ಬ್ರೇಕಿಂಗ್ ನ್ಯೂಸ್
14-12-23 07:05 pm Mangalore Correspondent ಕ್ರೈಂ
ಉಳ್ಳಾಲ, ಡಿ.14: ತಂಗಿಯ ಅನುಕೂಲಕ್ಕಾಗಿ ಮಂಗಳೂರಿನ ಕಾವೂರಿನ ಬಾಡಿಗೆ ಮನೆಗೆ ಕುಟುಂಬ ಸಮೇತ ಸ್ಥಳಾಂತರಗೊಳ್ಳಲು ಸಿದ್ಧತೆಯಲ್ಲಿದ್ದ ಕೊಲ್ಯ ನಿವಾಸಿ ವರುಣ್ ಗಟ್ಟಿ ನಿನ್ನೆ ರಾತ್ರಿ ದಾರುಣವಾಗಿ ಕೊಲೆಯಾಗಿದ್ದು ಕೊಲೆ ಆರೋಪಿಗಳನ್ನ ಉಳ್ಳಾಲ ಪೊಲೀಸರು ಕ್ಷಿಪ್ರವಾಗಿ ಬಂಧಿಸಿದ್ದಾರೆ.
ವರುಣ್ ಗೆ ಇರಿದು ಕೊಲೆ ಮಾಡಿದ ಕೊಲ್ಯ ಸಾರಸ್ವತ ಕಾಲನಿ ನಿವಾಸಿ ಸೂರಜ್ ಮತ್ತು ಆತನೊಂದಿಗಿದ್ದ ಮಾಜಿ ಗ್ರಾ.ಪಂ ಸದಸ್ಯ ರವಿರಾಜ್ ಎಂಬವರನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ಸುಮಾರು 10.45ರ ವೇಳೆಗೆ ಕೊಲ್ಯದ ಜಾಯ್ ಲ್ಯಾಂಡ್ ಆಂಗ್ಲ ಮಾಧ್ಯಮ ಶಾಲೆಯ ಎದುರುಗಡೆಯಲ್ಲಿ ಸೂರಜ್ ಮತ್ತು ರವಿರಾಜ್ ಎಂಬವರು ಬಿಯರ್ ಕುಡಿದು ಬಾಟಲಿಯನ್ನ ಶಾಲಾ ಆವರಣ ಗೋಡೆಗೆ ಎಸೆದಿದ್ದರೆನ್ನಲಾಗಿದೆ. ಈ ವೇಳೆ ಅಲ್ಲೇ ಸಮೀಪದ ಬಾಡಿಗೆ ಮನೆ ನಿವಾಸಿ ವರುಣ್ ಮತ್ತು ಆತನ ಸ್ನೇಹಿತ ಅಕ್ಷಯ್ ಶಾಲೆಯ ಆವರಣ ಗೋಡೆಗೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಇತ್ತಂಡಗಳ ನಡುವೆ ಗಲಾಟೆ ನಡೆದಿದ್ದು ಸೂರಜ್ ಏಕಾಏಕಿ ವರುಣ್ ನ ಎಡ ಪಕ್ಕೆಲುಬು ಮತ್ತು ಎದೆ ಭಾಗಕ್ಕೆ ಹರಿತವಾದ ಆಯುಧದಿಂದ ಇರಿದಿದ್ದಾನೆ. ಒಂದೆರಡು ಇರಿತಕ್ಕೆ ಗಂಭೀರ ಗಾಯಗೊಂಡ ವರುಣ್ ಸಮೀಪದ ತನ್ನ ಮನೆ ಕಡೆ ಹೆಜ್ಜೆ ಹಾಕಿದ್ದು ರಸ್ತೆಯುದ್ದಕ್ಕೂ ರಕ್ತ ಚೆಲ್ಲಿದೆ. ಬಳಿಕ ಆಸ್ಪತ್ರೆಯಲ್ಲಿ ವರುಣ್ ಕೊನೆಯುಸಿರೆಳೆದಿದ್ದಾನೆ. ಒಂದೆರಡು ಇರಿತಕ್ಕೆ ವರುಣ್ ಸಾವುಗೀಡಾಗಲು ಆರೋಪಿ ಸೂರಜ್ ಅದ್ಯಾವ ಆಯುಧ ಬಳಸಿದ್ದಾನೆ ಎಂಬ ಬಗ್ಗೆ ಸಂಶಯಗಳಿವೆ. ಕೋಳಿ ಅಂಕದಲ್ಲಿ ಕೋಳಿಗಳ ಕಾಲಿಗೆ ಕಟ್ಟುವ ಹರಿತವಾದ ಬಾಲ್ (ಸಣ್ಣ ಚೂರಿ) ಬಳಸಿದ್ದ ಎನ್ನುವ ಮಾಹಿತಿಯೂ ಕೇಳಿಬರುತ್ತಿದೆ. ಪೊಲೀಸರು ಇನ್ನಷ್ಟೆ ಕೊಲೆಗೆ ಬಳಸಿದ್ದ ಆಯುಧವನ್ನ ದಸ್ತಗಿರಿ ಮಾಡಬೇಕಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಕಮೀಷನರ್ ಅನುಪಮ್ ಅಗರ್ ವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಮಹಜರು ನಡೆಸುವ ಸಲುವಾಗಿ ದಿನವಿಡೀ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದ್ದು ಜಾಯ್ ಲ್ಯಾಂಡ್ ಶಾಲಾ ಮಕ್ಕಳಿಗೂ ಶಾಲಾಡಳಿತ ರಜೆ ಘೋಷಿಸಿತ್ತು. ಸಂಜೆ ವೇಳೆ ಮೃತ ವರುಣ್ ನ ಮೃತದೇಹದ ಅಂತ್ಯಕ್ರಿಯೆ ನಡೆದಿದೆ.
