ಬ್ರೇಕಿಂಗ್ ನ್ಯೂಸ್
12-01-24 10:18 pm Mangalore Correspondent ಕ್ರೈಂ
ಮಂಗಳೂರು, ಜ.12: ತನ್ನ ಏಕಮುಖ ಪ್ರೀತಿಗೆ ಬೆಲೆ ಕೊಟ್ಟಿಲ್ಲ ಎಂದು ಯುವತಿಯೊಬ್ಬಳನ್ನು ಕೊಲ್ಲುವ ಉದ್ದೇಶದಿಂದ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಯ ಬಳಿಕ ನಡುರಸ್ತೆಯಲ್ಲಿ ಅಡ್ಡಗಟ್ಟಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ 18 ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿದೆ.
ಮಂಗಳೂರು ನಗರದ ಶಕ್ತಿನಗರ ನಿವಾಸಿ ಸುಶಾಂತ್ ಅಲಿಯಾಸ್ ಶಾನ್ (28) ಶಿಕ್ಷೆಗೊಳಗಾದ ಆರೋಪಿ. 2019ರ ಜೂನ್ 28ರಂದು ಕೆಎಸ್ ಹೆಗ್ಡೆ ಆಸ್ಪತ್ರೆಯ ಹಿಂಭಾಗದಲ್ಲಿ ದೀಕ್ಷಾ ಎಂಬ ಯುವತಿಯನ್ನು ಅಡ್ಡಗಟ್ಟಿ ಚೂರಿಯಿಂದ ಇರಿದಿದ್ದಲ್ಲದೆ, ಯುವಕ ತನ್ನ ಕುತ್ತಿಗೆಯನ್ನೂ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿತ್ತು. ಹಾಡಹಗಲೇ ನಡೆದ ಕೃತ್ಯ ಜನಸಾಮಾನ್ಯರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಆರೋಪಿ ಸುಶಾಂತ್ ಅದಕ್ಕೂ ಹಿಂದೆ ನೃತ್ಯ ತರಬೇತಿ ನೀಡುತ್ತಿದ್ದ ವ್ಯಕ್ತಿಯಾಗಿದ್ದು, ತನ್ನನ್ನು ಪ್ರೀತಿಸುವಂತೆ ಕಾಡಿದ್ದಕ್ಕೆ ದೀಕ್ಷಾ ಕಾರ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಬಂಧಿಸಿ ಜೈಲಿಗೂ ಹಾಕಿದ್ದರು.
ಸುಶಾಂತ್ ಇದೇ ವಿಚಾರದಲ್ಲಿ ದೀಕ್ಷಾಳ ಬಗ್ಗೆ ಸಿಟ್ಟು ಹೊಂದಿದ್ದ. ಜೂನ್ 28ರಂದು ಸಂಜೆ ನಾಲ್ಕು ಗಂಟೆ ವೇಳೆಗೆ ದೇರಳಕಟ್ಟೆಯ ಬಳಿ ಯುವತಿ ಬಸ್ಸಿಳಿದು ತನ್ನ ಮನೆಗೆ ನಡೆದು ಹೋಗುತ್ತಿದ್ದಾಗ ಸುಶಾಂತ್ ತನ್ನ ಸ್ಕೂಟರಿನಲ್ಲಿ ಹಿಂಬಾಲಿಸಿ ಬಂದಿದ್ದು ಆಕೆಯನ್ನು ತಡೆದು ನಿಲ್ಲಿಸಿದ್ದ. ಮಾತಿಗೆ ಮಾತು ಬೆಳೆದು ನಿನ್ನನ್ನು ಬಿಡುವುದಿಲ್ಲ ಎಂದು ಹೇಳಿ ಸುಶಾಂತ್ ತನ್ನ ಕೈಯಲ್ಲಿದ್ದ ಚೂರಿಯಿಂದ ಯದ್ವಾತದ್ವಾ ತಿವಿದು ಹಾಕಿದ್ದ. ಇದನ್ನು ಪಕ್ಕದ ಆಸ್ಪತ್ರೆಯಲ್ಲಿದ್ದವರು ಕಣ್ಣಾರೆ ಕಂಡಿದ್ದರಲ್ಲದೆ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದರು. ಅಲ್ಲಿದ್ದ ನರ್ಸ್ ಒಬ್ಬರು ಓಡಿಕೊಂಡು ಬಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕುತ್ತಿಗೆಯನ್ನು ಕೊಯ್ದುಕೊಂಡಿದ್ದ ಯುವಕನನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೊಟ್ಟೆ, ಎದೆಗೆ ಗಾಯಗೊಂಡಿದ್ದ ಯುವತಿಯ ಸ್ಥಿತಿ ಗಂಭೀರವಾಗಿತ್ತು. ಅದೃಷ್ಟವಶಾತ್ ಯುವತಿ ಮೂರ್ನಾಲ್ಕು ತಿಂಗಳ ಚಿಕಿತ್ಸೆಯಲ್ಲಿ ಚೇತರಿಸಿಕೊಂಡಿದ್ದಳು. ಯುವಕನಿಗೆ ಹೆಚ್ಚೇನೂ ಗಾಯವಾಗಿರದ ಕಾರಣ ಒಂದು ವಾರ ಚಿಕಿತ್ಸೆ ನೀಡಿ ಪೊಲೀಸರು ವಶಕ್ಕೆ ಪಡೆದಿದ್ದರು.
ಕೃತ್ಯದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಆಗ ಪಿಎಸ್ಐ ಆಗಿದ್ದ ಗುರಪ್ಪ ಕಾಂತಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಅವರು ವಿವಿಧ ಸೆಕ್ಷನ್ ಗಳಡಿ ಒಟ್ಟು 18 ವರ್ಷಗಳ ಶಿಕ್ಷೆಯನ್ನು ವಿಧಿಸಿದ್ದಾರೆ. ಸೆಕ್ಷನ್ 326 ಪ್ರಕಾರ, 7 ವರ್ಷಗಳ ಕಠಿಣ ಸಜೆ, 1 ಲಕ್ಷ ದಂಡ, ಸೆಕ್ಷನ್ 307 ಪ್ರಕಾರ 10 ವರ್ಷಗಳ ಕಠಿಣ ಸಜೆ, 1 ಲಕ್ಷ ದಂಡ, ಸೆಕ್ಷನ್ 354 ಪ್ರಕಾರ 1 ವರ್ಷ ಸಜೆ, 10 ಸಾವಿರ ದಂಡ ವಿಧಿಸಲಾಗಿದೆ. ಶಿಕ್ಷೆಯನ್ನು ಪ್ರತ್ಯೇಕವಾಗಿ ಅನುಭವಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ದಂಡದ ಮೊತ್ತವನ್ನು ಸಂತ್ರಸ್ತ ಯುವತಿಗೆ ನೀಡುವಂತೆ ಆದೇಶ ಮಾಡಲಾಗಿದೆ. ಯುವತಿ ಪರವಾಗಿ ಸರಕಾರಿ ಅಭಿಯೋಜಕಿ ಜ್ಯೋತಿ ನಾಯಕ್ ವಾದಿಸಿದ್ದರು.
The District 2nd Additional Court has sentenced Sushanth alias Shan (31), a jilted lover who attempted to murder his ex-girlfriend by stabbing her in 2019, to 18 years and one month in jail. The court also imposed a fine of Rs 2 lacs on the accused.
20-07-25 08:35 pm
Bangalore Correspondent
ವಾಲ್ಮೀಕಿ ನಿಗಮ ಹಗರಣ ರೀತಿಯಲ್ಲೇ ಮತ್ತೊಂದು ಹಗರಣ ;...
20-07-25 07:55 pm
Dharmasthala SIT Case, Parameshwar: ಎಸ್ಐಟಿ ರ...
20-07-25 04:24 pm
Rcb, Bangalore: ಪೊಲೀಸರು 'ಆರ್ಸಿಬಿ ಸೇವಕರು' ಎಂಬ...
19-07-25 03:05 pm
ಎಲ್ಲ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ತಲಾ 50 ಕೋಟಿ ಅ...
18-07-25 10:59 pm
20-07-25 04:47 pm
HK News Desk
Kerala Nurse Yemen; ನರ್ಸ್ ನಿಮಿಷಾ ಉಳಿವಿಗೆ ಗಲ್ಫ...
16-07-25 09:58 pm
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
21-07-25 04:03 am
Mangaluru Correspondent
Mangalore Bantwal Rural PSI, Suicide: ಬಂಟ್ವಾಳ...
20-07-25 10:35 pm
Dharmasthala Case, SIT, Pronab Mohanty: ಧರ್ಮಸ...
20-07-25 03:06 pm
MRPL, MP Brijesh Chowta, Mangalore: MRPL ಹಸಿರ...
19-07-25 10:01 pm
Mangalore, Derlakatte Raid: ನಿಯಮ ಉಲ್ಲಂಘಿಸಿ ಕಾ...
19-07-25 07:18 pm
20-07-25 08:52 pm
HK News Desk
ಅಮೆರಿಕ, ಕೆನಡಾದಿಂದಲೂ ವಿದೇಶಿ ಫಂಡ್, ಯುವತಿಯರೇ ಟಾರ...
20-07-25 12:16 pm
Fraudster Roshan Saldanha, Fraud: ಬಹುಕೋಟಿ ವಂಚ...
19-07-25 09:25 pm
Mangalore Conman Roshan Saldanha Arrest: ಚಾಲಾ...
19-07-25 12:26 pm
Mangalore crime, cyber crime: ಮುಂಬೈ ಪೊಲೀಸ್ ಅಧ...
18-07-25 12:40 pm