ಐಷಾರಾಮಿ ಹೋಟೆಲ್‌ನಲ್ಲಿ 15 ದಿನ ಜಾಲಿಯಾಗಿ ಸ್ಟೇ ಮಾಡಿ ಹಣ ನೀಡದೆ ಪರಾರಿ ; ಪೊಲೀಸರ ಬಲೆಗೆ ಬಿದ್ದ ಸುಂದರಿ 

18-01-24 05:24 pm       HK News Desk   ಕ್ರೈಂ

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ ಬರೋಬ್ಬರಿ 15 ದಿನಗಳ ಕಾಲ ಚನ್ನಗಿ ಜಾಲಿ ಮಾಡಿ ಯಾವುದೇ ಹಣ ಕೊಡದೆ ಎಸ್ಕೇಪ್ ಆಗಿದೆ ಆರೋಪದ ಮೇಲೆ 37 ವರ್ಷದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ನವದೆಹಲಿ, ಜ.18: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ ಬರೋಬ್ಬರಿ 15 ದಿನಗಳ ಕಾಲ ಚನ್ನಗಿ ಜಾಲಿ ಮಾಡಿ ಯಾವುದೇ ಹಣ ಕೊಡದೆ ಎಸ್ಕೇಪ್ ಆಗಿದೆ ಆರೋಪದ ಮೇಲೆ 37 ವರ್ಷದ ಮಹಿಳೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೋಟೆಲ್ ಸಿಬ್ಬಂದಿ ಹಣದ ಕೇಳಿದಾಗ ಜಗಳವಾಡಿ ಹಣ ನೀಡದೆ ಓಡಿ ಹೋದ್ಲು ಎಂದಿದ್ದಾರೆ. 

ಹೋಟೆಲ್ ಸಿಬ್ಬಂದಿ ಮಹಿಳೆಯಿಂದ ಬಿಲ್ ಕೇಳಿದಾಗಲೆಲ್ಲಾ ಮಹಿಳೆ ಯುಪಿಐ ಪಾವತಿಯ ಮೆಸೇಜ್ ಹೋಟೆಲ್ ಸಿಬ್ಬಂದಿಗೆ ತೋರಿಸಿದ್ದಾಳೆ. ಆದ್ರೆ ಹೋಟೆಲ್ ಸಿಬ್ಬಂದಿ ಆಕೆಯ ಖಾತೆಯನ್ನು ಪರಿಶೀಲಿಸಿದಾಗ ಮಹಿಳೆಯ ಅಕೌಂಟ್ ನಿಂದ ಹಣ ಡೆಬಿಟ್ ಆಗಿರ್ಲಿಲ್ಲ. ಇದೇ ವಿಷಯಕ್ಕೆ ಗಲಾಟೆ ಆಗಿ ಅಲ್ಲಿಂದ ಮಹಿಳೆ ಪರಾರಿಯಾಗಿದ್ದಳು. ಮಹಿಳೆಯನ್ನು ಆಂಧ್ರಪ್ರದೇಶದ ಝಾನ್ಸಿ ರಾಣಿ ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದೆ.

Woman Stays In Delhi 5-Star Hotel For 15 Days For Free, Know How - Oneindia  News

ಮಹಿಳೆ ಡಿಸೆಂಬರ್ 13 ರಂದು ಹೋಟೆಲ್ ಬುಕ್ ಮಾಡಿದ್ದರು. ಸದ್ಯ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, ಪುಲ್‌ಮನ್ ಹೋಟೆಲ್ ಅಧಿಕಾರಿಗಳು ತಮ್ಮ ದೂರಿನಲ್ಲಿ ಸ್ಯಾಮ್ಯುಯೆಲ್ ಹೋಟೆಲ್ ಸೇವೆಗಳಿಗೆ ಮೋಸದ ಪಾವತಿ ವಿಧಾನಗಳನ್ನು ಬಳಸಿದ್ದಾರೆ ಎಂದು ತಿಳಿಸಿದ್ದಾರೆ.

ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 420 ವಂಚನೆ ಕೇಸ್ ಅಡಿಯಲ್ಲಿ ಐಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

A 37-year-old woman has been held for allegedly staying in a luxury hotel in Aerocity near the airport for 15 days without paying any money, officials said, officials said on Wednesday.