ನಾಳೆಯೇ ಮನೆ ಬದಲಿಸಲಿದ್ದರು !
ಕೊಲ್ಯ ಜಾಯ್ ಲ್ಯಾಂಡ್ ಶಾಲೆ ಬಳಿಯ ಬಾಡಿಗೆ ಮನೆ ನಿವಾಸಿಗಳಾದ ಬಾಲಕೃಷ್ಣ ಗಟ್ಟಿ, ಸುಮಿತ್ರ ದಂಪತಿಯ ಮೂವರು ಮಕ್ಕಳಲ್ಲಿ ಮೃತ ವರುಣ್ ಮನೆಯ ಹಿರಿ ಮಗನಾಗಿದ್ದು ಮೂಡಾಡಲ್ಲಿ ಕಮೀಷನರ್ ಅವರ ವಾಹನ ಚಾಲಕನಾಗಿದ್ದ. ವರುಣ್ ತಂಗಿ ವರ್ಷಾ ಮಂಗಳೂರು ವಿಮಾನ ನಿಲ್ದಾಣದಲ್ಲಿ ಉದ್ಯೋಗಿಯಾಗಿದ್ದು ಆಕೆಯ ಅನುಕೂಲಕ್ಕಾಗಿ ನಾಳೆ (ಡಿ.15) ಶುಕ್ರವಾರ ಕಾವೂರಿನ ನೂತನ ಬಾಡಿಗೆ ಮನೆಗೆ ಸ್ಥಳಾಂತರಗೊಳ್ಳಲು ಕುಟುಂಬ ಸಿದ್ಧತೆ ನಡೆಸಿತ್ತು. ಆದರೆ ಮನೆಮಗನ ಅಕಾಲಿಕ ಮರಣವು ಕುಟುಂಬವನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ.
Mangalore Ullal murder near school, two arrested over beer bootle. Police commissioner Agarwal visited the spot and spoke to the family.
21-07-25 10:38 pm
Bangalore Correspondent
"Divine Drama: Archbishop, Justices Join Hand...
21-07-25 05:56 pm
SIT, Dharmasthala Case, Dk Shivakumar: ಧರ್ಮಸ್...
21-07-25 01:31 pm
Tulu Nadu High Court Advocates, Bangalore; ಯೇ...
21-07-25 04:16 am
ಅಣ್ಣಾಮಲೈಗೆ ಬಿಜೆಪಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಕ...
20-07-25 08:35 pm
21-07-25 11:23 pm
HK News Desk
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
Jagdeep Dhankhar; ಆರೋಗ್ಯ ಸಮಸ್ಯೆ ; 74 ವರ್ಷದ ಉಪ...
21-07-25 10:41 pm
ಬಾಂಗ್ಲಾ ರಾಜಧಾನಿ ಢಾಕಾದಲ್ಲಿ ವಾಯುಪಡೆ ತರಬೇತಿ ವಿಮಾ...
21-07-25 09:56 pm
ತನ್ನ ಜೊತೆಗೆ ಲಿವ್ ಇನ್ ರಿಲೇಶನ್ನಲ್ಲಿದ್ದ ಎಎಸ್ಐ ಯು...
20-07-25 04:47 pm
21-07-25 06:42 pm
Mangalore Correspondent
ಉಳ್ಳಾಲಕ್ಕೆ ಎರಡು ಅಲ್ಪಸಂಖ್ಯಾತ ಹೆಣ್ಮಕ್ಕಳ ವಸತಿಯುತ...
21-07-25 03:11 pm
ತನಿಖೆ ಆಗೋ ಸಂದರ್ಭದಲ್ಲಿ ನಿರ್ಣಯಕ್ಕೆ ಬರೋದಲ್ಲ, ಪವಿ...
21-07-25 02:11 pm
Dharmasthala SIT, Parshwanath Jain; ಸರ್ಕಾರದ ಎ...
21-07-25 04:03 am
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
21-07-25 11:01 pm
HK News Desk
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm
S T Srinivas, Ankola Port Scam: ಅಂಕೋಲಾ ಕೇಣಿಯಲ...
20-07-25 08:52 pm
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm