Drugs case, Mangalore: ಮಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಜಾಲ ; ಮಡಿಕೇರಿ ಮೂಲದ ಮೂವರು ಕುಖ್ಯಾತ ಆರೋಪಿಗಳ ಸೆರೆ 

07-11-23 12:56 pm       Mangalore Correspondent   ಕ್ರೈಂ

ಮಡಿಕೇರಿ ಕೋಯಿನೂರು ನಿವಾಸಿ ಪ್ರಮೋದ್ ಎಮ್.ಜಿ @ ಡಿಸ್ಕ್ (30), ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಏರಿಯಾದ ಮೊಹಮ್ಮದ್ ರಾಶೀದ್ ಎಂ.ಝಡ್ @ ರಾಶೀ, (41), ಮಡಿಕೇರಿ ಕಡಗದಾಳು ನಿವಾಸಿ ದರ್ಶನ್ ಎಸ್ (24) ಬಂಧಿತರು.

ಮಂಗಳೂರು, ನ.6: ನಗರದ ಪಳ್ನೀರ್ ನಲ್ಲಿ ಬ್ಲೂ ಸ್ಟಾರ್ ಲಾಡ್ಜ್ ಬಳಿಯಲ್ಲಿ 3 ಜನ ವ್ಯಕ್ತಿಗಳು ಅಕ್ರಮವಾಗಿ ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು 3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿದ್ದು, ಆರೋಪಿಗಳಿಂದ 75 ಸಾವಿರ ರೂ. ಮೌಲ್ಯದ 15 ಗ್ರಾಂ ನಿಷೇಧಿತ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.‌

ಮಡಿಕೇರಿ ಕೋಯಿನೂರು ನಿವಾಸಿ ಪ್ರಮೋದ್ ಎಮ್.ಜಿ @ ಡಿಸ್ಕ್ (30), ಮಡಿಕೇರಿ ಕಾನ್ವೆಂಟ್ ಜಂಕ್ಷನ್ ಏರಿಯಾದ ಮೊಹಮ್ಮದ್ ರಾಶೀದ್ ಎಂ.ಝಡ್ @ ರಾಶೀ, (41), ಮಡಿಕೇರಿ ಕಡಗದಾಳು ನಿವಾಸಿ ದರ್ಶನ್ ಎಸ್ (24) ಬಂಧಿತರು. ಇವರಿಂದ 15 ಗ್ರಾಂ MDMA ಮಾದಕ ವಸ್ತು-(75,000/-) OPPO ಕಂಪನಿಯ ಮೊಬೈಲ್ ಪೋನ್, Asus  ಕಂಪನಿಯ ಮೊಬೈಲ್ ಪೋನ್-1, ಡಿಜಿಟಲ್ ತೂಕ ಮಾಪನ -1 ವಶಕ್ಕೆ ಪಡೆದಿದ್ದು ಸೊತ್ತುಗಳ ಒಟ್ಟು ಮೌಲ್ಯ- 95,000/- ರೂ. ಆಗಬಹುದು.

ಆರೋಪಿತರಲ್ಲಿ ಪ್ರಮೋದ್ ಎಮ್ ಜಿ @ ಡಿಸ್ಕ್ ಎಂಬಾತನ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ಮಂಗಳೂರು ನಗರದ ಬರ್ಕೆ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಡಿಕೇರಿ ಜಿಲ್ಲೆಯ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ, ದರೋಡೆ ಪ್ರಕರಣ ದಾಖಲಾಗಿರುತ್ತವೆ. ಮೊಹಮ್ಮದ್ ರಾಶೀದ್ ಮೇಲೆ ಮಡಿಕೇರಿ ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಮಡಿಕೇರಿ ನಗರ ಠಾಣೆಯಲ್ಲಿ ಕೊಲೆ, ದರೋಡೆ, ಸುಲಿಗೆ ಪ್ರಕರಣ ದಾಖಲಾಗಿವೆ. ದರ್ಶನ್ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. 

ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ.ಹೆಗಡೆ ನೇತೃತ್ವದಲ್ಲಿ ಆರೋಪಿಗಳ ಮತ್ತು ಸೊತ್ತು ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿ ಪಾಲ್ಗೊಂಡಿದ್ದರು.

The CCB police apprehended three individuals from Madikeri involved in the illicit sale of the narcotic substance MDMA.