ಬ್ರೇಕಿಂಗ್ ನ್ಯೂಸ್
11-01-24 10:05 pm Bangalore Correspondent ಕ್ರೈಂ
ಬೆಂಗಳೂರು, ಜ.11: ಹೆತ್ತ ಮಗುವನ್ನೇ ಕೊಂದ ಪಾಪಿ ತಾಯಿ ಸುಚನಾ ಸೇಠ್‌ಳ ಮತ್ತಷ್ಟು ರೋಚಕ ವಿಚಾರಗಳು ಪೊಲೀಸರ ತನಿಖೆಯಲ್ಲಿ ರಿವೀಲ್ ಆಗಿದ್ದು, ತನಿಖೆ ವೇಳೆ ಮಗುವನ್ನು ಕೊಂದಿದ್ದರ ಬಗ್ಗೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲ ಎಂದು ಆರೋಪಿ ಸುಚನಾ ಸೇಠ್ ಹೇಳಿಕೆ ನೀಡಿದ್ದಾಳೆ.
ಮಗುವನ್ನು ಕೊಲೆ ಮಾಡುವ ಕೆಲವು ದಿನಗಳ ಹಿಂದೆ ಆರೋಪಿ ಸುಚನಾ ಪತಿಗೆ ಕಾಲ್ ಮಾಡಿದ್ದಳು. ಅಲ್ಲದೇ ಜನವರಿ 6 ರಂದು ಪತಿ ವೆಂಕಟರಮಣ್‌ಗೆ ಮೆಸೇಜ್ ಮಾಡಿ ಮರುದಿನ ಮಗುವನ್ನು ಭೇಟಿ ಮಾಡಬಹುದು ಎಂದು ತಿಳಿಸಿದ್ದಳು.
ಹೀಗಾಗಿ ಪತಿ ಮಗುವನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪತ್ನಿ ಹಾಗೂ ಮಗು ಬೆಂಗಳೂರಿನಲ್ಲಿ ಇಲ್ಲವಾದ್ದರಿಂದ ಭೇಟಿ ಸಾಧ್ಯವಾಗಿರಲಿಲ್ಲ. ಬಳಿಕ ಅದೇ ದಿನ ಪತಿ ವೆಂಕಟರಮಣ್ ಇಂಡೋನೇಷ್ಯಾಗೆ ವಾಪಸ್ಸಾಗಿದ್ದಾರೆ. ಇನ್ನು 2022ರಲ್ಲಿ ಸುಚನಾ ಸೇಠ್ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಳು. ಅಲ್ಲದೇ ನನಗೆ ಮತ್ತು ಮಗುವಿಗೆ ಪತಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು. ಆದರೆ ಈ ಆರೋಪವನ್ನು ಪತಿ ಅಲ್ಲಗೆಳೆದಿದ್ದರು.
ಇದಾದ ಬಳಿಕ ಪತ್ನಿಯ ಮನೆಯಿಂದ ಮಗು ಮತ್ತು ಆಕೆಯ ಜೊತೆ ಸಂವಹನ ನಡೆಸುವುದನ್ನು ನ್ಯಾಯಾಲಯ ನಿರ್ಬಂಧಿಸಿತ್ತು. ಅದಾಗಿಯೂ ಮಗುವಿನ ಭೇಟಿಯ ಹಕ್ಕನ್ನು ನ್ಯಾಯಾಲಯ ಪತಿಗೆ ನೀಡಿತ್ತು. ಇದು ಸಹಜವಾಗಿಯೇ ನನ್ನ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಮಗುವನ್ನು ಕೊಂದೆ ಎಂದು ಆರೋಪಿ ಸುಚನಾ ಸೇಠ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ.
