ಬ್ರೇಕಿಂಗ್ ನ್ಯೂಸ್
02-01-24 02:21 pm HK News Desk ಕ್ರೈಂ
ಕುಣಿಗಲ್, ಜ 02: ರಸ್ತೆ ಅಪಘಾತ ಸಂಬಂಧ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸಂಬಂಧಿಗಳ ಮತ್ತು ಬಿದನಗೆರೆ ಗ್ರಾಮಸ್ಥರ ನಡುವೆ ಜಟಾಪಟಿ ನಡೆದು ಜಿಲ್ಲಾ ಎಸ್ಪಿ ಅವರ ತಾಯಿ ಮೇಲೆ ಹಲ್ಲೆ ನಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಬಿದನಗೆರೆ ಬೈಪಾಸ್‌ನಲ್ಲಿ ನಡೆದಿದೆ.
ಘಟನೆಯಲ್ಲಿ ಹಾಸನ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜಿತಾ ಅವರ ತಾಯಿ ಎ.ಜೆ.ಮಹಮದ್ ಅಜೀಜಾ (60) ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಘಟನೆ ಸಂಬಂಧ ಬಿದನಗೆರೆ ಗ್ರಾಮದ ಮೂರು ಮಂದಿ ವಿರುದ್ದ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ. 1 ಸೋಮವಾರದಂದು ಮಧ್ಯಾಹ್ನ ಎ.ಜೆ.ಮಹಮದ್ ಅಜೀಜಾ ಹಾಗೂ ಅವರ ಸಂಬಂಧಿಕರು ಹಾಸನದಿಂದ ಕುಣಿಗಲ್ ಮಾರ್ಗವಾಗಿ ಎರ್ಟಿಗಾ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿರಬೇಕಾದರೆ, ಬಿದನಗೆರೆ ಬೈಪಾಸ್ ನಲ್ಲಿ ಯಾವುದೋ ಒಂದು ವಾಹನ ವ್ಯಕ್ತಿಯೋರ್ವನಿಗೆ ಅಪಘಾತ ಮಾಡಿ ಪರಾರಿಯಾಗಿತ್ತು, ತಕ್ಷಣ ನಾವು ಕಾರು ನಿಲ್ಲಿಸಿ ಅಪಘಾತವಾದ ವ್ಯಕ್ತಿಗೆ ಅಸ್ಪತ್ರೆಗೆ ಸೇರಿಸಬೇಕೆಂದು ಪರಿಶೀಲಿಸಲು ನಾವು ಪ್ರಯತ್ನಿಸಿದ್ದಾಗ 10 ಜನರ ಗುಂಪೊಂದು ನಮ್ಮನು ಸುತ್ತುವರೆದು, ನಮ್ಮೊಂದಿಗೆ ಜಗಳವಾಡಲು ಪ್ರಾರಂಭಿಸಿದರು, ಆ ವ್ಯಕ್ತಿಯನ್ನು ಪರೀಕ್ಷಿಸಲು ಅವರು ಅವಕಾಶ ಕೊಡಲಿಲ್ಲ, ಬದಲಾಗಿ ಅವರು ನಮ್ಮನು ನಿಂದಿಸಿ, ಹಣಕ್ಕೆ ಬೇಡಿಕೆ ಇಟ್ಟರು, ಆ ಗುಂಪಿನಲ್ಲಿ ಇದ್ದ ಕೆಲವರು ನಮಗೆ ಹಣ ನೀಡುವಂತೆ ಬೆದರಿಕೆ ಹಾಕಿದರು, ಕೈಯಲ್ಲಿ ಛತ್ರಿ ಹಿಡಿದಿದ್ದ ವ್ಯಕ್ತಿಯೋರ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.

ನನ್ನ ರಕ್ಷಣೆಗೆ ಬಂದ ನನ್ನ ಸಹೋದರ ಎ.ಜೆ.ಹಸನ್ ಅಲಿ ಶೇಕ್ ಗೂ ಹೊಡೆದರು, ನನ್ನ ಅಣ್ಣನ ಬೆನ್ನಿಗೆ ತೀವ್ರ ಹೊಡೆತ ಬಿದ್ದಿದೆ. ನಂತರ ಏಕಾಏಕಿ ಎರಡು ಮೂರು ಮಂದಿ ಕೂಡ ನನ್ನ ಮೇಲೆ ಹಲ್ಲೆ ನಡೆಸಿದರು, ಗುಂಪಿನಲ್ಲಿ ಇದ್ದ ಮಹಿಳೆಯೋರ್ವಳು ತನ್ನ ಕೈಯಲ್ಲಿ ಚಾಕು ತೆಗೆದುಕೊಂಡು ನನ್ನ ಗಂಟಲ ಬಳಿ ಇಟ್ಟು ಹಣ ನೀಡುವಂತೆ ಒತ್ತಾಯಿಸಿದರು, ಇಲ್ಲದಿದ್ದರೆ ನಮ್ಮನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಮತ್ತೊಬ್ಬ ವ್ಯಕ್ತಿ ನನ್ನ ತಲೆ ಹಿಂಭಾಗಕ್ಕೆ ಹೊಡೆದಿದ್ದು, ತಕ್ಷಣ ನಾನು ಪ್ರಜ್ಞೆ ತಪ್ಪಿದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಎ.ಜೆ.ಮಹಮದ್ ಅಜೀಜಾ ಆರೋಪಿಸಿದ್ದಾರೆ.
The incident took place at Bidanagere bypass on National Highway 75 after a scuffle broke out between the relatives of Hassan District Superintendent of Police and bidanagere villagers over a road accident.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
25-01-26 10:11 pm
HK staffer
Indias Biggest Robbery in Belagavi: ಇಡೀ ದೇಶದಲ...
25-01-26 09:48 am
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm