LiquorTalapady border, Mangalore: ತಲಪಾಡಿ ಗಡಿಯಲ್ಲಿ ಭಾರೀ ಪ್ರಮಾಣದ ಅಕ್ರಮ ಸಾರಾಯಿ ಘಟಕ ಪತ್ತೆ ; ಮನೆಯಲ್ಲೇ ಸ್ಪಿರಿಟ್ ತಯಾರಿಸಿ ಕೇರಳಕ್ಕೆ ಮಾರಾಟ, ಅಬಕಾರಿ ದಾಳಿ ಬೆನ್ನಲ್ಲೇ ಆರೋಪಿ ಪರಾರಿ 

12-12-23 10:59 pm       Mangalore Correspondent   ಕ್ರೈಂ

ಅಬಕಾರಿ ಅಧಿಕಾರಿಗಳ ಮಹತ್ವದ ಕಾರ್ಯಾಚರಣೆಯಲ್ಲಿ ಕೇರಳ ಗಡಿಭಾಗ ತಲಪಾಡಿಯಲ್ಲಿ ನಡೆಯುತ್ತಿದ್ದ ಅಂತರಾಜ್ಯ ಮಟ್ಟದ ಬೃಹತ್ ಸ್ಪಿರಿಟ್ ತಯಾರಿ ಮತ್ತು ಮಾರಾಟ ದಂಧೆ ಪತ್ತೆಯಾಗಿದ್ದು ಎರಡು ಸಾವಿರಕ್ಕೂ ಹೆಚ್ಚು ಲೀಟರ್ ಸಾರಾಯಿ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ. 

ಮಂಗಳೂರು, ಡಿ.12: ಅಬಕಾರಿ ಅಧಿಕಾರಿಗಳ ಮಹತ್ವದ ಕಾರ್ಯಾಚರಣೆಯಲ್ಲಿ ಕೇರಳ ಗಡಿಭಾಗ ತಲಪಾಡಿಯಲ್ಲಿ ನಡೆಯುತ್ತಿದ್ದ ಅಂತರಾಜ್ಯ ಮಟ್ಟದ ಬೃಹತ್ ಸ್ಪಿರಿಟ್ ತಯಾರಿ ಮತ್ತು ಮಾರಾಟ ದಂಧೆ ಪತ್ತೆಯಾಗಿದ್ದು ಎರಡು ಸಾವಿರಕ್ಕೂ ಹೆಚ್ಚು ಲೀಟರ್ ಸಾರಾಯಿ ಸ್ಪಿರಿಟ್ ವಶಕ್ಕೆ ಪಡೆಯಲಾಗಿದೆ. 

ಕೇರಳ ಗಡಿಭಾಗ ಕಿನ್ಯಾ ಗ್ರಾಮದ ಸಾಂತ್ಯ ಎಂಬಲ್ಲಿ ಅಕ್ರಮ ಸಾರಾಯಿ ತಯಾರಿಸುತ್ತಿದ್ದ ಮನೆಗೆ ಅಬಕಾರಿ ಪೊಲೀಸರು ಮಂಗಳವಾರ ಸಂಜೆ ದಾಳಿ ನಡೆಸಿದ್ದಾರೆ. ಬೃಹತ್ ಮಟ್ಟದಲ್ಲಿ ಸಾರಾಯಿ ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು ಈ ವೇಳೆ, ಪ್ರಮುಖ ಆರೋಪಿ ನಿತ್ಯಾನಂದ ಭಂಡಾರಿ ಸ್ಥಳದಿಂದ ಪರಾರಿಯಾಗಿದ್ದಾನೆ‌. 

ಪೊಲೀಸರು 2240 ಲೀಟರ್ ಮದ್ಯ ಸ್ಪಿರಿಟ್, 222 ಲೀಟರ್ ನಕಲಿ ಬ್ರಾಂಡಿ ಸೇರಿದಂತೆ ಮದ್ಯ ತಯಾರಿಕೆಗೆ ಬಳಸಿದ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಮದ್ಯವನ್ನು ತಯಾರಿಸಿ ಕೇರಳ ರಾಜ್ಯಕ್ಕೆ ಸಾಗಿಸಿ ಮಾರಾಟ ನಡೆಸುತ್ತಿದ್ದರು ಎನ್ನಲಾಗಿದೆ. ಅಬಕಾರಿ ದಳದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ 25 ಕ್ಕೂ ಅಧಿಕ ಸಿಬಂದಿ ಭಾಗಿಯಾಗಿದ್ದರು.‌ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು.

2240 litres of liquor seized at Talapdy border by Police in Mangalore.