ಬ್ರೇಕಿಂಗ್ ನ್ಯೂಸ್
12-01-24 01:51 pm Mangalore Correspondent ಕ್ರೈಂ
ಪುತ್ತೂರು, ಜ.12: ತಾನು ಪ್ರೀತಿಸಿದ ಯುವತಿ ಬೇರೆ ಮದುವೆಯಾದ ಸಿಟ್ಟಿನಲ್ಲಿ ವರನಿಗೆ ಸೇರಿದ ಬೈಕನ್ನು ರಾತ್ರಿ ವೇಳೆ ಸುಟ್ಟು ಹಾಕಿದ ಕೃತ್ಯ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿದಾಗ, ಈ ವಿಚಾರ ಬಯಲಾಗಿದೆ. ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳದ ಸಂದೀಪ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ಮದುವೆ ಆಗಿದ್ದಕ್ಕೆ ಈ ರೀತಿ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
ಯುವಕ ಅದೇ ಗ್ರಾಮದ ಯುವತಿಯೊಬ್ಬಳನ್ನು ಏಕಮುಖವಾಗಿ ಪ್ರೀತಿಸಿದ್ದ ಎನ್ನಲಾಗಿದೆ. ಯುವತಿಗೆ ಜನವರಿ 3ರಂದು ಬೇರೊಬ್ಬ ಯುವಕನೊಂದಿಗೆ ವಿವಾಹವಾಗಿದ್ದು ಆಕೆಯನ್ನು ಮದುವೆಯಾದ ವ್ಯಕ್ತಿಯ ಮೇಲೆ ಆರೋಪಿಗೆ ಸಿಟ್ಟಿತ್ತು. ಯುವತಿ ಜನವರಿ 6ರಂದು ಗಂಡನ ಜೊತೆ ತವರಿಗೆ ಬಂದಿದ್ದಳು. ರಾತ್ರಿ ವೇಳೆ ಮನೆಯ ಸಮೀಪ ಇರಿಸಿದ್ದ ಬೈಕಿಗೆ ಬೆಂಕಿ ಹಚ್ಚಲಾಗಿತ್ತು. ಬೈಕ್ ಹೊತ್ತಿ ಉರಿಯುತ್ತಿದ್ದುದನ್ನು ಸಂಬಂಧಿಕರು ಗಮನಿಸಿದ್ದರು. ಬೈಕನ್ನು ಮನೆಯಿಂದ 100 ಮೀ ದೂರಕ್ಕೆ ಒಯ್ದು ಬೆಂಕಿ ಹಚ್ಚಲಾಗಿತ್ತು. ಈ ಬಗ್ಗೆ ವರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.
ತಾನು ಪ್ರೀತಿಸಿದ ಯುವತಿಯನ್ನು ಮದುವೆಯಾದ ವ್ಯಕ್ತಿಯ ಮೇಲಿನ ದ್ವೇಷದಿಂದ ಬೈಕ್ ಸುಟ್ಟುಹಾಕಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
In a shocking incident, a woman in Puttur district burnt the bike belonging to the groom at night in uppinangady police limits. The matter came to light when the police investigated the case of setting fire to a two-wheeler registered at Uppinangady police station. The accused has been identified as Sandeep, a resident of Ninnikallu Padala in Uppinangady village.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 11:07 pm
Mangaluru Staffer
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm