ಬ್ರೇಕಿಂಗ್ ನ್ಯೂಸ್
28-12-23 02:16 pm HK News Desk ಕ್ರೈಂ
ದಾವಣಗೆರೆ, ಡಿ.28: ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕು ಮದುವೆಯಾದ ಮಹಿಳೆ ತನ್ನ ಪತಿಗೆ ವಂಚಿಸಲು ಯತ್ನಿಸಿದ ಘಟನೆಯೊಂದು ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ.
ಗರ್ಭಿಣಿ ಅಂತ ತವರಿಗೆ ಹೋಗಿ ಮತ್ತೊಂದು ಮದುವೆಯಾಗಲು ಯತ್ನಿಸಿದ್ದಾಳೆ. ಈ ಬಗ್ಗೆ 3ನೇ ಪತಿ ಪೊಲೀಸರಿಗೆ ದೂರು ನೀಡಿದ್ದಾನೆ.
ಗಂಡ ಪ್ರಶಾಂತ್ ತನ್ನ ಪತ್ನಿ ಮಿಸ್ಸಿಂಗ್ ಎಂದು ಪೊಲೀಸ್ ಠಾಣೆಗೆ ತೆರಳಿ ಕೇಸ್ ದಾಖಲಿಸಿಕೊಂಡಿದ್ದಾನೆ. 2022 ಫೆ.22ಕರಂದು ಪ್ರಶಾಂತ್ ಜೊತೆ ಮಹಿಳೆಗೆ ಮದುವೆ ಆಗಿತ್ತು. ಇಬ್ಬರು ಪರಸ್ಪರ ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸುಮಾರು ಒಂದೂವರೆ ವರ್ಷದಿಂದ ಸಂಸಾರ ಮಾಡಿದ್ದರು.
ಮಹಿಳೆ ಫೇಸ್ಬುಕ್, ಇನ್ಸ್ಟಾಗ್ರಾಮ್ನಲ್ಲಿ ಆಗಾಗ ರೀಲ್ಸ್ ಮಾಡುತ್ತಿದ್ದಳು. ಆದರೆ 3 ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದ ಪತ್ನಿ ವಾಪಸ್ ಬಂದಿಲ್ಲ. ಮಾತ್ರವಲ್ಲದೆ, ಟ್ಯಾಬ್ಲೆಟ್ ಸಹಾಯದಿಂದ ಗರ್ಭಪಾತ ಮಾಡಿಕೊಂಡಿದ್ದಾಳೆಂದು ಪತಿ ಆರೋಪ ಮಾಡಿದ್ದಾನೆ.
ಇನ್ನು ಕಾಣೆಯಾಗಿದ್ದ ಪತ್ನಿಯನ್ನು ಹುಡುಕಿಕೊಂಡು ಬಂದ ಪತಿ ಪ್ರಶಾಂತ್ ದಾವಣಗೆರೆಯಲ್ಲಿ ದೂರು ನೀಡಿದ್ದಾನೆ. ಹೆಂಡತಿ ವಿರುದ್ಧ 420 ಕೇಸ್ ದಾಖಲಿಸಿದ್ದಾನೆ. ಡಿಸೆಂಬರ್ 21ರಂದು ದೂರು ನೀಡಿದ್ದಾನೆ. ಅತ್ತ ದಾವಣಗೆರೆಯಲ್ಲಿ ಪತಿ ದೂರುಕೊಟ್ಟಂತೆ ಇತ್ತ ಮಂಡ್ಯದಲ್ಲಿ ಪತ್ನಿ ಪ್ರತ್ಯಕ್ಷವಾಗಿದ್ದಾಳೆ. ನಾನು ನಾಲ್ಕು ಮದುವೆಯಾಗಿಲ್ಲ, ಮೂರು ಮದುವೆಯಾಗಿದ್ದೇನೆ ಎಂದು ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾಳೆ.
ಇನ್ನು ಪತಿ ಪ್ರಶಾಂತ್ ತನ್ನ ಹೆಂಡತಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾನೆ. ಮದುವೆಯಾಗಿ ವಂಚಿಸುವುದೇ ಕಾಯಕ ಮಾಡಿಕೊಂಡಿದ್ದಾಳೆ. ನಾಲ್ವರನ್ನು ಮದುವೆಯಾಗಿ ವಂಚಿನೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾನೆ.
ಮಹಿಳೆ ಮೈಸೂರು ಹತ್ತಿರದ ಬೆಳಗೊಳ ಹಾಗೂ ಬೆಂಗಳೂರಿನ ಯುವಕನನ್ನು ಈ ಮೊದಲು ವಿವಾಹವಾಗಿದ್ದಳು. ಬಳಿಕ ಪ್ರಶಾಂತ್ ಜೊತೆಗೆ ಮತ್ತೊಬ್ಬನನ್ನು ಮದುವೆಯಾಗಿ ವಂಚಸಿದ್ದಳು. 4ನೇ ಗಂಡನ ಜೊತೆ ಇದ್ದು ಬೇರೆ ಯುವಕನನ್ನು ಲವ್ ಮಾಡಿದ್ದಾಳೆ ಎಂದು ಪ್ರಶಾಂತ್ ಆರೋಪಿಸದ್ದಾನೆ.
ಹೆಂಡತಿಯ ವಿರುದ್ಧ ಪ್ರಶಾಂತ್ 420 ಕೇಸ್ ಸಹ ದಾಖಲಿಸಲು ಮುಂದಾಗಿದ್ದು, ರೀಲ್ಸ್ ನೋಡಿ ಯಾರು ಮೋಡಿಯಾಗಬೇಡಿ ಅಂತ ಪತಿರಾಯ ಪ್ರಶಾಂತ್ ಮನವಿ ಮಾಡಿಕೊಂಡಿದ್ದಾನೆ. ನನಗೆ ಆದ ಅನ್ಯಾಯ ಬೇರೆಯವರಿಗೆ ಆಗಬಾರದು ಅಂತ ದೂರು ನೀಡಿದ್ದಾನೆ. ರೀಲ್ಸ್ ನೋಡಿ ಮದುವೆ ಆದೆ, ಮೇಕಪ್ ನೋಡಿ ಮೋಸ ಹೋದೆ. ರೀಲ್ಸ್ ಸೌಂದರ್ಯಕ್ಕೆ ಮರುಳಾಗಬೇಡಿ ಎಂದು ಪ್ರಶಾಂತ್ ಮನವಿ ಮಾಡಿಕೊಂಡಿದ್ದಾನೆ.
A man from Davangere allegedly found out from a social media post that his missing wife was married to another man. Prashanth B found out that his wife Sneha alias Nirmala married another person named Raghu after he came across her new marriage photo on Instagram. Prashanth said that three months ago Sneha went to her parent’s house saying she was pregnant but went missing after that
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm