ಬ್ರೇಕಿಂಗ್ ನ್ಯೂಸ್
30-01-24 12:12 pm HK News Desk ಕ್ರೈಂ
ವಾಷಿಂಗ್ಟನ್, ಜ 30: ಆತ ಅಮೆರಿಕದಲ್ಲಿ ಎಂಬಿಎ ಕಲಿಯುತ್ತಿದ್ದ ಭಾರತೀಯ ವಿದ್ಯಾರ್ಥಿ, ವಿದ್ಯೆಯ ಜೊತೆ ಕೆಲಸವನ್ನೂ ಮಾಡುತ್ತಿದ್ದ ಈ ವೇಳೆ ಅಲ್ಲಿ ಓರ್ವ ಭಿಕಾರಿಗೆ ಊಟ ನೀಡುವ ಮೂಲಕ ಸಹಾಯವನ್ನೂ ಮಾಡುತ್ತಿದ್ದ, ಆದರೆ ಇದೇ ಭಿಕಾರಿಯಿಂದ ಭಾರತೀಯ ವಿದ್ಯಾರ್ಥಿಯ ಭೀಕರ ಹತ್ಯೆ ನಡೆದಿದೆ.
ವಿವೇಕ್ ಸೈನಿ (25) ಎಂಬ ಭಾರತೀಯ ವಿದ್ಯಾರ್ಥಿ ಅಮೆರಿಕದ ಜಾರ್ಜಿಯಾದಲ್ಲಿ ಎಂಬಿಎ ಕಲಿಯುತ್ತಿದ್ದ ಈತ ಬಿಡುವಿನ ವೇಳೆ ಅಲ್ಲೇ ಇರುವ ಅಂಗಡಿಯೊಂದರಲ್ಲಿ ಕೆಲಸಕ್ಕೆ ಮಾಡುತ್ತಿದ್ದ ಅದೇ ಸಮಯದಲ್ಲಿ ಮನೆ ಮಠ ಇಲ್ಲದ ಭಿಕಾರಿಯೊಬ್ಬ ಊಟ ಕೇಳಿಕೊಂಡು ಬರುತ್ತಿದ್ದ ಇದನ್ನು ಕಂಡ ವಿವೇಕ್ ಸೈನಿ ಬಡಪಾಯಿ ವ್ಯಕ್ತಿಗೆ ದಿನಾಲೂ ತಿನ್ನಲು ಆಹಾರ ಉಚಿತವಾಗಿ ನೀಡುತ್ತಿದ್ದ ಭಿಕಾರಿ ಯಾವತ್ತೂ ಮಾದಕ ವ್ಯಸನಿ ಎಂಬುದು ವಿವೇಕ್ ಸೈನಿಗೆ ಗೊತ್ತಾಯಿತೋ ಅಲ್ಲಿಗೆ ಆತನಿಗೆ ಆಹಾರ ನೀಡುವುದನ್ನು ಬಿಟ್ಟುಬಿಟ್ಟಿದ್ದಾನೆ ಇದರಿಂದ ಕೋಪಗೊಂಡ ವ್ಯಕ್ತಿ ಈತನ ಹತ್ಯೆಗೆ ಸಂಚು ರೂಪಿಸಿದ್ದ ಒಂದು ದಿನ ನೇರವಾಗಿ ವಿವೇಕ್ ಸೈನಿ ಇರುವ ಅಂಗಡಿಗೆ ಪ್ರವೇಶಿಸಿದ ವ್ಯಕ್ತಿ ವಿವೇಕ್ ಸೈನಿ ತಲೆಗೆ ಸುತ್ತಿಗೆಯಿಂದ ದಾಳಿ ನಡೆಸಿದ್ದಾನೆ.

ಒಂದಲ್ಲ ಎರಡಲ್ಲ ಬರೋಬ್ಬರಿ ಐವತ್ತು ಭಾರಿ ವಿವೇಕ್ ಸೈನಿ ತಲೆ, ಮುಖಕ್ಕೆ ಹೊಡೆದು ಹತ್ಯೆ ನಡೆಸಿದ್ದಾನೆ ಕೂಡಲೇ ಅಂಗಡಿಯಲ್ಲಿದ್ದ ಇತರ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಕಾರ್ಯಪ್ರವೃತ್ತರಾದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮೃತ ವಿವೇಕ್ ಸೈನಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಆರೋಪಿಯನ್ನು ಜೂಲಿಯನ್ ಎಂದು ಗುರುತಿಸಲಾಗಿದ್ದು ಸದ್ಯ ಪೋಲೀಸರ ವಶದಲ್ಲಿದ್ದಾನೆ.
ವಿವೇಕ್ ಸೈನಿಗೆ ರಜೆ ಇದ್ದ ಕಾರಣ ಇದೆ ಜನವರಿ 26 ರಂದು ಭಾರತಕ್ಕೆ ಬರಬೇಕಿತ್ತು ಆದರೆ ಇದರ ನಡುವೆ ಹತ್ಯೆ ನಡೆದಿರುವುದು ಕುಟುಂಬದಲ್ಲಿ ಆಘಾತ ಮನೆಮಾಡಿದೆ. ಮೃತದೇಹವನ್ನು ಭಾರತಕ್ಕೆ ತರುವಂತೆ ವ್ಯವಸ್ಥೆ ನಡೆಸಲಾಗುತ್ತಿದೆ.
He had shown kindness to a homeless man. The day he stopped helping him, he killed him brutally. The horror story is from the US and the victim was an Indian student. Vivek Saini, an MBA student in Georgia's Lithonia, was a part-time clerk at a convenience store that sheltered Julian Faulkner - a homeless drug-addict. Mr Saini had helped the man by giving him chips, water and even a jacket for warmth.
06-11-25 07:34 pm
Bangalore Correspondent
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
06-11-25 12:51 pm
Mangalore Correspondent
ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫ...
05-11-25 10:48 pm
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
06-11-25 08:20 pm
Bangalore Correspondent
ಥಾಯ್ಲೇಂಡ್ ದೇಶದಲ್ಲಿ ಉದ್ಯೋಗಕ್ಕೆ ತೆರಳಿ ಅಲೆದಾಟ ;...
06-11-25 02:08 pm
ಮದುವೆಯಾಗಿಲ್ಲ, ಹುಡುಗ ಸೆಟ್ ಆಗುತ್ತಿಲ್ಲ ಎಂದು ಜ್ಯೋ...
05-11-25 09:39 pm
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm