Udupi Clinic Raid, fake doctor: ಉಡುಪಿ ; ಬಿಕಾಂ ಓದಿ ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡತ್ತಿದ್ದ ನಕಲಿ ಡಾಕ್ಟರ್ ; ಆರೋಗ್ಯಾಧಿಕಾರಿಗಳ ದಾಳಿ, ಶ್ರೀಸೂರ್ಯನಾರಾಯಣ ಸ್ವಾಮಿ ಕ್ಲಿನಿಕ್ ಜಪ್ತಿ 

17-12-23 08:56 pm       Udupi Correspondent   ಕ್ರೈಂ

ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್​ಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ವೇಳೆ ತಾನು ವೈದ್ಯನೆಂದು ಹೇಳಿಕೊಂಡು ಬ್ರಹ್ಮಾವರ ತಾಲೂಕಿನ ಕಂಬಳಗದ್ದೆ ಕ್ರಾಸ್​ನ ಕುಂಜಾಲಿನಲ್ಲಿ ಕ್ಲಿನಿಕ್ ಇಟ್ಟುಕೊಂಡು ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಬಿಕಾಂ ಪದವೀಧರನೊಬ್ಬ ಸಿಕ್ಕಿಬಿದ್ದಿದ್ದಾನೆ.

ಉಡುಪಿ, ಡಿ.17: ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್​ಗಳ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಈ ವೇಳೆ ತಾನು ವೈದ್ಯನೆಂದು ಹೇಳಿಕೊಂಡು ಬ್ರಹ್ಮಾವರ ತಾಲೂಕಿನ ಕಂಬಳಗದ್ದೆ ಕ್ರಾಸ್​ನ ಕುಂಜಾಲಿನಲ್ಲಿ ಕ್ಲಿನಿಕ್ ಇಟ್ಟುಕೊಂಡು ಆಯುರ್ವೇದಿಕ್, ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ಬಿಕಾಂ ಪದವೀಧರನೊಬ್ಬ ಸಿಕ್ಕಿಬಿದ್ದಿದ್ದಾನೆ.

ಬಿಕಾಂ ಪದವಿ ಪಡೆದಿರುವ ಸಂದೇಶ್ ರಾವ್ ಕುಂಜಾಲಿನಲ್ಲಿ ಶ್ರೀಸೂರ್ಯನಾರಾಯಣ ಸ್ವಾಮಿ ಹೆಸರಿನ ಆಯುರ್ವೇದಿಕ್ ಕೇಂದ್ರ ತೆರೆದು ಚಿಕಿತ್ಸೆ ನೀಡುತ್ತಿದ್ದನು. ಈ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳು ದಾಳಿ ನಡೆಸಿದಾಗ ಸಂದೇಶ್ ರಾವ್ ವೈದ್ಯನಲ್ಲ, ಆತ ನಕಲಿ ವೈದ್ಯ ಎಂದು ತಿಳಿದುಬಂದಿದೆ. ಸದ್ಯ, ಕ್ಲಿನಿಕ್ ಜಪ್ತಿ ಮಾಡಿದ ಆರೋಗ್ಯಾಧಿಕಾರಿಗಳು, ಆರೋಪಿ ವಿರುದ್ಧ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.

ಲ್ಯಾಬ್, ಕ್ಲಿನಿಕ್​ಗಳ ಮೇಲೆ ದಾಳಿ ಆರೋಗ್ಯಾಧಿಕಾರಿಗಳ ದಾಳಿ
ರಾಜ್ಯದಲ್ಲಿ ಭ್ರೂಣ ಹತ್ಯೆ ಕೇಸ್ ಪತ್ತೆ ಹಿನ್ನೆಲೆ ಆರೋಗ್ಯಾಧಿಕಾರಿಗಳು ಇಂದು ಜಿಲ್ಲೆಯ ಹಲವೆಡೆ ಲ್ಯಾಬ್, ಕ್ಲಿನಿಕ್​ಗಳ ಮೇಲೆ ದಾಳಿ ನಡೆಸಿದ್ದರು. ಉಡುಪಿ, ಕುಂದಾಪುರ ತಾಲೂಕಿನ ಏಳು ಕಡೆ ದಾಳಿ ನಡೆಸಿದಾಗ ನಕಲಿ ವೈದ್ಯರು, ಅನುಮತಿ ರಹಿತ ಕ್ಲಿನಿಕ್​ಗಳು ಪತ್ತೆಯಾಗಿವೆ. ಪರವಾನಗಿ ಇಲ್ಲದ ಲ್ಯಾಬ್, ಕ್ಲಿನಿಕ್ ಸೀಜ್​ ಮಾಡಿ ಕೆಪಿಎಂಇ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಪ್ಪುಂದದ ಸುಷ್ಮಾ ಕ್ಲಿನಿಕಲ್ ಲ್ಯಾಬ್​ ಸೀಜ್​ ಮಾಡಿ ಕೇಸ್​ ದಾಖಲು ಮಾಡಲಾಗಿದ್ದು, ಕುಂದಾಪುರದ ಬಯೋಲಿನ್ ಕ್ಲಿನಿಕಲ್ ಲ್ಯಾಬ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆರೂರಿನಲ್ಲಿ ಆರೋಗ್ಯಾಧಿಕಾರಿಗಳು ಒಂದು ಕ್ಲಿನಿಕ್ ಜಪ್ತಿ ಮಾಡಿದ್ದಾರೆ.

ಆಯುರ್ವೇದಿಕ್ ನೋಂದಣಿಯಲ್ಲಿ ಅಲೋಪತಿ ಕ್ಲಿನಿಕ್ ನಡೆಸುತ್ತಿದ್ದ ವಿಚಾರ ಪತ್ತೆಯಾಗಿದೆ. ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್, ನಾವುಂದದ ನಂಬಿಯಾರ್ ಕ್ಲಿನಿಕ್​ನಲ್ಲಿ ಅಲೋಪತಿ ಚಿಕಿತ್ಸೆ ನೀಡುತ್ತಿದ್ದ ವಿಚಾರ ತಿಳಿದುಬಂದಿದೆ.

Udupi Health Department raid on illegal clinics, B COM graduate arrested for posing as Ayurveda doctor.