ವಿಮಾನ ಪ್ರಯಾಣಕ್ಕೆ ಬರೀ 3 ಸಾವಿರ , ಕಾರಿಗೆ ಕೊಟ್ಟಿದ್ದು 30 ಸಾವಿರ ;
ಬೇಗನೇ ಹಾಗೂ ಸುಲಭವಾಗಿ ಬೆಂಗಳೂರು ತಲುಪಬಹುದು ಎನ್ನುವ ಕಾರಣಕ್ಕೆ. ದೊಡ್ಡ ಕಂಪೆನಿ ಸಿಇಒ ಅಂದರೆ ಅವರ ವಿಮಾನ ಪ್ರಯಾಣದಲ್ಲೇ ಎನ್ನುವುದು ಸಹಜ ನಂಬಿಕೆ. ಆದರೆ ಮೂರು ದಿನದ ಹಿಂದೆ ಗೋವಾದಲ್ಲಿ ಮಗುವನ್ನು ಕೊಂದು ಬೆಂಗಳೂರಿಗೆ ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಸುಚನಾ ಸೇಥ್ ವಿಮಾನ ಪ್ರಯಾಣ ಬಿಟ್ಟು ಕಾರಿನಲ್ಲಿ ಹೊರಟಿದ್ದು ಪೊಲೀಸ್ ತನಿಖೆ ವೇಳೆ ಮಹತ್ವದ ಸಾಕ್ಷಿಯಾಗಿ ಸಿಕ್ಕಿದೆ.
ಅವರು ಬೆಂಗಳೂರಿಗೆ ಹೋಗಬೇಕು ಎಂದು ಹೇಳಿದಾಗ, ನಿಮಗೆ 3 ಸಾವಿರ ರೂ.ನಲ್ಲಿ ವಿಮಾನ ಪ್ರಯಾಣವೇ ಆಗುತ್ತದೆ. ಒಂದೇ ಗಂಟೆಯಲ್ಲಿ ಬೆಂಗಳೂರು ತಲುಪುತ್ತೀರಿ ಎಂದು ಹೇಳಿದೆವು. ಅವರು ಅದನ್ನು ಕೇಳಲೇ ಇಲ್ಲ. ನನಗೆ ಪ್ರತ್ಯೇಕ ಕಾರು ಬೇಕು. 30 ಸಾವಿರ ಬೇಕಾದರೂ ಕೊಡುತ್ತೇನೆ ಎಂದು ಹೇಳಿದರು. ನಾವು ಅವರ ಸೂಚನೆಯಂತೆ ಕ್ಯಾಬ್ ಅನ್ನೇ ಬುಕ್ ಮಾಡಿಕೊಟ್ಟೆವು ಎಂದು ಸುಚನಾ ಸೇನ್ ಉಳಿದುಕೊಂಡಿದ್ದ ಸರ್ವೀಸ್ ಅಪಾರ್ಟ್‌ಮೆಂಟ್‌ನ ವ್ಯವಸ್ಥಾಪಕರು ಪೊಲೀಸರಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುಲಭವಾಗಿ ಬೆಂಗಳೂರು ತಲುಪುವ ಬದಲು ಕಾರನ್ನೇ ಕೇಳಿ ಸುಚನಾ ಪಡೆದುಕೊಂಡಿರುವ ಹಿಂದೆ ಮಗುವಿನ ಕೊಲೆ ಉದ್ದೇಶವಿತ್ತು. ಮತ್ತು ಮಗುವಿನ ಶವವನ್ನು ಬೆಂಗಳೂರಿಗೆ ಸಾಗಿಸಿ ಅಲ್ಲಿ ಅನಾರೋಗ್ಯದ ನೆಪ ಹೇಳಿ ತಪ್ಪಿಸಿಕೊಳ್ಳುವ ಉದ್ದೇಶವಿತ್ತು ಎಂದು ತನಿಖೆ ಕೈಗೊಂಡಿರುವ ಗೋವಾ ಪೊಲೀಸರು ಶಂಕಿಸಿದ್ಧಾರೆ. ಇದೇ ನೆಲೆಯಲ್ಲಿ ಸಾಕ್ಷಿಯನ್ನು ಕಲೆ ಹಾಕುತ್ತಿದ್ದಾರೆ.
ಸುಚನಾ ಅವರು ಐದು ದಿನದ ಮಟ್ಟಿಗೆ ಗೋವಾಕ್ಕೆ ಬಂದಿದ್ದರು. ಇದಕ್ಕಾಗಿ ಜನವರಿ 6ರಿಂದ ಜನವರಿ 10ರವರೆಗೆ ಕೊಠಡಿ ಕಾಯ್ದಿರಿಸಿಕೊಂಡಿದ್ದರು. ಬಂದ ಮೂರನೇ ದಿನಕ್ಕೆ ಅಂದರೆ ಜನವರಿ 8ರಂದೇ ಹೊರಟರು. ಅವರು ಪ್ರವಾಸ ಮೊಟಕು ಮಾಡಿದ್ದು,. ಇದರ ಹಿಂದಿರುವ ಉದ್ದೇಶವನ್ನೆಲ್ಲಾ ಪೊಲೀಸರು ತನಿಖೆ ಭಾಗವಾಗಿಸಿದ್ದಾರೆ. ಈ ನೆಲೆಯಲ್ಲೂ ಮಾಹಿತಿ ಕಲೆ ಹಾಕಿದ್ದಾರೆ.
ಇದಲ್ಲದೇ ಮಗುವಿಗೆ ಹೆಚ್ಚಿನ ಡೋಸೇಜ್‌ನ ಕೆಮ್ಮಿನ ಔಷಧಿಯನ್ನು ನೀಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿತ್ತು. ಸುಚನಾ ಅಲ್ಲಿ ಉಳಿದುಕೊಂಡಾಗ ಕೆಮ್ಮಿನ ಔಷಧಿಯನ್ನು ಎರಡು ಬಾಟಲಿ ತರಿಸಿದ್ದರು. ಅದನ್ನು ನಮ್ಮ ಸಿಬ್ಬಂದಿ ತಂದುಕೊಟ್ಟಿದ್ದರು ಎಂದು ವ್ಯವಸ್ಥಾಪಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಸುಚನಾ ಅವರನ್ನು ಆರು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ತನಿಖೆ ಚುರುಕುಗೊಂಡಿದೆ. ಅವರ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಮನೋವೈದ್ಯರ ಬಳಿಯೂ ಕರೆದೊಯ್ಯಲಾಗಿದೆ. ಈವರೆಗೂ ಅವರಿಂದ ನಿಖರವಾದ ಮಾಹಿತಿ ದೊರೆತಿಲ್ಲ. ಪ್ರತಿ ಬಾರಿ ಭಿನ್ನ ಹೇಳಿಕೆ ನೀಡುತ್ತಿದ್ದಾರೆ. ಘಟನೆಗಳಿಗೆ ಪೂರಕವಾದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎನ್ನುವುದು ಪೊಲೀಸರ ಹೇಳಿಕೆ.
"ಮಗುವನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ಬಟ್ಟೆ ಅಥವಾ ದಿಂಬನ್ನು ಬಳಸಿರುವ ಸಾಧ್ಯತೆ ಇದೆ. ಕತ್ತು ಹಿಸುಕಿದ ಬಗ್ಗೆ ಮಗುವಿನ ದೇಹದ ಮೇಲೆ ಯಾವುದೇ ಕುರುಹುಗಳಿಲ್ಲ. ದಿಂಬು ಅಥವಾ ಇನ್ನಾವುದೇ ವಸ್ತುವನ್ನು ಬಳಸಲಾಗಿದೆ. ಮಗುವಿನಲ್ಲಿ ರಿಗರ್ ಮೋರ್ಟಿಸ್ ಕಂಡುಬಂದಿಲ್ಲ. ಸಾಮಾನ್ಯವಾಗಿ ರಿಗರ್ ಮೋರ್ಟಿಸ್ 36 ಗಂಟೆಗಳ ನಂತರ ಕಂಡುಬರುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ರಿಗರ್ ಮೋರ್ಟಿಸ್ ಇರಲಿಲ್ಲ. ಆದ್ದರಿಂದ, ಮಗುವು ಕೊಲೆಯಾಗಿ 36 ಗಂಟೆಗಳಿಗಿಂತ ಹೆಚ್ಚು ಸಮಯವಾಗಿದೆ. ದೇಹದ ಮೇಲೆ ಯಾವುದೇ ಕಲೆ, ರಕ್ತ ಸೋರಿಕೆಯಾಗಲಿ ಕಂಡು ಬಂದಿಲ್ಲ ಎಂದು ಹಿರಿಯೂರು ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಕುಮಾರ್ ನಾಯ್ಕ್ ತಿಳಿಸಿದರು.
