ಬ್ರೇಕಿಂಗ್ ನ್ಯೂಸ್
26-01-24 06:31 pm Bangalore Correspondent ಕ್ರೈಂ
ಬೆಂಗಳೂರು, ಜ.26: ಮಹತ್ವದ ಬೆಳವಣಿಗೆಯಲ್ಲಿ ಈ ಹಿಂದೆ ಬಿಟ್ ಕಾಯಿನ್ ಹಗರಣದ ಬಗ್ಗೆ ತನಿಖೆ ನಡೆಸಿದ್ದ ಪೊಲೀಸ್ ಅಧಿಕಾರಿಗಳನ್ನೇ ವಿಶೇಷ ತನಿಖಾ ತಂಡ ಬಂಧಿಸಿದೆ. ಬಿಟ್ ಕಾಯಿನ್ ಹಗರಣದ ತನಿಖೆಗೆ ವೇಗ ನೀಡಿರುವ ವಿಶೇಷ ತನಿಖಾ ತಂಡ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಸಿಸಿಬಿ ತನಿಖೆಯಲ್ಲಿ ಲೋಪ ಎಸಗಿ ಸಾಕ್ಷ್ಯಾಧಾರ ನಾಶಪಡಿಸಿದ ಆರೋಪದಲ್ಲಿ ಸಿಸಿಬಿ ತಾಂತ್ರಿಕ ವಿಭಾಗದ ಇನ್ಸ್ ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು ಮತ್ತು ಸೈಬರ್ ತಜ್ಞನಾಗಿ ಕೆಲಸ ಮಾಡಿದ್ದ ಕೆ.ಎಸ್ ಸಂತೋಷ್ ಕುಮಾರ್ ಅವರನ್ನು ಬಂಧಿಸಿದೆ.
ಅಕ್ರಮದ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ವಿಶೇಷ ತನಿಖಾ ತಂಡವು, ಎರಡು ವರ್ಷಗಳ ಹಿಂದೆ ಸಿಸಿಬಿ ತನಿಖಾಧಿಕಾರಿಗಳಾಗಿದ್ದ ಡಿವೈಎಸ್ಪಿ ಶ್ರೀಧರ್ ಪೂಜಾರ್, ಸಿಸಿಬಿ ತಾಂತ್ರಿಕ ವಿಭಾಗದ ಇನ್ಸ್ ಪೆಕ್ಟರ್ ಡಿ.ಎಂ. ಪ್ರಶಾಂತ್ ಬಾಬು, ಕಾತ್ಸಂದ್ರ ಠಾಣೆಯ ಇನ್ಸ್ ಪೆಕ್ಟರ್ ಜಿ. ಲಕ್ಷ್ಮೀಕಾಂತಯ್ಯ, ಮಾಲೂರು ಠಾಣೆ ಇನ್ಸ್ ಪೆಕ್ಟರ್ ಎಸ್.ಆರ್ ಚಂದಾವರ, ಸೈಬರ್ ತಜ್ಞ ಕೆ.ಎಸ್ ಸಂತೋಷ್ ಕುಮಾರ್ ಅವರನ್ನು ಆರೋಪಿಗಳನ್ನಾಗಿ ಗುರುತಿಸಿದೆ. ಈ ಪೈಕಿ ಮೊದಲ ಹಂತದಲ್ಲಿ ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು ಮತ್ತು ಸೈಬರ್ ತಜ್ಞ ಸಂತೋಷ್ ಕುಮಾರ್ ಅವರನ್ನು ಹೆಚ್ಚಿನ ವಿಚಾರಣೆ ಸಲುವಾಗಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದಿದೆ.
ಉಳಿದ ಆರೋಪಿಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿರುವ ಎಸ್ಐಟಿ ಅಧಿಕಾರಿಗಳು ಆರೋಪಿಗಳ ಹೇಳಿಕೆ ಮತ್ತು ಸಾಕ್ಷ್ಯಾಧಾರ ಆಧರಿಸಿ ಹಲವು ಪ್ರಭಾವಿಗಳ ತನಿಖೆ ನಡೆಸಲು ಎಸ್ಐಟಿ ಸಿದ್ಧತೆ ನಡೆಸಿದೆ. ಕರಾವಳಿ ಮೂಲದ ಪ್ರಭಾವಿ ಬಿಜೆಪಿ ರಾಜಕಾರಣಿಯೊಬ್ಬರ ಹೆಸರು ಬಿಟ್ ಕಾಯಿನ್ ಹಗರಣದಲ್ಲಿ ಕೇಳಿಬಂದಿತ್ತು. ಅಲ್ಲದೆ, ರಾಜಕಾರಣಿಯ ಆಪ್ತರಾಗಿದ್ದ ಕಟೀಲು, ಮಂಗಳೂರಿನ ಹಲವು ವ್ಯಕ್ತಿಗಳು ಹಗರಣದಲ್ಲಿ ಆರೋಪಿಗಳಾಗಿದ್ದಾರೆಂದು ಈ ಹಿಂದೆ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಇವರೆಲ್ಲ ಸೈಬರ್ ವಂಚಕ ಶ್ರೀಕಿಯನ್ನು ಅಕ್ರಮ ಬಂಧನದಲ್ಲಿಟ್ಟು ಬಿಟ್ ಕಾಯಿನ್ ಗಳನ್ನು ದೋಚಿದ್ದರು ಎನ್ನಲಾಗಿದೆ.
ಹ್ಯಾಕರ್ ಶ್ರೀಕಿ ವಂಚನೆ ಎಸಗಿದ ಬಗ್ಗೆ 2020ರಲ್ಲಿ ಮೊದಲ ಬಾರಿಗೆ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ಕಡೆ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದರಿಂದ ತನಿಖೆಯನ್ನು ಆಗಿನ ಸರಕಾರ ಸಿಸಿಬಿಗೆ ವಹಿಸಿತ್ತು. ಸ್ಯಾಂಡಲ್ವುಡ್ ನಟ-ನಟಿಯರ ಡ್ರಗ್ಸ್ ನಂಟು ಪ್ರಕರಣದಲ್ಲಿಯೂ ಶ್ರೀಕಿ ಪಾತ್ರ ಇತ್ತು. ಆದರೆ ಸಿಸಿಬಿಯಲ್ಲಿ ತನಿಖಾಧಿಕಾರಿಗಳಾಗಿದ್ದ ಶ್ರೀಧರ ಪೂಜಾರ್, ಎಸ್.ಆರ್ ಚಂದ್ರಾದರ, ಲಕ್ಷ್ಮೀಕಾಂತಯ್ಯ, ತಾಂತ್ರಿಕ ನೆರವು ನೀಡಿದ್ದ ಪ್ರಶಾಂತ್ ಬಾಬು, ಸೈಬರ್ ತಜ್ಞ ಸಂತೋಷ್ ಕುಮಾರ್ ಸೇರಿಕೊಂಡು ಆರೋಪಿ ಶ್ರೀಕಿಯನ್ನೇ ಅಕ್ರಮ ಬಂಧನದಲ್ಲಿಟ್ಟು ಆತನಿಂದಲೇ ಬಿಟ್ ಕಾಯಿನ್ ಗಳನ್ನು ಕದಿಯುವ ಕೆಲಸ ಮಾಡಿದ್ದರು.
