Tumakuru, cheats man: ಫೇಸ್‌ಬುಕ್ ನಲ್ಲಿ ತನ್ನನ್ನು ಹುಡುಗಿಯೆಂದು ಬಿಂಬಿಸಿ ಸಲುಗೆ ; 7 ಲಕ್ಷ ಪೀಕಿಸಿ ಸಿಕ್ಕಿಬಿದ್ದ ತೀರ್ಥಹಳ್ಳಿಯ ಯುವಕ

16-12-23 10:56 pm       HK News Desk   ಕ್ರೈಂ

ಫೇಸ್‌ಬುಕ್ ನಲ್ಲಿ ತನ್ನನ್ನು ಹುಡುಗಿಯೆಂದು ಬಿಂಬಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಯುವಕನೊಬ್ಬ ತುಮಕೂರು ಜಿಲ್ಲೆಯ ಶಿರಾ ಗೇಟ್​ನಿವಾಸಿ ಯುವಕನೊಬ್ಬನಿಗೆ 7.25 ಲಕ್ಷ ರೂ. ವಂಚಿಸಿದ್ದಾನೆ.

ತುಮಕೂರು, ಡಿ.16: ಫೇಸ್‌ಬುಕ್ ನಲ್ಲಿ ತನ್ನನ್ನು ಹುಡುಗಿಯೆಂದು ಬಿಂಬಿಸಿಕೊಂಡಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದ ಯುವಕನೊಬ್ಬ ತುಮಕೂರು ಜಿಲ್ಲೆಯ ಶಿರಾ ಗೇಟ್​ನಿವಾಸಿ ಯುವಕನೊಬ್ಬನಿಗೆ 7.25 ಲಕ್ಷ ರೂ. ವಂಚಿಸಿದ್ದಾನೆ.

ತೀರ್ಥಹಳ್ಳಿ ಯುವಕನ ವಿರುದ್ಧ ದಾಖಲಾದ ದೂರಿನಂತೆ ತುಮಕೂರು ಪೊಲೀಸರು ತೀರ್ಥಹಳ್ಳಿಯ ಆರೋಪಿಯನ್ನು ಹುಡುಕಿ ಅರೆಸ್ಟ್ ಮಾಡಿದ್ದಾರೆ. 21 ವರ್ಷದ ಯುವಕ ಆರೋಪಿಯಾಗಿದ್ದು, ಸದ್ಯ ಪೊಲೀಸರು ಈ ಜಾಲದಲ್ಲಿ ಇನ್ಯಾರೆಲ್ಲ ಇದ್ದಾರೆ ಎಂಬ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. 

ಹುಡುಗಿ ಹೆಸರಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ, ಗೆಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಈ ವ್ಯಕ್ತಿ, ಆನಂತರ ವಾಟ್ಸ್ಯಾಪ್​ ಸಂಪರ್ಕದ ಮೂಲಕ ಸಲುಗೆಯಿಂದ ವರ್ತಿಸುತ್ತಿದ್ದ. ಬಳಿಕ ಕಥೆ ಕಟ್ಟಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದ. 

ಆರೋಪಿ ಯುವಕ ಶರ್ಮಿಳಾ ಮತ್ತು ದಿವ್ಯಾ ಎಂಬ ಹೆಸರಿನಲ್ಲಿ ಫೇಸ್​ಬುಕ್ ಮೆಸೆಂಜರ್​ ಹಾಗೂ ವಾಟ್ಸ್ಯಾಪ್​ನಲ್ಲಿ ಸಂತ್ರಸ್ತ ಯುವಕರನ್ನು ಪರಿಚಯ ಮಾಡುತ್ತಿದ್ದರಂತೆ. ಈತನ ಜೊತೆಗೆ ಇನ್ನೊಂದಿಷ್ಟು ಆರೋಪಿಗಳು ಇರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಗ ಹಣ ಕಳೆದುಕೊಂಡು ಖಿನ್ನತೆಗೆ ಒಳಗಾಗಿರುವುದನ್ನು ಗಮನಿಸಿದ ತಂದೆ ಈ ಕುರಿತು ಕಳೆದ ಆಗಸ್ಟ್​ 15 ರಂದು ಸಿಇಎನ್​ ಪೊಲೀಸ್ ಸ್ಟೇಷನ್​ಗೆ ತುಮಕೂರಿನಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಈಗ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

The Cyber Economics and Narcotics (CEN) crime police have arrested a youth who posed as a girl and cheated another youth of `7.25 lakh. Accused Sujendra (21), who works at a bakery in Thirthahalli town of Shivamogga district, had befriended Bharat Kumar, a resident of Vidyanagara in Sira town, posing as a girl using a fake Facebook account.