Ganja found near prisoner, Mysore: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲಿಗೆ ಹಿಂದಿರುಗುವ ವೇಳೆ ಕೈದಿ ಬಳಿ ಗಾಂಜಾ ಪತ್ತೆ ; ಎಂತ ಅವಸ್ಥೆ 

29-12-23 03:50 pm       HK News Desk   ಕ್ರೈಂ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲಿಗೆ ಹಿಂದಿರುಗುವ ವೇಳೆ ಕೈದಿಯೊಬ್ಬ ಗಾಂಜಾವನ್ನು ಬಚ್ಚಿಟ್ಟುಕೊಂಡು ಕಾರಾಗೃಹದ ಒಳಗೆ ಹೋಗುವ ಸಮಯದಲ್ಲಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬುಧವಾರ ನಡೆದಿದೆ.

ಮೈಸೂರು, ಡಿ.29: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲಿಗೆ ಹಿಂದಿರುಗುವ ವೇಳೆ ಕೈದಿಯೊಬ್ಬ ಗಾಂಜಾವನ್ನು ಬಚ್ಚಿಟ್ಟುಕೊಂಡು ಕಾರಾಗೃಹದ ಒಳಗೆ ಹೋಗುವ ಸಮಯದಲ್ಲಿ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿರುವ ಘಟನೆ ಬುಧವಾರ ನಡೆದಿದೆ.

ಮೈಸೂರು ಕಾರಾಗೃಹದಲ್ಲಿ ಸಜಾಬಂಧಿಯಾಗಿರುವ ಮಡಿಕೇರಿ ಬಳಿಯ ಇಬ್ಬಣಿವಾಳವಾಡಿ ಗ್ರಾಮದ ನಿವಾಸಿ ದುರ್ಗದತ್ತ ಕಾಳಿದಾಸಸ್ವಾಮಿ (28) ಕಾರಾಗೃಹದೊಳಕ್ಕೆ ಹೋಗುವ ವೇಳೆ ಸಿಕ್ಕಿ ಬಿದ್ದಿದ್ದಾನೆ.

Kochi Police seized 134 kg of ganja in year 2021: RTI - India Today

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ದುರ್ಗದತ್ತ ಕಾಳಿದಾಸಸ್ವಾಮಿಗೆ ಅನಾರೋಗ್ಯದ ಕಾರಣ ಜೈಲು ಅಧಿಕಾರಿಗಳು ಬುಧವಾರ ಮಧ್ಯಾಹ್ನ ಚಿಕಿತ್ಸೆಗಾಗಿ ಕೆಆರ್​ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆತನಿಗೆ ಚಿಕಿತ್ಸೆ ಕೊಡಿಸಿ ಬುಧವಾರ ಮಧ್ಯಾಹ್ನ 2 ಗಂಟೆ ವೇಳೆಗೆ ವಾಪಸ್ ಜೈಲಿಗೆ ಕರೆತಂದಿದ್ದಾರೆ. ಈ ವೇಳೆ ಆತನನ್ನು ಅಲ್ಲಿನ ಸಿಬ್ಬಂದಿಗಳಾದ ಉಮೇಶ್ ಚಂದ್ರನಾಯಕ್ ಹಾಗೂ ಶಿವಾನಂದ ಕೋಕಲೆ ಅವರು ತಪಾಸಣೆಗೊಳಪಡಿಸಿದ್ದಾರೆ. ಈ ವೇಳೆ ಆತನ ಬಲಗಾಲಿನಲ್ಲಿ ಕಪ್ಪು ಬಣ್ಣದ ಟೇಪ್ ಸುತ್ತಿರುವುದು ಅವರಿಗೆ ಕಂಡುಬಂದಿದೆ. ಕೂಡಲೇ ಟೇಪ್‌ನ್ನು ತೆಗೆದು ಪರಿಶೀಲನೆ ನಡೆಸಿದಾಗ ಅಲ್ಲಿ ಗಾಂಜಾ ಪೊಟ್ಟಣವಿರುವುದು ಕಂಡುಬಂದಿದೆ. ತಕ್ಷಣವೇ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಕಾರಾಗೃಹ ಅಧಿಕಾರಿಗಳು ದುರ್ಗದತ್ತ ಅವರ ವಿರುದ್ಧ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಆರ್ ಆಸ್ಪತ್ರೆಯ ಶೌಚಾಯದಲ್ಲಿ ನೆವೆಲ್ ಎಂಬಾತ ಇರಿಸಿದ್ದ ಗಾಂಜಾವನ್ನು ತೆಗೆದುಕೊಂಡು ಬಂದಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಮಂಡಿ ಪೊಲೀಸರು 76 ಗ್ರಾಂ ಗಾಂಜಾ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

In a shocking incident, a prisoner, who was carrying ganja while returning to the jail after treatment on the pretext of ill health, was caught on camera by the jail staff.