ಬ್ರೇಕಿಂಗ್ ನ್ಯೂಸ್
06-02-24 01:19 pm Bangalore Correspondent ಕ್ರೈಂ
ಬೆಂಗಳೂರು, ಫೆ.06: ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ ಮಾಡಿದ್ದ ಘಟನೆ 3-4 ದಿನಗಳ ಹಿಂದೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಈ ಕೊಲೆಗೆ ಈಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಈ ಕೊಲೆಯಲ್ಲಿ ತಂದೆಯೂ ಶಾಮೀಲಾಗಿದ್ದ ಅಂಶ ಬಯಲಾಗಿದೆ. ಕೊಲೆಗೆ ಬಳಸಲಾಗಿದ್ದ ರಾಡ್ನಲ್ಲಿ 2 ರೀತಿಯ ಫಿಂಗರ್ ಪ್ರಿಂಟ್ ಪತ್ತೆಯಾಗಿದ್ದು ತಂದೆ-ಮಗ ಸೇರಿಕೊಂಡು ಮಹಿಳೆಯನ್ನು ಕೊಲೆ ಮಾಡಿರುವುದು ಬಯಲಾಗಿದೆ.
ಫೆಬ್ರವರಿ 2ರಂದು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ ಮಾಡಿದ್ದ. ಕೊಲೆಯ ತನಿಖೆ ನಡೆಸಿದ ಪೊಲೀಸರಿಗೆ ಮತ್ತೋರ್ವ ಕೊಲೆ ಆರೋಪಿ ಇರುವುದು ಬಯಲಾಗಿದೆ. ಕೊಲೆಗೆ ಬಳಸಲಾಗಿದ್ದ ರಾಡ್ ಮೇಲೆ 2 ರೀತಿಯ ಫಿಂಗರ್ ಪ್ರಿಂಟ್ಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು. ಆಗ ರಾಡ್ ನ ಎಫ್ಎಸ್ಎಲ್ಗೆ ಕಳುಹಿಸಿದಾಗ ರಾಡ್ ಮೇಲೆ ಇರುವುದು ಮಗ ಹಾಗೂ ತಂದೆಯ ಫಿಂಗರ್ ಪ್ರಿಂಟ್ ಎಂಬುವುದು ಬಯಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಕೊಲೆಯಾದ ನೇತ್ರಾಳ ಗಂಡ ಚಂದ್ರಪ್ಪನನ್ನು ಕೆ.ಆರ್. ಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕೊಲೆಯ ಸತ್ಯ ಬಯಲಾಗಿದೆ.
ವಿಚಾರಣೆ ಮಾಡಿದಾಗ ಆರೋಪಿ ಕೊಲೆಗೆ ನಿಖರ ಕಾರಣ ಬಾಯಿಬಿಟ್ಟಿದ್ದಾನೆ. ಕೊಲೆಯಾದ ನೇತ್ರಾಳಿಗೆ ಅಕ್ರಮ ಸಂಬಂಧದ ಜೊತೆಗೆ ಕುಡಿತದ ಚಟ ಇತ್ತು. ಕೆಲವೊಮ್ಮೆ ಎರಡು ಮೂರು ದಿನಗಳ ಕಾಲ ಮನೆಗೆ ಬರ್ತಾ ಇರಲಿಲ್ಲ. ನಾವು ಊಟ ಇಲ್ಲದೆ ಉಪವಾಸ ಇರ್ತಾ ಇದ್ವಿ. ಹೀಗಾಗಿ ಮಗನ ಜೊತೆ ಸೇರಿ ಕೊಲೆ ಮಾಡಲು ನಿರ್ಧಾರ ಮಾಡಿದೆ ಎಂದು ಚಂದ್ರಪ್ಪ ಬಾಯ್ಬಿಟ್ಟಿದ್ದಾನೆ.

ಅಪ್ಪ ಜೈಲಿಗೆ ಹೋಗೋದು ಬೇಡ ಎಂದು ತಾನು ಜೈಲು ಸೇರಿದ ಮಗ ;
ಇನ್ನು ಅಪ್ಪ-ಮಗ ಸೇರಿಕೊಂಡು ತಾಯಿಯ ಕೊಲೆ ಮಾಡಿದ್ದಾರೆ. ಕೊಲೆ ಆದ ಬಳಿಕ ತಂದೆಯ ಬಗ್ಗೆ ಯೋಚನೆ ಮಾಡಿದ್ದ ಅಪ್ರಾಪ್ತ ಮಗ, ತಂದೆ ಜೈಲಿಗೆ ಹೋಗೋದು ಬೇಡ ಎಂದು ಕೊಲೆಯನ್ನ ತನ್ನ ಮೇಲೆಯೇ ಹಾಕಿಕೊಂಡಿದ್ದಾನೆ. ತಂದೆ ರಾಡ್ ನಿಂದ ಹೊಡೆದ ಬಳಿಕ ಮಗನೂ ಒಂದೆರಡು ಏಟು ಹೊಡೆದಿದ್ದಾನೆ. ಸತ್ತಿರೋದು ಕನ್ಫರ್ಮ್ ಆದ ಬಳಿಕ ಚಂದ್ರಪ್ಪ ಅಲ್ಲಿಂದ ಎಸ್ಕೇಪ್ ಆಗಿದ್ದ. ಫ್ಲಾನ್ ನಂತೆ ಮಗ ಕೆ.ಆರ್. ಪುರಂ ಠಾಣೆಗೆ ಹೋಗಿ ಸರೆಂಡರ್ ಆಗಿದ್ದಾನೆ.
ಜೈಲಿಗೆ ಹೋದ್ರೂ ಒಳ್ಳೆಯ ಎಜುಕೇಷನ್ ಸಿಗುತ್ತೆ ಅಂದಿದ್ದ ಮಗ ;
ಕೊಲೆ ಮಾಡಿದ ಬಳಿಕ ಅಪ್ಪ-ಮಗ ಇಬ್ಬರೂ ಕುಂತು ಪ್ಲಾನ್ ಮಾಡಿದ್ದಾರೆ. ಅಪ್ರಾಪ್ತರು ಜೈಲಿಗೆ ಹೋದರೆ ಶಿಕ್ಷೆ ಕಡಿಮೆ ಇರುತ್ತೆ, ಜೊತೆಗೆ ಅವರೇ ವಿದ್ಯಾಭ್ಯಾಸ ಕೊಡಿಸ್ತಾರೆ ಎಂದು ಅಪ್ಪನನ್ನು ಮಗ ಓಲೈಸಿದ್ದ. ನಾನು ಹೊರಗಡೆ ಬರೋ ಅಷ್ಟರಲ್ಲಿ ನೀನು ಚೆನ್ನಾಗಿ ಹಣ ಮಾಡಿಕೊಂಡಿರು ಎಂದು ಹೇಳಿ ತಂದೆಗೆ ಕೊಲೆಯಾದ ಸ್ಥಳದಿಂದ ಹೋಗಲು ಹೇಳಿ ಅಪ್ರಾಪ್ತ ಬಾಲಕನೇ ಠಾಣೆಗೆ ಬಂದು ಸರೆಂಡರ್ ಆಗಿದ್ದ. ಆದರೆ ಈಗ ಅಪ್ಪ ಕೂಡ ಜೈಲು ಸೇರಿದ್ದಾನೆ.
Mother killed by Son and husband over extramarital affair at k r param in Bangalore. After killing the mother son surrendered to the police saying that he killed her mother. But the fingerprints on the iron rod made it clear that even the husband was involved in the kind
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
25-01-26 09:48 am
HK News Desk
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm