Union bank manager arrested in Haver: ಬ್ಯಾಂಕ್‍ನಲ್ಲಿ ಗ್ರಾಹಕರ ಎಫ್‍ಡಿಗೆ , ಚಿನ್ನದ ಲೋನ್‍ನ ಹಣಕ್ಕೆ ಇಲ್ಲ ರಶೀದಿ ; 1.62 ಕೋಟಿ ರೂ. ವಂಚನೆ, ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

09-11-23 04:01 pm       HK News Desk   ಕ್ರೈಂ

ಬ್ಯಾಂಕ್‍ನ ಗ್ರಾಹಕರ ಎಫ್‍ಡಿ ಹಣ, ಚಿನ್ನದ ಲೋನ್‍ನ ಹಣ ಸೇರಿದಂತೆ ಗ್ರಾಹಕರ ಖಾತೆಗೆ ಹಾಕಿದ್ದ ಹಣವನ್ನು ವಂಚನೆ ಮಾಡಿರುವ ಕುರುಬಗೊಂಡು ಗ್ರಾಮದ ಯೂನಿಯನ್ ಬ್ಯಾಂಕ್‍ನ ಹಳೆಯ ಮ್ಯಾನೇಜರ್‌ನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ, ನ 09: ಬ್ಯಾಂಕ್‍ನ ಗ್ರಾಹಕರ ಎಫ್‍ಡಿ ಹಣ, ಚಿನ್ನದ ಲೋನ್‍ನ ಹಣ ಸೇರಿದಂತೆ ಗ್ರಾಹಕರ ಖಾತೆಗೆ ಹಾಕಿದ್ದ ಹಣವನ್ನು ವಂಚನೆ ಮಾಡಿರುವ ಕುರುಬಗೊಂಡು ಗ್ರಾಮದ ಯೂನಿಯನ್ ಬ್ಯಾಂಕ್‍ನ ಹಳೆಯ ಮ್ಯಾನೇಜರ್‌ನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಅರ್ಚನಾ ಬೇಟಗೇರಿ ಎಂದು ಗುರುತಿಸಲಾಗಿದೆ. ಬ್ಯಾಂಕ್‍ನಲ್ಲಿ ಗ್ರಾಹಕರ ಎಫ್‍ಡಿ ಹಣ, ಚಿನ್ನದ ಲೋನ್ ಹಣ ಹಾಗೂ ಖಾತೆಗೆ ಜಮೆ ಮಾಡಿದ ಹಣಕ್ಕೆ ರಶೀದಿ ಹಾಗೂ ಎಫ್‍ಡಿಗೆ ಬಾಂಡ್ ನೀಡದೆ ವಂಚಿಸಲಾಗಿದೆ ಎಂದು ತಿಳಿದು ಬಂದಿದೆ. ಗ್ರಾಹಕರ ಸುಮಾರು 1.62 ಕೋಟಿ ರೂ ಹಣವನ್ನು ಆರೋಪಿ ವಂಚಿಸಿದ್ದಾಳೆ ಎಂದು ತಿಳಿದು ಬಂದಿದೆ.

ನೂತನ ಬ್ಯಾಂಕ್ ಮ್ಯಾನೇಜರ್ ರವಿರಾಜ್ ಈ ಸಂಬಂಧ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಸಿಸ್ಟೆಂಟ್ ಮ್ಯಾನೇಜರ್ ಸೇರಿ ಬ್ಯಾಂಕ್‍ನ ಇಬ್ಬರು ಸಿಬ್ಬಂದಿ ಶಾಂತಪ್ಪ ಮತ್ತು ಪ್ರವೀಣ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಂಧಿತ ಆರೋಪಿ ಅರ್ಚನಾ ಬೇಟಗೇರಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲು ಪೊಲೀಸರು ಕ್ರಮಕೈಗೊಂಡಿದ್ದಾರೆ.

Union bank manager arrested in Haveri for duping people of 1.6 crores.