Mangalore international airport, Gold seized: ದುಬೈನಿಂದ ಒಂದೂವರೆ ಕೇಜಿ ಚಿನ್ನ ಗುದದಲ್ಲಿ ಬಚ್ಚಿಟ್ಟು ತರುತ್ತಿದ್ದ ಖದೀಮ ಕಸ್ಟಮ್ಸ್ ಬಲೆಗೆ ; ಬಜ್ಪೆ ಏರ್ಪೋರ್ಟಲ್ಲಿ ಕಾರ್ಯಾಚರಣೆ 

09-01-24 11:52 am       Mangalore Correspondent   ಕ್ರೈಂ

ಅಬುಧಾಬಿಯಿಂದ ಮಂಗಳೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬ ಒಂದೂವರೆ ಕೇಜಿ ಚಿನ್ನವನ್ನು ತನ್ನ ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 

ಮಂಗಳೂರು, ಜ.9: ಅಬುಧಾಬಿಯಿಂದ ಮಂಗಳೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬ ಒಂದೂವರೆ ಕೇಜಿ ಚಿನ್ನವನ್ನು ತನ್ನ ಗುದದ್ವಾರದಲ್ಲಿ ಬಚ್ಚಿಟ್ಟುಕೊಂಡಿದ್ದನ್ನು ಬಜ್ಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 

ಜನವರಿ 8ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಜ್ಪೆಗೆ ಬಂದಿಳಿದ ಪ್ರಯಾಣಿಕ ಮೆಟಲ್ ಡಿಟೆಕ್ಟರ್ ತಪಾಸಣೆ ಸಂದರ್ಭದಲ್ಲಿ ಬೀಪ್ ಸೌಂಡ್ ಆಗಿತ್ತು. ಪರಿಶೀಲನೆ ನಡೆಸಿದಾಗ ದೇಹದಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. 24 ಕ್ಯಾರೆಟ್ ಚಿನ್ನವನ್ನು ಪೇಸ್ಟ್ ಮಾಡಿ ಐದು ಉಂಡೆಯನ್ನಾಗಿಸಿ ಅದನ್ನು ಗುದದಲ್ಲಿ ಬಚ್ಚಿಟ್ಟು ಬರುತ್ತಿದ್ದ. ವ್ಯಕ್ತಿ ನಡೆಯುವಾಗ ವಿಚಿತ್ರ ವರ್ತನೆ ಇದ್ದುದನ್ನು ಕಂಡು ಕಸ್ಟಮ್ಸ್ ಅಧಿಕಾರಿಗಳು ಸಂಶಯಗೊಂಡಿದ್ದರು.  

ಈ ವೇಳೆ, 1579 ಗ್ರಾಮ್ (ಒಂದೂವರೆ ಕೇಜಿ) ಚಿನ್ನ ಪತ್ತೆಯಾಗಿದ್ದು ಅವನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನದ ಮಾರುಕಟ್ಟೆ ಮೌಲ್ಯ ಅಂದಾಜು 98.68 ಲಕ್ಷ ರೂಪಾಯಿ ಆಗಬಹುದು ಎಂದು ಕಸ್ಟಮ್ಸ್ ಇಲಾಖೆ ಪ್ರಕಟಣೆ ತಿಳಿಸಿದೆ. 

ದುಬೈನಿಂದ ಅಕ್ರಮವಾಗಿ ಚಿನ್ನವನ್ನು ತರುವುದು ಮಾಮೂಲಿಯಾಗಿದ್ದು ಕೆಲವೊಮ್ಮೆ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆಯಲ್ಲಿ ಸಿಕ್ಕಿಬೀಳುತ್ತಾರೆ. ಆರೋಪಿ ಪ್ರಯಾಣಿಕನನ್ನು ಬಂಧಿಸಿ ಬಜ್ಪೆ ಪೊಲೀಸರಿಗೆ ಹಸ್ತಾಂತರಿಸಿದ್ದು ಆತನ ಬಗ್ಗೆ ಮಾಹಿತಿ ಬಿಟ್ಟು ಕೊಟ್ಟಿಲ್ಲ.

1.5 kgs of gold seized by custom officers at Mangalore international airport. On the basis of suspicious movement of a pax travelling from Abu Dhabi to Mangaluru by Air India Express flight IX 816 on 08.01.2024, the officers of Mangaluru Customs intercepted him and while frisking his body, beep sound emerged from his pelvis region. It was found that 5 oval shaped objects containing gold in paste form were concealed in his rectum and after extraction by heating process, gold of 24 carat purity totally weighing 1579.000 grams (net) and valued at Rs. 98,68,750/- was recovered. The pax was arrested and produced before Magistrate.