Ram Sene, Arrest, Mangalore: ಮಟನ್- ಚಿಕನ್ ಅಂಗಡಿಯವರ ಮಧ್ಯೆ ಗಲಾಟೆ ; ಬೀಯರ್ ಬಾಟಲಿಯಲ್ಲಿ ಹಲ್ಲೆ , ರಾಮಸೇನೆ ಕಾರ್ಯಕರ್ತ ಬಂಧನ 

05-11-23 10:02 pm       Mangalore Correspondent   ಕ್ರೈಂ

ಮಟನ್ ಅಂಗಡಿಯ ಮುಂದೆ ಇಟ್ಟಿದ್ದ ಕಬ್ಬಿಣದ ರಾಡ್ ಒಂದನ್ನು ಕಳವು ಮಾಡಿದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರಾಮಸೇನೆ ಸಂಘಟನೆಯ ಕಾರ್ಯಕರ್ತನೊಬ್ಬ ಬೀಯರ್ ಬಾಟಲಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಕುಲಶೇಖರದಲ್ಲಿ ನಡೆದಿದೆ.

ಮಂಗಳೂರು, ನ.5: ಮಟನ್ ಅಂಗಡಿಯ ಮುಂದೆ ಇಟ್ಟಿದ್ದ ಕಬ್ಬಿಣದ ರಾಡ್ ಒಂದನ್ನು ಕಳವು ಮಾಡಿದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರಾಮಸೇನೆ ಸಂಘಟನೆಯ ಕಾರ್ಯಕರ್ತನೊಬ್ಬ ಬೀಯರ್ ಬಾಟಲಿಯಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಕುಲಶೇಖರದಲ್ಲಿ ನಡೆದಿದೆ. 

ಕುಲಶೇಖರದ ಮಟನ್ ಕಾರ್ನರ್ ಎಂಬ ಅಂಗಡಿಯಲ್ಲಿ ಕೆಲಸಕ್ಕಿರುವ ಮೆಹರೂಫ್ ಎಂಬಾತ ಹಲ್ಲೆಗೀಡಾದ ವ್ಯಕ್ತಿ. ನ.4ರಂದು ಮಧ್ಯಾಹ್ನ ವೇಳೆಗೆ ಕಬ್ಬಿಣದ ರಾಡ್ ಕಳವಾದ ಬಗ್ಗೆ ಮೆಹರೂಫ್ ಹತ್ತಿರದ ಚಿಕನ್ ಸ್ಟಾಲ್ ಅಂಗಡಿಯ ಗುರುರಾಜ್ ಬಳಿ ಕೇಳಿದ್ದರು. ರಾಡನ್ನು ಗುಜರಿ ಹೆಕ್ಕುವ ಬಾಬು ಒಯ್ದಿದ್ದಾಗಿ ಗುರುರಾಜ್ ಹೇಳಿದ್ದರು. ಅದೇ ವೇಳೆಗೆ, ಬಾಬು ಸ್ಥಳಕ್ಕೆ ಬಂದಿದ್ದು ಅವರ ಬಳಿಯೂ ಕಬ್ಬಿಣದ ರಾಡ್ ಒಯ್ದಿದ್ದೀಯಾ ಎಂದು ಮೆಹರೂಫ್ ಕೇಳಿದ್ದಾರೆ. 

ಇದೇ ಸಂದರ್ಭದಲ್ಲಿ ಎ.ಎಸ್‌ ಚಿಕನ್ ಸೆ‌ಂಟರ್ ನಲ್ಲಿ ಕೆಲಸ ಮಾಡುವ ದೀಪಕ್ ಮೂಡುಶೆಡ್ಡೆ ಎಂಬಾತ ಪ್ರಶ್ನೆ ಮಾಡಿದ್ದು, ನೀನು ಅವನಲ್ಲಿ ಏನು ಕೇಳ್ತೀಯಾ.. ನೀನು ದೊಡ್ಡ ಜನವಾ ಎಂದು ಹೇಳಿ ಮುಂದೆ ಬಂದಿದ್ದು ಅಲ್ಲಿಯೇ ಇದ್ದ ಖಾಲಿ ಬೀಯರ್ ಬಾಟಲಿಯಿ‌ಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ಮೆಹರೂಫ್ ತಲೆಗೆ ಗಾಯವಾಗಿದ್ದು ಕಂಕನಾಡಿ ಕೊಲಾಸೋ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರೋಪಿ ದೀಪಕ್ ರಾಮಸೇನೆ ಸಂಘಟನೆ ಕಾರ್ಯಕರ್ತನಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಹಲವು ಠಾಣೆಗಳಲ್ಲಿ ಕೇಸು ದಾಖಲಾಗಿವೆ.

Mangalore Fight between mutton and chicken stall, Ram sene activist assaults man with beer bottle. The arrested has been identifed as Deepak Moodshede.