Bangalore, Gold smuggled, Kempegowda International Airport: ಬೆಂಗಳೂರು ; ಅಂಡರ್‌ವೇರ್‌ ಒಳಗೆ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಣೆ, 55 ಲಕ್ಷ ಮೌಲ್ಯದ ಗೋಲ್ಡ್ ವಶಕ್ಕೆ 

12-12-23 06:26 pm       Bangalore Correspondent   ಕ್ರೈಂ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ  ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು, ಡಿ 12: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ  ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕನ ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಕೆಂಪೇಗೌಡ ಏರ್ ಪೋರ್ಟ್‍ಗೆ ಆಗಮಿಸಿದ್ದ ಪ್ರಯಾಣಿಕನನ್ನು ಚೆಕ್ಕಿಂಗ್ ಮಾಡಿದ ವೇಳೆ ಕಸ್ಟಮ್ಸ್ ಅಧಿಕಾರಿಗಳಿಗೆ ಅನುಮಾನ ಬಂದಿದೆ. ಹೀಗಾಗಿ ಆತನನ್ನು ತೀವ್ರ ತಪಾಸಣೆ ನಡೆಸಿದಾಗ ಪೇಸ್ಟ್ ರೂಪದಲ್ಲಿ ಚಿನ್ನವನ್ನ ಪ್ಯಾಂಟ್ ನ ಸೊಂಟದ ನಡುವೆ ಮರೆಮಾಚಿ ಸಾಗಾಟಕ್ಕೆ ಯತ್ನಿಸಿದ್ದು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಸದ್ಯ ವಿದೇಶಿ ಪ್ರಯಾಣಿಕನ ಬಳಿ 55 ಲಕ್ಷ ಮೌಲ್ಯದ 907 ಗ್ರಾಂ ತೂಕದ ಚಿನ್ನ ಸೀಜ್ ಮಾಡಿದ್ದಾರೆ.

Customs officials at the Kempegowda International Airport (KIA) have arrested a passenger who was transporting gold illegally in undergarments.