ಗೋವಾದಲ್ಲಿ ಕೊಲೆಯಾದ ನಾಲ್ಕು ವರ್ಷದ ಮಗುವಿನ ಅಂತ್ಯಕ್ರಿಯೆ ರಾಜಾಜಿನಗರದ ಹರೀಶ್ಚಂದ್ರಘಾಟ್‌ನಲ್ಲಿ ಬುಧವಾರ ಬೆಳಿಗ್ಗೆ ನೆರವೇರಿತು. ಅಂತ್ಯಕ್ರಿಯೆ ವೇಳೆ ಮಗುವಿನ ತಂದೆ ವೆಂಕಟರಮಣ್ ಅವರು ಕಣ್ಣೀರಿಟ್ಟರು.
ಕೈಯಲ್ಲಿ ಮೃತದೇಹ ಹಿಡಿದು ಅಳುತ್ತಲೇ ಅಂತಿಮ ಸಂಸ್ಕಾರ ನೆರವೇರಿಸಿದರು. ಆಗ ಕುಟುಂಬದ ಸದಸ್ಯರ ಕಣ್ಣಾಲಿಗಳೂ ತೇವಗೊಂಡವು. ಹಿರಿಯೂರು ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯ ಕುಮಾರನಾಯ್ಕ ನೇತೃತ್ವದಲ್ಲಿ ಮಗವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಮಂಗಳವಾರ ಮಧ್ಯರಾತ್ರಿಯೇ ಮೃತದೇಹವನ್ನು ಆಂಬುಲೆನ್ಸ್‌ನಲ್ಲಿ ನಗರಕ್ಕೆ ತರಲಾಗಿತ್ತು. ಯಶವಂತಪುರ ಬಳಿಯ ಬ್ರಿಗೇಡ್ ಗೇಟ್ ವೇ ರೆಸಿಡೆನ್ಸಿಯಲ್ಲಿ ವೆಂಕಟರಮಣ ಅವರ ಫ್ಲ್ಯಾಟ್ ಇದ್ದು ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರು ರೆಸಿಡೆನ್ಸಿ ರಸ್ತೆಯ ಕಟ್ಟಡವೊಂದರಲ್ಲಿ ಸುಚನಾ ಸೇಠ್ ಅವರು 2021ರಲ್ಲಿ ತೆರೆದಿದ್ದ ‘ಮೈಂಡ್‌ಫುಲ್ ಎಐ ಲ್ಯಾಬ್’ ನವೋದ್ಯಮ ಕಂಪನಿ ಕಚೇರಿಗೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ‘ಅಲ್ಲಿ ಈಗ ಯಾವುದೇ ಕಚೇರಿ ಇಲ್ಲ. ಅಕ್ಕಪಕ್ಕದ ಮಳಿಗೆ ಮಾಲೀಕರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
Mother kills son in Goa, mother revelas that she has no guilt of murder, detailed crime report of what happen. The postmortem has revealed the child was smothered to death either with a cloth or a pillow, as per officials. The accused woman, Suchana Seth, allegedly killed her son in the apartment at Candolim in Goa and stuffed the body in a bag before taking it to neighbouring Karnataka in a taxi, police said.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm