Online Fraud, Mangalore Police: ‘ಸ್ಟಾರ್ ರೇಟಿಂಗ್’ ಟಾಸ್ಕ್ ಹೆಸರಲ್ಲಿ ವಂಚನೆ ; ಲಿಂಕ್ ಕ್ಲಿಕ್ ಮಾಡಿ ಮೂರೇ ದಿನದಲ್ಲಿ 21 ಲಕ್ಷ ರೂ.ಲೂಟಿ,  ಅಕೌಂಟ್ ಫುಲ್ ಖಾಲಿ 

08-11-23 10:41 pm       Mangalore Correspondent   ಕ್ರೈಂ

ಟೆಲಿಗ್ರಾಂ ಆ್ಯಪ್‌ನಲ್ಲಿ ‘ಸ್ಟಾರ್ ರೇಟಿಂಗ್’ ಟಾಸ್ಕ್ ನೀಡಿ 21.51 ಲ.ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಮಂಗಳೂರು, ನ.8: ಟೆಲಿಗ್ರಾಂ ಆ್ಯಪ್‌ನಲ್ಲಿ ‘ಸ್ಟಾರ್ ರೇಟಿಂಗ್’ ಟಾಸ್ಕ್ ನೀಡಿ 21.51 ಲ.ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ನ.4ರಂದು ತನ್ನ ವಾಟ್ಸ್‌ಆ್ಯಪ್ ಗೆ +84334590184 ಸಂಖ್ಯೆಯಿಂದ ಬಂದ ಮೆಸೇಜ್‌ನಲ್ಲಿ ಲಿಂಕ್ ತೆರೆದಾಗ ತನ್ನ ಸಂಖ್ಯೆ ಟೆಲಿಗ್ರಾಂ ಆ್ಯಪ್‌ಗೆ ಓಪನ್ ಆಗಿದೆ. ಬಳಿಕ ತನಗೆ ಸ್ಟಾರ್ ರೇಟಿಂಗ್ ಆ್ಯಪ್ ಮೂಲಕ ಟಾಸ್ಕ್ ಪೂರ್ಣಗೊಳಿಸಿ ಹಣ ಗಳಿಸುವಂತೆ ಸೂಚಿಸಲಾಯಿತು. ಅದನ್ನು ನಂಬಿದ ತಾನು 5,000 ರೂ. ಸಂದಾಯ ಮಾಡಿದರು. ಅದಕ್ಕೆ ಪ್ರತಿಯಾಗಿ ತನ್ನ ಖಾತೆಗೆ 6,500 ರೂ. ಜಮೆಯಾಯಿತು.

ಬಳಿಕ ಗ್ರೂಪ್ ಮರ್ಚೆಂಟ್ ಟಾಸ್ಕ್ ಪೂರ್ಣಗೊಳಿಸಲು ಸೂಚಿಸಲಾಯಿತು. ಅದಕ್ಕೆ ಹಣ ಪಾವತಿಸಿದರೆ ಹೆಚ್ಚು ಹಣ ವಾಪಸ್ ನೀಡುವುದಾಗಿ ತಿಳಿಸಲಾಯಿತು. ಅದನ್ನು ನಂಬಿದ ತಾನು ಮತ್ತಷ್ಟು ಹಣ ಪಾವತಿಸಿದೆ. ಬಳಿಕ ತನ್ನ ಖಾತೆಯಿಂದ ಹಂತ ಹಂತವಾಗಿ ನ.4ರಿಂದ ನ.7ರವರೆಗೆ 21.51 ಲ.ರೂ. ಹಣವನ್ನು ಅಕ್ರಮ ವಾಗಿ ವರ್ಗಾಯಿಸಿಕೊಂಡು ವಂಚಿಸಲಾಗಿದೆ.

Online fraud man looses 21 lakhs in Mangalore in the name of Star Rating. Case filed at CEN police station.