Mangalore ACP Dhanya N Nayak, Illegal gas refilling, Kotepura Ullal: ಉಳ್ಳಾಲ ಠಾಣೆ ಕೂಗಳತೆಯಲ್ಲಿ ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ; ಎಸಿಪಿ ಧನ್ಯ ನಾಯಕ್ ಟೀಮ್ ದಿಢೀರ್ ದಾಳಿ, ಆರೋಪಿ ಪೊಲೀಸರ ವಶಕ್ಕೆ, ದಂಗಾದ ಉಳ್ಳಾಲ ಪೊಲೀಸರು

18-01-24 04:32 pm       Mangalore Correspondent   ಕ್ರೈಂ

ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಪುರದ ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದ್ದು ಆರೋಪಿ ಸಮೇತ ಅಪಾರ ಪ್ರಮಾಣದ ಗ್ಯಾಸ್ ಸಿಲಿಂಡರ್ ಗಳನ್ನ ವಶಪಡಿಸಿದ್ದಲ್ಲದೆ, ಅಕ್ರಮವಾಗಿ ಮಾರಾಟ ನಡೆಸುತ್ತಿದ್ದ ಲೀಟರ್ ಗಟ್ಟಲೆ ಪೆಟ್ರೋಲನ್ನೂ ವಶಪಡಿಸಿಕೊಂಡಿದೆ. 

ಉಳ್ಳಾಲ, ಜ.18: ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಪುರದ ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದ್ದು ಆರೋಪಿ ಸಮೇತ ಅಪಾರ ಪ್ರಮಾಣದ ಗ್ಯಾಸ್ ಸಿಲಿಂಡರ್ ಗಳನ್ನ ವಶಪಡಿಸಿದ್ದಲ್ಲದೆ, ಅಕ್ರಮವಾಗಿ ಮಾರಾಟ ನಡೆಸುತ್ತಿದ್ದ ಲೀಟರ್ ಗಟ್ಟಲೆ ಪೆಟ್ರೋಲನ್ನೂ ವಶಪಡಿಸಿಕೊಂಡಿದೆ. 

ಉಳ್ಳಾಲ ಕೋಟೆಪುರದ ಬರಾಖ ಫ್ಯಾಕ್ಟರಿ ಮುಂಭಾಗದ ರಸ್ತೆ ಬದಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಎಸಿಪಿ ಧನ್ಯ ನಾಯಕ್ ಮತ್ತು ತಂಡ ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ದಾಸ್ತಾನು ಇರಿಸಿದ್ದ ಗ್ಯಾಸ್ ಸಿಲಿಂಡರ್ ಮತ್ತು ಸುಮಾರು 280 ಲೀಟರ್ ಪೆಟ್ರೋಲನ್ನ ಜಪ್ತಿಗೊಳಿಸಿದ್ದು ಆರೋಪಿ ಅಬ್ದುಲ್ ಅಲ್ತಾಫ್ (49) ಎಂಬಾತನನ್ನ ಬಂಧಿಸಿದೆ. 

ಕೋಟೆಪುರದ ರಸ್ತೆ ಬದಿಯ ಮನೆಯಲ್ಲೇ ತೋರ್ಪಡಿಕೆಗೆ ಗುಜರಿ ಅಂಗಡಿ ನಡೆಸುತ್ತಿದ್ದ ಆರೋಪಿ ಅಲ್ತಾಫ್ ಮನೆಯೊಳಗಿನ ವಿಶಾಲ ಪ್ರದೇಶದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನ ದಾಸ್ತಾನು ಇರಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ ಎನ್ನಲಾಗಿದೆ. ಇಷ್ಟಲ್ಲದೆ ಸ್ಥಳೀಯ ನಾಡ ದೋಣಿಗಾರರಿಗೆ ದುಪ್ಪಟ್ಟು ದರದಲ್ಲಿ ಪೆಟ್ರೋಲನ್ನ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ.

ಖಚಿತ ಮಾಹಿತಿಯನ್ವಯ ಎಸಿಪಿ ಧನ್ಯ ನಾಯಕ್ ಸಮೇತ ಸಿಬ್ಬಂದಿಗಳಾದ ರಿಜಿ, ಸಾಜು ನಾಯರ್, ಮಹೇಶ್, ಅಕ್ಬರ್ ನೇತೃತ್ವದ ತಂಡ ಗುರುವಾರ ದಿಢೀರ್ ದಾಳಿ ನಡೆಸಿದೆ. ಸುಮಾರು 55 ಕ್ಕೂ ಮಿಕ್ಕಿದ ಗ್ಯಾಸ್ ಸಿಲಿಂಡರ್ ಮತ್ತು 280 ಲೀಟರ್ ನಷ್ಟು ಅಕ್ರಮ ದಾಸ್ತಾನು ಇರಿಸಿದ್ದ ಪೆಟ್ರೋಲನ್ನ ವಶ ಪಡಿಸಿದ್ದು ,ಆರೋಪಿ ಅಲ್ತಾಪ್ ನನ್ನು ಬಂಧಿಸಿದ್ದಾರೆ.

ತಮ್ಮ ಠಾಣೆಯ ಕೂಗಳತೆಯಲ್ಲಿ ರಸ್ತೆ ಬದಿಯಲ್ಲೇ ನಡೆಯುತ್ತಿರುವ ಅಕ್ರಮಗಳು ಉಳ್ಳಾಲ ಠಾಣಾ ಇನ್ಸ್ ಪೆಕ್ಟರ್ ಅವರ ಆಪ್ತ ಸಲಹೆಗಾರರಿಗೆ ತಿಳಿಯದ ಸಂಗತಿ ಏನೂ ಅಲ್ಲ. ಎಲ್ಲವೂ ತಿಳಿದು ಪಾಲಿಗೆ ಬಂದದನ್ನ ಪಂಚಾಮೃತವನ್ನಾಗಿ ಸ್ವೀಕರಿಸುತ್ತಿದ್ದ ಉಳ್ಳಾಲ ಇನ್ಸ್ ಪೆಕ್ಟರ್ ಅವರ ಗುಪ್ತ ಮಾಹಿತಿದಾರರು ಇಂದಿನ ಎಸಿಪಿ ದಾಳಿಯಿಂದ ದಂಗಾಗಿ ಕರಟಿದ ಮುಖದಿಂದ ದಾಳಿಯ ಗುಂಪಿನ ಫೋಟೋಕ್ಕೆ ಪೋಸು ನೀಡಿದ್ದಾರೆ.

Mangalore ACP Dhanya N Nayak and team raids Illegal gas refilling hub at Kotepura in Ullal.