ಮುಂಬೈನಲ್ಲಿ ರಾಮ ಭಕ್ತರ ಮೇಲೆ ಹಲ್ಲೆಗೆ ಯತ್ನ ; ವಾಹನಗಳಿಗೆ ಹಾನಿ, ಕೋಮು ಸಂಘರ್ಷ, 13 ಜನರ ಬಂಧನ 

22-01-24 08:45 pm       HK News Desk   ಕ್ರೈಂ

ಥಾಣೆಯ ಮೀರಾ ರೋಡ್ ನಲ್ಲಿ ಭಾನುವಾರ ರಾತ್ರಿ ಕೋಮು ದ್ವೇಷದ ಗಲಾಟೆ ನಡೆದಿದ್ದು ಹಲವರಿಗೆ ಹಲ್ಲೆ, ವಾಹನಗಳನ್ನು ಹಾನಿಗೈದ ಕೃತ್ಯ ನಡೆದಿದೆ. ಘಟನೆ ಸಂಬಂಧಿಸಿ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ.

ಮುಂಬೈ, ಜ.22: ಥಾಣೆಯ ಮೀರಾ ರೋಡ್ ನಲ್ಲಿ ಭಾನುವಾರ ರಾತ್ರಿ ಕೋಮು ದ್ವೇಷದ ಗಲಾಟೆ ನಡೆದಿದ್ದು ಹಲವರಿಗೆ ಹಲ್ಲೆ, ವಾಹನಗಳನ್ನು ಹಾನಿಗೈದ ಕೃತ್ಯ ನಡೆದಿದೆ. ಘಟನೆ ಸಂಬಂಧಿಸಿ ಪೊಲೀಸರು 13 ಮಂದಿಯನ್ನು ಬಂಧಿಸಿದ್ದಾರೆ. 

ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಮೂರು ಕಾರುಗಳಲ್ಲಿ ಹಾಗೂ ಹಲವಾರು ಬೈಕ್ ಗಳಲ್ಲಿ ಬಂದಿದ್ದ ಕಾರ್ಯಕರ್ತರು ರಾಮನ ಪರವಾಗಿ ಘೋಷಣೆ ಕೂಗಿದ್ದರು. ಅಲ್ಲದೆ, ಪಟಾಕಿ ಸಿಡಿಸಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇದೇ ವೇಳೆ, ಅನ್ಯಕೋಮಿನ ಗುಂಪು ಎಂಟ್ರಿ ಕೊಟ್ಟಿದ್ದು ಕೈಯಲ್ಲಿ ಮರದ ದೊಣ್ಣೆ ಹಿಡಿದು ಹಲ್ಲೆಗೆ ಮುಂದಾಗಿದ್ದಾರೆ. 

Tension in Mumbai's Mira Road: Vehicles with Lord Ram flags reportedly  attacked | Mumbai news - Hindustan Times

Mira Road mumbai Sees Tension Between communal Ahead Of Ayodhya Event ram  temple police

ಎರಡು ತಂಡಗಳ ಮಧ್ಯೆ ಗಲಾಟೆ, ಮಾತಿನ ಚಕಮಕಿ ನಡೆದಿದ್ದು ಹೊಡೆದಾಟ ನಡೆದಿದೆ. ಒಬ್ಬರು ಮಹಿಳೆ ಸೇರಿ ಇಬ್ಬರು ಯುವಕರಿಗೆ ಹಲ್ಲೆಯಾಗಿದೆ‌. ಹಲವು ವಾಹನಗಳನ್ನು ಪುಡಿ ಮಾಡಲಾಗಿದೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ತವರು ಜಿಲ್ಲೆಯಲ್ಲೇ ಘಟನೆ ನಡೆದಿದ್ದರಿಂದ ಕೂಡಲೇ ಹೆಚ್ಚುವರಿ ಪೊಲೀಸರು ಆಗಮಿಸಿ ಉದ್ರಿಕ್ತರ ಗುಂಪನ್ನು ಚದುರಿಸಿದ್ದಾರೆ. ಹಿಂಸೆ ನಿಗ್ರಹ ಪಡೆಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.  

ಘಟನೆ ಬಗ್ಗೆ ಡಿಸಿಎಂ ದೇವೇಂದ್ರ ಫಡ್ನವಿಸ್ ಪ್ರತಿಕ್ರಿಯಿಸಿದ್ದು, ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ. ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅಲ್ಲಿನ ಪೊಲೀಸ್ ಕಮಿಷನರ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದಿದ್ದಾರೆ.

Videos of ‘communal tension’ in Mumbai's Mira Road appeared on social media ahead of the pran-pratistha ceremony in Ayodhya. Police said an incident was reported on Sunday night in connection with which five people have been arrested. A flag march was conducted in the area and the situation was peaceful on Monday morning.