ಜಿಸಿಐಟಿ ಟೆಕ್ನಾಲಜೀಸ್ ಎಂಬ ಸಂಸ್ಥೆಯ ಕಚೇರಿಯಲ್ಲಿ ವಿಚಾರಣೆ ನೆಪದಲ್ಲಿ ಆರೋಪಿಗಳಾದ ಶ್ರೀಕಿ ಮತ್ತು ರಾಬಿನ್ ಖಂಡೇಲವಾಲನನ್ನು ಬಂಧನದಲ್ಲಿಟ್ಟು ಕ್ರಿಪ್ಟೋ ವ್ಯಾಲೆಟ್ ಗಳಿಂದ ಕೋಟ್ಯಂತರ ಮೌಲ್ಯದ ಬಿಟ್ ಕಾಯಿನ್ ಗಳನ್ನು ಅಕ್ರಮ ವರ್ಗಾವಣೆ ಮಾಡಿಕೊಂಡಿದ್ದರು. ಈ ಅಕ್ರಮಕ್ಕೆ ಲಕ್ಷ್ಮೀಕಾಂತಯ್ಯ, ಚಂದ್ರಾದರ ಮತ್ತು ಪ್ರಶಾಂತ ಬಾಬು ಸಹಕಾರ ಕೊಟ್ಟಿದ್ದರು. ಪ್ರಶಾಂತ್ ಬಾಬು ಸಾಕ್ಷ್ಯ ನಾಶ ಮಾಡಿದ್ದಲ್ಲದೆ, ತಾನೇ ಖರೀದಿಸಿದ್ದ ಲ್ಯಾಪ್ ಟಾಪ್ ನಲ್ಲಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡುವುದು, ಅಕ್ರಮ ಬಿಟ್ ಕಾಯಿನ್ ವರ್ಗಾವಣೆಗೆ ಒತ್ತಡ ಹೇರಿದ್ದರು. ಇದಲ್ಲದೆ, ತಾವು ಎಸಗಿದ್ದ ಅಕ್ರಮ ತಿಳಿಯಬಾರದೆಂದು ಬ್ಯಾಶ್ ಹಿಸ್ಟರಿಯನ್ನು ನಾಶ ಪಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದಲ್ಲದೆ, ಆಗ ಆಡಳಿತದಲ್ಲಿದ್ದ ಪ್ರಭಾವಿ ರಾಜಕಾರಣಿಗಳ ಕೃಪೆಯಿಂದ ಶ್ರೀಕಿಯನ್ನು ಐಷಾರಾಮಿ ಹೊಟೇಲಿನಲ್ಲಿ ಕೂಡಿಹಾಕಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವುದು, ಬಿಟ್ ಕಾಯಿನ್ ಗಳನ್ನು ಅಕ್ರಮ ವರ್ಗಾವಣೆ ಮಾಡಿರುವ ಆರೋಪಗಳಿದ್ದವು. ಹಗರಣದ ಕುರಿತ ಆರೋಪಗಳು ಕಾಂಗ್ರೆಸ್- ಬಿಜೆಪಿ ಮಧ್ಯೆ ತೀವ್ರ ಕೆಸರೆರಚಾಟಕ್ಕೂ ವೇದಿಕೆಯಾಗಿತ್ತು. ಈ ನಿಟ್ಟಿನಲ್ಲಿ ಕಳೆದ ಜುಲೈನಲ್ಲಿ ಕಾಂಗ್ರೆಸ್ ಸರಕಾರ ವಿಶೇಷ ತನಿಖಾ ತಂಡ ರಚಿಸಿ ಬಿಟ್ ಕಾಯಿನ್ ಹಗರಣದ ತನಿಖೆಗೆ ಆದೇಶ ಮಾಡಿತ್ತು. ತನಿಖೆ ಚುರುಕುಗೊಳಿಸಿದ್ದ ತನಿಖಾ ತಂಡವು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಂಜಾಬ್ ಮೂಲದ ಹರ್ವಿಂದರ್ ಸಿಂಗ್, ನಾಗಪುರ ಮೂಲದ ನಿತಿನ್ ಪುಂಡಲೀಕ ಮೆಕ್ರಾಮ್, ಪಟೇಲ್ ದುರ್ಶಿತ್ ಕುಮಾರ್ ಎಂಬವರನ್ನು ಬಂಧಿಸಿತ್ತು. ಇದೀಗ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಎಸ್ಐಟಿ ಬಂಧಿಸಿದ್ದು, ಸದ್ಯದಲ್ಲೇ ಪ್ರಭಾವಿಗಳ ಕೊರಳಿಗೆ ಉರುಳು ಸುತ್ತಿಕೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ.
SIT probing Karnataka Bitcoin scam arrests CCB police officer and cyber expert.A Special Investigation Team (SIT) of the Karnataka Police constituted in 2023 to probe the allegations of large scale corruption by politicians and policemen by using Bitcoin Thursday arrested a former Bengaluru crime branch police officer and a private cyber expert in the probe.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 12:33 pm
Mangalore Correspondent
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm