ್ತರ ಕುಟುಂಬಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ 30.73 ಲಕ್ಷ ರೂ. ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. 

ಉಡುಪಿ, ನ.4: ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬೆಂಗಳೂರು ಮೂಲದ ಭಕ್ತರ ಕುಟುಂಬಕ್ಕೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ 30.73 ಲಕ್ಷ ರೂ. ಹಣ ಪಡೆದು ವಂಚಿಸಿದ ಘಟನೆ ನಡೆದಿದೆ. 

ಕೊಲ್ಲೂರು ನಿವಾಸಿ ಸುಧೀರ್‌ ಕುಮಾರ್‌ ಎಂಬಾತ ವಂಚನೆ ಎಸಗಿದ ವ್ಯಕ್ತಿ. ಬೆಂಗಳೂರಿನ ದಿಲ್ನಾ ತನ್ನ ಗಂಡ ಮತ್ತು ಕುಟುಂಬ ಸದಸ್ಯರ ಜತೆ ಕೊಲ್ಲೂರು ದೇವಸ್ಥಾನಕ್ಕೆ ಬಂದಿದ್ದ ವೇಳೆ ತನ್ನ ಅಣ್ಣ ದಿಲೀಶ್‌ ಅವರಿಗೆ ಪರಿಚಯವಿದ್ದ ಸುಧೀರ್‌ ಕುಮಾರ್‌ ಎಂಬಾತ ಪರಿಚಯ ಆಗಿದ್ದ. ತಾನು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಹೇಳಿ ಹಣ ಹಾಕುವಂತೆ ಕೇಳಿಕೊಂಡಿದ್ದ.

ಅಲ್ಲದೆ, ದಿಲ್ನಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸುವುದಾಗಿ ಹೇಳಿ ದಿಲ್ನಾ ಮತ್ತು ಅವರ ಅಣ್ಣ ದಿಲೀಶ್‌ ಅವರಿಂದ ಒಟ್ಟು 30,73,600 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆ ಬದಲಾವಣೆಗಾಗಿ ತಾಯಿಯ ಸಹಿ ಹಾಕಿಕೊಡುವಂತೆ ಕೇಳಿದ್ದರಿಂದ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿಸಿದಾಗ ಸುಧೀರ್‌ ಎನ್ನುವ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಲ್ಲವೆಂಬುದು ತಿಳಿದುಬಂದಿತ್ತು. ಇದರಿಂದ ದಿಲ್ನಾ ಅವರು ಸುಧೀರ್‌ ಕುಮಾರ್‌ ವಿರುದ್ಧ ಹಣ ವಂಚನೆ ಮಾಡಿರುವ ಕುರಿತು ಕೊಲ್ಲೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

A man claiming to be a member of the Kollur temple management has duped a family of devotees from Bengaluru of Rs 30.73 lakh by promising to perform special pujas at the temple. There has been an incident of money being duped.