ಬ್ರೇಕಿಂಗ್ ನ್ಯೂಸ್
05-01-24 04:01 pm Mangalore Correspondent ಕ್ರೈಂ
ಮಂಗಳೂರು, ಜ.5: ಮದುವೆಯಾಗುತ್ತೇನೆಂದು ನಂಬಿಸಿ ಕೇರಳ ಮೂಲದ ಯುವಕನೊಬ್ಬ ಮೋಸ ಮಾಡಿದ್ದಾನೆಂದು ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಯುವತಿ ಮಂಗಳೂರಿನಲ್ಲಿ ರಂಪಾಟ ನಡೆಸಿರುವ ಘಟನೆ ಕೋಟೆಕಾರಿನಲ್ಲಿ ನಡೆದಿದೆ.
ಶಾದಿ ಡಾಟ್ ಕಾಮ್ ನಲ್ಲಿ ಸಂಪರ್ಕ ಆಗಿದ್ದ ಕೇರಳದ ಕ್ಯಾಲಿಕಟ್ ನಿವಾಸಿ ಅಕ್ಷಯ್ ಎಂಬಾತನ ಜೊತೆಗೆ ಯುವತಿ ಕಳೆದ ಎರಡು ವರ್ಷಗಳಿಂದ ಸುತ್ತಾಡಿದ್ದಾಳೆ. ಮದುವೆಯಾಗುತ್ತೇನೆಂದು ನಂಬಿಸಿದ್ದಲ್ಲದೆ, ತನ್ನಿಂದಲೇ ಒಡವೆ, ಹಣ ಸಹಿತ ಸುಮಾರು 33 ಲಕ್ಷ ರೂಪಾಯಿ ಮೌಲ್ಯದ ಸೊತ್ತು ಪಡೆದಿದ್ದಾನೆ. ಇದೀಗ ಮಂಗಳೂರಿನ ಬೇರೆ ಯುವತಿಯ ಜೊತೆ ಮದುವೆಯಾಗುತ್ತಿದ್ದಾನೆ. ಆತ ಹಲವಾರು ಹೆಣ್ಮಕ್ಕಳಿಗೆ ಇದೇ ರೀತಿ ಮೋಸ ಮಾಡಿದ್ದಾನೆ ಎಂದು ಆಕೆ ದೂರಿದ್ದಾಳೆ. ಯುವತಿ ಮೈಸೂರು ಮೂಲದವಳಾಗಿದ್ದು ಮದುವೆ ಕಾರ್ಯ ನಡೆಯುತ್ತಿದ್ದ ಮಂಗಳೂರು ಹೊರವಲಯದ ಕೋಟೆಕಾರು ಬಳಿಯ ಖಾಸಗಿ ಹೊಟೇಲ್ ಸಭಾಂಗಣದ ಬಳಿಗೆ ಬಂದಿದ್ದಳು.
ಉಳ್ಳಾಲ ಪೊಲೀಸರೂ ಸ್ಥಳಕ್ಕೆ ಬಂದಿದ್ದು, ಈ ವೇಳೆ ಯುವತಿ ಮಾಧ್ಯಮಕ್ಕೆ ತನ್ನ ಅಳಲು ತೋಡಿಕೊಂಡಿದ್ದಾಳೆ. ನಮ್ಮ ನಡುವಿನ ಸಂಬಂಧ ಆತನ ಮನೆಯವರಿಗೂ ತಿಳಿದಿದೆ. ಕಳೆದ ಬಾರಿ ಬಸುರಿಯಾಗಿದ್ದ ವೇಳೆ ಮೈಸೂರಿಗೆ ಹೋಗಿದ್ದಾಗ ಅಲ್ಲಿ ನನ್ನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಮೈಯಲ್ಲಿ ಗಾಯಗಳಾದ ಬಗ್ಗೆ ನನ್ನಲ್ಲಿ ದಾಖಲೆ ಇಟ್ಟುಕೊಂಡಿದ್ದೇನೆ. ಈತನ ವಂಚನೆ ಬಗ್ಗೆ ಬೆಂಗಳೂರಿನ ಮಹಿಳಾ ಠಾಣೆ ಮತ್ತು ಕ್ಯಾಲಿಕಟ್ ನಲ್ಲಿಯೂ ಪೊಲೀಸರಿಗೆ ದೂರು ನೀಡಿದ್ದೇನೆ. ಪೊಲೀಸರು ಆತನಿಂದ ಹಣ ಪಡೆದು ಕ್ರಮ ಜರುಗಿಸಿಲ್ಲ. ಅಕ್ಷಯ್ ಮೋಸಗಾರನಾಗಿದ್ದು, ಬಿಸಿನೆಸ್ ಮ್ಯಾನ್ ಎಂದು ಪೋಸು ಕೊಟ್ಟು ತನ್ನಿಂದ 17 ಲಕ್ಷದ ಒಡವೆ, 16 ಲಕ್ಷ ರೂಪಾಯಿ ನಗದು ಹಣವನ್ನು ಪಡೆದಿದ್ದಾನೆ. ಈತನ ವಂಚನೆ ಬಗ್ಗೆ ಮಂಗಳೂರಿನ ಯುವತಿ ಮನೆಯವರಿಗೆ ತಿಳಿಸಲು ಯತ್ನಿಸಿದರೂ ಕೇಳುತ್ತಿಲ್ಲ.
ಕ್ಯಾಲಿಕಟ್ ನಿವಾಸಿ ಅಕ್ಷಯ್ ಮಂಗಳೂರಿನ ವಾಮಂಜೂರಿನ ಯುವತಿಯ ಜೊತೆಗೆ ಮದುವೆಯಾಗಿದ್ದಾನೆ. ಕೋಟೆಕಾರಿನ ಪರಿವಾರ್ ರೆಸಿಡೆನ್ಸಿಯಲ್ಲಿ ಹೊಸತಾಗಿ ನವೀಕರಿಸಲ್ಪಟ್ಟ ಸಭಾಂಗಣದಲ್ಲಿ ಮೊದಲ ಬಾರಿಗೆ ಮದುವೆ ಕಾರ್ಯ ಏರ್ಪಡಿಸಲಾಗಿತ್ತು. ಆದರೆ ಬೆಂಗಳೂರಿನ ಯುವತಿ ಬಂದಿದ್ದರಿಂದ ಕೆಲಹೊತ್ತು ರಂಪಾಟ ನಡೆಯುವಂತಾಗಿತ್ತು. ಆದರೆ ಅಷ್ಟರಲ್ಲಿ ಉಳ್ಳಾಲ ಪೊಲೀಸರು ಬಂದಿದ್ದು, ಯುವತಿಯನ್ನು ಮದುವೆ ಮಂಟಪಕ್ಕೆ ತೆರಳಲು ಬಿಡಲಿಲ್ಲ. ಕೇರಳದಲ್ಲಿ ಕೇಸ್ ಇರುವುದರಿಂದ ಅಲ್ಲಿಯೇ ಹೋಗಿ ನ್ಯಾಯ ಕೇಳುವಂತೆ ಪೊಲೀಸರು ತಿಳಿಸಿದ್ದರಿಂದ ಆಕೆ ಮಂಜೇಶ್ವರ ಠಾಣೆಗೂ ತೆರಳಿ ದೂರು ನೀಡಿದ್ದಾಳೆ. ಇತ್ತ ಅಕ್ಷಯ್ ಹೊಸ ವಧುವಿನ ಜೊತೆಗೆ ಮದುವೆಯಾಗಿ ಕೇರಳದತ್ತ ಪ್ರಯಾಣ ಬೆಳೆಸಿದ್ದಾನೆ.
ಅಕ್ಷಯ್ ಡ್ರಗ್ಗಿಸ್ಟ್, ಮೋಸಗಾರನಾಗಿದ್ದು ಆತನ ಮೇಲೆ ಹಲವಾರು ಕೇಸುಗಳಿದ್ದು, ಪೊಲೀಸರು ಕೂಡಲೇ ಬಂಧಿಸಬೇಕು. ಆತನ ಬೇರೆ ಮದುವೆ ವಿಚಾರದ ಬಗ್ಗೆ ನನಗೆ ಚಿಂತೆಯಿಲ್ಲ. ನನಗೆ ವಂಚನೆ ಮಾಡಿದ್ದಾನೆ ಎಂದು ಯುವತಿ ಹೇಳಿದರೂ ಉಳ್ಳಾಲ ಪೊಲೀಸರು ಅರೆಸ್ಟ್ ವಾರೆಂಟ್ ಇದ್ದರೆ ತಂದುಕೊಡುವಂತೆ ತಿಳಿಸಿದ್ದಾರೆ. ಮೋಸಕ್ಕೊಳಗಾದ ಯುವತಿ ತನಗೆ ಹಲ್ಲೆ ನಡೆಸಿರುವ ಫೋಟೋ ತೋರಿಸಿ ಮಾಧ್ಯಮದ ಮುಂದೆ ನ್ಯಾಯ ಕೇಳಿದ್ದಾಳೆ.
Mangalore Kotekar lover girl tries to stop Marriage of boyfriend, police arrive at spot. The girl is said to be from Bangalore and youth is from kerala.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
12-01-25 12:33 pm
Mangalore Correspondent
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm