Kcs Media, Stany Pinto, Attack: ಬೀದರ್ ; ವಿವಾದಿತ ಜಾಗದಲ್ಲಿ ಪ್ರಾರ್ಥನೆಗೆ ತೆರಳಿದ್ದ ಕ್ರೈಸ್ತ ವೇದಿಕೆ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಮೇಲೆ ತೀವ್ರ ಹಲ್ಲೆ

30-12-23 10:39 pm       HK News Desk   ಕ್ರೈಂ

ಬೀದರ್ ಜಿಲ್ಲೆಯ ಅಮನಾಬಾದ್ ಎಂಬಲ್ಲಿ ಕ್ರೈಸ್ತ ಕುಟುಂಬವೊಂದರ ಪರವಾಗಿ ಪ್ರಾರ್ಥನೆಗೆ ತೆರಳಿದ್ದ ಕರ್ನಾಟಕ ಕ್ರೈಸ್ತ ರಕ್ಷಣಾ ವೇದಿಕೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಎಂಬವರ ಮೇಲೆ ಸ್ಥಳೀಯರು ತೀವ್ರ ಹಲ್ಲೆಗೈದ ಘಟನೆ ನಡೆದಿದೆ. 

ಬೆಂಗಳೂರು, ಡಿ.30: ಬೀದರ್ ಜಿಲ್ಲೆಯ ಅಮನಾಬಾದ್ ಎಂಬಲ್ಲಿ ಕ್ರೈಸ್ತ ಕುಟುಂಬವೊಂದರ ಪರವಾಗಿ ಪ್ರಾರ್ಥನೆಗೆ ತೆರಳಿದ್ದ ಕರ್ನಾಟಕ ಕ್ರೈಸ್ತ ರಕ್ಷಣಾ ವೇದಿಕೆಯ ಅಧ್ಯಕ್ಷ ಸ್ಟ್ಯಾನಿ ಪಿಂಟೋ ಎಂಬವರ ಮೇಲೆ ಸ್ಥಳೀಯರು ತೀವ್ರ ಹಲ್ಲೆಗೈದ ಘಟನೆ ನಡೆದಿದೆ. 

ಕ್ರಿಸ್ಮಸ್ ಹಿನ್ನೆಲೆಯಲ್ಲಿ ಸ್ಟ್ಯಾನಿ ಪಿಂಟೋ ಅವರನ್ನು ಬೀದರಿನ ಚರ್ಚ್ ಪರವಾಗಿ ಕರೆಸಲಾಗಿತ್ತು. ಅದರಂತೆ ಡಿ.29ರಂದು ಪಿಂಟೋ ಬೀದರ್ ಜಿಲ್ಲೆಗೆ ತೆರಳಿದ್ದು ಚರ್ಚ್ ನಲ್ಲಿ ನಡೆದ ಕ್ರಿಸ್ಮಸ್ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಆನಂತರ, ಅಲ್ಲಿನ ಕ್ರೈಸ್ತ ಕುಟುಂಬವೊಂದು ತಮ್ಮ ಜಾಗದ ವಿಚಾರದಲ್ಲಿ ತಕರಾರು ಇದೆ, ಸ್ಥಳಕ್ಕೆ ಬಂದು ಪ್ರಾರ್ಥನೆ ಮಾಡಬೇಕು ಎಂದು ಕೇಳಿಕೊಂಡಿತ್ತು.

ಅದರಂತೆ ಸ್ಟ್ಯಾನಿ ಪಿಂಟೋ ವಿವಾದಿತ ಜಾಗಕ್ಕೆ ತೆರಳಿದ್ದು ಆ ಸಂದರ್ಭದಲ್ಲಿ ಜಾಗದ ಬಗ್ಗೆ ದೂರು ನೀಡಿದ್ದ ಮುಸ್ಲಿಮ್ ಕುಟುಂಬದ ಪರವಾಗಿ ಯುವಕರು ಸ್ಥಳದಲ್ಲಿ ಸೇರಿದ್ದರು. ಜಾಗದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿದ್ದು, ಅಷ್ಟರಲ್ಲಿ ಸ್ಟ್ಯಾನಿ ಪಿಂಟೋ ಅವರನ್ನು ಕರೆದೊಯ್ದಿದ್ದವರು ಜಾಗ ಖಾಲಿ ಮಾಡಿದ್ದರು ಎನ್ನಲಾಗಿದೆ. ಅದೇ ಹೊತ್ತಿಗೆ ಸಿಕ್ಕಿಬಿದ್ದ ಸ್ಟ್ಯಾನಿ ಪಿಂಟೋಗೆ ಸ್ಥಳೀಯ ಯುವಕರು ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಪಿಂಟೋ ಪ್ರಜ್ಞೆ ತಪ್ಪಿ ಬಿದ್ದಿದ್ದು ಬೀದರಿನ ಆಸ್ಪತ್ರೆ ಒಂದಕ್ಕೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಸರಿಯಾಗಿ ಸಿಗದ ಕಾರಣ ಹೈದರಾಬಾದಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಸ್ಟ್ಯಾನಿ ಪಿಂಟೋ ಕರ್ನಾಟಕ ಕ್ರೈಸ್ತ ರಕ್ಷಣಾ ವೇದಿಕೆ ಹೆಸರಲ್ಲಿ ಗುರುತಿಸಿಕೊಂಡಿದ್ದು ಕ್ರೈಸ್ತರ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತಿದ್ದರು. ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಹೆಚ್ಚಾಗಿ ಇವರು ಕ್ರೈಸ್ತರ ಪರ ಹೋರಾಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಮಣಿಪುರದ ಹಿಂಸಾಚಾರ ವಿರೋಧಿಸಿ ಮಂಗಳೂರು, ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲೂ ಸ್ಟಾಲಿನ್ ಮುಂಚೂಣಿಯಲ್ಲಿದ್ದರು.

Kcs Media, Karnataka Christa Vedike Stany Pinto attacked in Bidar over land dispute, hospitalised. Kcs Stany Pinto was taken to pray for a disputed land after which the against party attacked pinto brutally. It is said he has been shifted to Hyderabad for treatment. A case has been registered at Bidar police station.