Bengaluru, businessman honeytrapped: ಬೆಂಗಳೂರು ಕೋಟ್ಯಧಿಪತಿ ಉದ್ಯಮಿಗೆ ಹನಿಟ್ರ್ಯಾಪ್‌ ಮಾಡಿ ಬ್ಲ್ಯಾಕ್‌ಮೇಲ್, ಪತ್ನಿಯನ್ನೇ ರೂಮ್ ಗೆ ಕಳುಹಿಸಿ ಉದ್ಯಮಿಯ ಟ್ರ್ಯಾಪ್ ; ಗಂಡ ಹೆಂಡತಿ ಸೇರಿ 6 ಮಂದಿ ಸಿಸಿಬಿ ಬಲೆಗೆ 

16-12-23 04:48 pm       Bangalore Correspondent   ಕ್ರೈಂ

ಉದ್ಯಮಿಯೊಬ್ಬನನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗಂಡ-ಹೆಂಡತಿ ಮತ್ತು ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ಬೆಂಗಳೂರು, ಡಿ 16: ಉದ್ಯಮಿಯೊಬ್ಬನನ್ನು ಹನಿಟ್ರ್ಯಾಪ್‌ಗೆ ಬೀಳಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಗಂಡ-ಹೆಂಡತಿ ಮತ್ತು ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.

ಖಲೀಮ್ ಮತ್ತು ಸಭಾ ದಂಪತಿ ಸೇರಿಕೊಂಡು ಉದ್ಯಮಿಗೆ ಗಾಳ ಹಾಕಿ ಹನಿಟ್ರ‍್ಯಾಪ್ ಮಾಡಿದ್ದರು. ಎರಡು ತಿಂಗಳ ಹಿಂದೆ ಅತಾವುಲ್ಲಾ ಎಂಬವರನ್ನು ಖಲೀಮ್ ಪರಿಚಯ ಮಾಡಿಕೊಂಡಿದ್ದ. ಈ ವೇಳೆ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಕೆಲ ದಿನಗಳ ಬಳಿಕ ಅತಾವುಲ್ಲಾಗೆ ಕರೆ ಮಾಡಿ ಸಭಾಳನ್ನ ಪರಿಚಯಿಸಿದ್ದ.

ಖಲೀಮ್ ಮತ್ತು ಸಭಾ ದಂಪತಿ ಸೇರಿಕೊಂಡು ಉದ್ಯಮಿಗೆ ಗಾಳ ಹಾಕಿ ಹನಿಟ್ರ‍್ಯಾಪ್ ಮಾಡಿದ್ದರು. ಎರಡು ತಿಂಗಳ ಹಿಂದೆ ಅತಾವುಲ್ಲಾ ಎಂಬವರನ್ನು ಖಲೀಮ್ ಪರಿಚಯ ಮಾಡಿಕೊಂಡಿದ್ದ. ಈ ವೇಳೆ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಕೆಲ ದಿನಗಳ ಬಳಿಕ ಅತಾವುಲ್ಲಾಗೆ ಕರೆ ಮಾಡಿ ಸಭಾಳನ್ನ ಪರಿಚಯಿಸಿದ್ದ.

ಈಕೆ ವಿಧವೆ ಜೊತೆಯಲ್ಲಿರು ಅಂತಾ ಪರಿಚಯಿಸಿದ್ದ. ಈ ವೇಳೆ ಅತಾವುಲ್ಲಾನನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ಕಳೆದ ನವೆಂಬರ್ 14 ರಂದು ಅತಾವುಲ್ಲಾಗೆ ಫೋನ್ ಮಾಡಿದ್ದ ಸಭಾ,‌ ‘ಆರ್.ಆರ್. ನಗರದ ಬಳಿ ಬಾ.. ಬರುವಾಗ ರೂಂ ಬುಕ್ ಮಾಡಲು ಆಧಾರ್ ತರುವಂತೆ’ ಹೇಳಿದ್ದಳು. ಪ್ಲ್ಯಾನ್‌ನಂತೆ ಇತ್ತ ಸಭಾ ಹಾಗು ಅತಾವುಲ್ಲಾ ಜೊತೆಯಲ್ಲಿದ್ದಾಗ ಗಂಡನ ಹನಿಟ್ರ‍್ಯಾಪ್ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು.

ಒಬೇದ್ ಖಾನ್ ಎಂಬಾತ ಇಬ್ಬರನ್ನ ತಡೆದು ಸೀನ್ ಕ್ರಿಯೇಟ್ ಮಾಡಿದ್ದಾನೆ. ಖಲೀಮ್, ರಕೀಬ್, ಅತೀಕ್‌ನನ್ನ ಸ್ಥಳಕ್ಕೆ ಕರೆಸಿ ಧಮ್ಕಿ ಹಾಕಿದ್ದ. ನಿಮ್ಮ ವಿಚಾರ ಮನೆಯವರಿಗೆ ತಿಳಿಸುವುದಾಗಿ ಹೆದರಿಸಿ ಜೇಬಲ್ಲಿದ್ದ 4,000 ರೂ. ಹಣವನ್ನು ಗ್ಯಾಂಗ್ ಕಸಿದಿತ್ತು. ಅಲ್ಲದೆ 6 ಲಕ್ಷ ರೂ. ಹಣ ತರುವಂತೆ ಧಮ್ಕಿ ಹಾಕಿತ್ತು.

ಈ ವೇಳೆ ಅತೀವುಲ್ಲಾ ಅಲ್ಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆ ಹೋಟೆಲ್‌ಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು, ರೆಡ್ ಹ್ಯಾಂಡ್ ಆಗಿ ಹನಿಟ್ರ್ಯಾಪ್ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು ಸರಣಿ ಹನಿ ಟ್ರ್ಯಾಪಿಂಗ್ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

A man-wife duo and a gang have been caught by the police for honeytrapping a businessman and blackmailing him for money.