Kasaragod honey trap case: ಪತಿ- ಪತ್ನಿ ಸೇರಿ ಹನಿಟ್ರ್ಯಾಪ್ ; ಲ್ಯಾಪ್‌ಟಾಪ್ ಖರೀದಿ ಹೆಸರಲ್ಲಿ ಮಂಗಳೂರಿಗೆ ಕರೆದೊಯ್ದು ನಗ್ನಚಿತ್ರ ತೆಗೆದು ಬ್ಲಾಕ್ಮೇಲ್, 5 ಲಕ್ಷ ಸುಲಿಗೆ, ಮಹಿಳೆಯರು ಸೇರಿ ಏಳು ಖದೀಮರು ಕಾಸರಗೋಡು ಪೊಲೀಸರ ಬಲೆಗೆ  

01-02-24 01:54 pm       HK News Desk   ಕ್ರೈಂ

ಕಾಸರಗೋಡಿನ ವ್ಯಕ್ತಿಯೊಬ್ಬರನ್ನು ಮಂಗಳೂರಿಗೆ ಕರೆದೊಯ್ದು ಹನಿಟ್ರ್ಯಾಪ್ ಮಾಡಿರುವ ಪ್ರಕರಣದ ಬೆನ್ನತ್ತಿದ ಮೇಲ್ಪರಂಬ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಸರಗೋಡು, ಫೆ.1: ಕಾಸರಗೋಡಿನ ವ್ಯಕ್ತಿಯೊಬ್ಬರನ್ನು ಮಂಗಳೂರಿಗೆ ಕರೆದೊಯ್ದು ಹನಿಟ್ರ್ಯಾಪ್ ಮಾಡಿರುವ ಪ್ರಕರಣದ ಬೆನ್ನತ್ತಿದ ಮೇಲ್ಪರಂಬ ಪೊಲೀಸರು ಇಬ್ಬರು ಮಹಿಳೆಯರು ಸೇರಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಾಂಗಾಡ್‌ ನಿವಾಸಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ 5 ಲಕ್ಷ ರೂ. ಲಪಟಾಯಿಸಿದ ಬಗ್ಗೆ ಕಾಸರಗೋಡು ಜಿಲ್ಲೆಯ ಮೇಲ್ಪರಂಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.  

ಕೋಜಿಕ್ಕೋಡ್ ಮೂಲದ ಎಂ.ಪಿ‌.ರುಬೀನಾ(29), ಆಕೆಯ ಪತಿ ಪ್ರಕರಣದ ಸೂತ್ರಧಾರ ಫೈಝಲ್‌ (37), ಕಾಸರಗೋಡು ಶಿರಿಬಾಗಿಲು ನಿವಾಸಿ ಎನ್‌. ಸಿದ್ದಿಕ್‌ (48), ಮಾಂಗಾಡ್‌ನ‌ ದಿಲ್ಶಾದ್‌ (40), ಮುಟ್ಟತ್ತೋಡಿಯ ನಫೀಸತ್‌ ಮಿಸ್ರಿಯ (40), ಮಾಂಗಾಡ್‌ನ‌ ಅಬ್ದುಲ್ಲ ಕುಂಞಿ (32), ಪಡನ್ನಕ್ಕಾಡ್‌ನ‌ ರಫೀಕ್‌ ಮಹಮ್ಮದ್ (42) ಬಂಧಿತ ಆರೋಪಿಗಳು. 

ಜನವರಿ 23 ರಂದು ರುಬಿನಾ ಎಂಬಾಕೆ ಮೊಬೈಲ್ ಮೂಲಕ 59 ವರ್ಷದ ವ್ಯಕ್ತಿಯ ಪರಿಚಯ ಮಾಡಿಕೊಂಡಿದ್ದಳು. ಶೈಕ್ಷಣಿಕ ಉದ್ದೇಶಕ್ಕಾಗಿ ಲ್ಯಾಪ್ ಟಾಪ್ ಖರೀದಿಸಿದ್ದು ಅದು ಹಾಳಾಗಿದೆ. ನಿಮ್ಮ ಸಮಾಜ ಸೇವೆ ಬಗ್ಗೆ ತಿಳಿದುಕೊಂಡಿದ್ದೇನೆ. ಅದಕ್ಕಾಗಿ ಸಹಾಯ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಳು. ಅದರಂತೆ ಯುವತಿಯೊಂದಿಗೆ ಕಾಸರಗೋಡಿಗೆ ಆಗಮಿಸಿದ ಅವರು ಲ್ಯಾಪ್ ಟಾಪ್ ರಿಪೇರಿ ಸಾಧ್ಯವಿಲ್ಲ. ಹೊಸ ಲ್ಯಾಪ್ ಟಾಪ್ ಖರೀದಿಸಿ ಕೊಡುವುದಾಗಿ ಹೇಳಿದ್ದರು. 

ಲ್ಯಾಪ್‌ಟಾಪ್ ಖರೀದಿಸುವ ನೆಪದಲ್ಲಿ ಆರೋಪಿ ಯುವತಿ ರುಬಿನಾ ಮಂಗಳೂರಿಗೆ ಬಂದಿದ್ದಳು. ಈ ವೇಳೆ, ಆ ವ್ಯಕ್ತಿಯೊಂದಿಗೆ ಸಲುಗೆಯಲ್ಲಿದ್ದ ವಸತಿ ಗೃಹವೊಂದಕ್ಕೆ ತೆರಳಿದ್ದರು. ಅಷ್ಟರಲ್ಲಿ ರುಬಿನಾ ಪತಿ ಸೇರಿದಂತೆ ಐದಾರು ಮಂದಿಯ ತಂಡ ಎಂಟ್ರಿಯಾಗಿದ್ದು ಬಲವಂತದಿಂದ ನಗ್ನ ಫೋಟೊ ತೆಗೆದುಕೊಂಡಿದ್ದಾರೆ. ಬಳಿಕ ಆರೋಪಿಗಳು ಆ ವ್ಯಕ್ತಿಯನ್ನು ಕಾಸರಗೋಡಿಗೆ ಕರೆದೊಯ್ದು ಕೂಡಿಹಾಕಿ ಬೆದರಿಸಿ ₹5 ಲಕ್ಷ ಸುಲಿಗೆ ಮಾಡಿದ್ದಾರೆ. ಆನಂತರವೂ, ಆರೋಪಿಗಳು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದರು. 

ಈ ಬಗ್ಗೆ ಸಂತ್ರಸ್ತ ವ್ಯಕ್ತಿ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಮೇಲ್ಪರಂಬ ಠಾಣಾ ಎಸ್‌ ಐ ಸುರೇಶ್ ಮತ್ತು ಅರುಣ್ ಮೋಹನ್ ಹನಿಟ್ರಾಪ್ ತಂಡದ ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

Kerala Police arrested seven people, including a woman, on Wednesday for embezzling around Rs 5 lakh from a 59-year-old man through 'honey trap'. The arrested are Kasaragod natives Dilshad, Siddique, Lubna, Faisal and three others.