ಬ್ರೇಕಿಂಗ್ ನ್ಯೂಸ್
06-02-24 10:31 pm Mangalore Correspondent ಕ್ರೈಂ
ಮಂಗಳೂರು, ಫೆ.6: 1994ರಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆಗೈದು ಜೀವಾವಧಿ ಶಿಕ್ಷೆಗೊಳಗಾಗಿದ್ದ ವಾಮಂಜೂರು ಪ್ರವೀಣ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಹಾಗೆಂದು, ತನ್ನ ಊರಿಗೆ ವಾಪಸಾಗಿಲ್ಲ. ಬದಲಿಗೆ, ಬೆಳಗಾವಿ ಜೈಲಿನ ಎದುರಲ್ಲೇ ತನ್ನ ಹಳೆ ವೃತ್ತಿಯನ್ನು ನೆಚ್ಚಿಕೊಂಡಿದ್ದು, ಟೈಲರಿಂಗ್ ಶಾಪ್ ಆರಂಭಿಸಿದ್ದಾನೆ.
ಒಂದೆಡೆ ತನ್ನ ಕುಟುಂಬಸ್ಥರಿಂದಲೇ ನಿರಾಕರಣೆ, ತಮ್ಮ ಮೇಲೆ ಸೇಡು ತೀರಿಸುತ್ತಾನೆಂಬ ಭಯದಲ್ಲಿ ಕುಟುಂಬಸ್ಥರು ಪ್ರವೀಣನನ್ನು ಜೈಲಿನಿಂದ ಬಿಡುಗಡೆ ಮಾಡಬಾರದೆಂದು ಬೇಡಿಕೆ ಇರಿಸಿದ್ದರು. ಆದರೆ ರಾಷ್ಟ್ರಪತಿಯವರಿಂದ ಕ್ಷಮಾದಾನ ದೊರೆತ ಬಳಿಕ ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂಬ ತಾಂತ್ರಿಕ ಕಾರಣದಿಂದ ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಆದರೆ ತನ್ನ ಮನೆಯವರು, ಹತ್ತಿರದ ಸಂಬಂಧಿಕರು ವಿರೋಧ ಮಾಡಿದ್ದರಿಂದ 60 ವರ್ಷದ ಪ್ರವೀಣ ಊರಿಗೆ ಮರಳಲು ಮುಂದಾಗಿಲ್ಲ. ಬದಲಿಗೆ, ತನ್ನದೇ ವೃತ್ತಿಯನ್ನು ಜೈಲಿನ ಮುಂಭಾಗದಲ್ಲೇ ಮುನ್ನಡೆಸಲು ಮುಂದಾಗಿದ್ದಾನೆ.
ಪ್ರವೀಣ್ ಕುಮಾರ್ ಜೈಲು ಸೇರುವುದಕ್ಕೂ ಮುನ್ನ ವೃತ್ತಿಯಲ್ಲಿ ಟೈಲರ್ ಆಗಿದ್ದ. ಸಿಂಗಲ್ ನಂಬರ್ ಆಟದ ಮೋಹಕ್ಕೆ ಸಿಲುಕಿ ಸಾಲದಿಂದ ಒದ್ದಾಡುತ್ತಿದ್ದ ಪ್ರವೀಣ ವಾಮಂಜೂರಿನಲ್ಲಿ ತನ್ನ ನಾಲ್ವರು ಸಂಬಂಧಿಕರನ್ನೇ ಬಲಿ ಪಡೆದು ಜೈಲು ಸೇರಿದ್ದ. ಹತ್ತಿರದ ಸಂಬಂಧಿಕರನ್ನು ಕೊಲೆಗೈದ ಪ್ರಕರಣ ಅಂದು ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಪ್ರಕರಣ ಸುಪ್ರೀಂ ಕೋರ್ಟ್ ವರೆಗೂ ಹೋಗಿ 2003ರಲ್ಲಿ ಗಲ್ಲು ಶಿಕ್ಷೆ ಖಾಯಂ ಆಗಿತ್ತು. ಆದರೆ ಸುದೀರ್ಘ ಅವಧಿಯಲ್ಲಿ ಜೈಲಿನಲ್ಲಿದ್ದ ಕಾರಣ ರಾಜೀವ ಗಾಂಧಿ ಹಂತಕರಿಗೆ ಬಿಡುಗಡೆ ಭಾಗ್ಯ ಸಿಕ್ಕಿತ್ತು. ಇದೇ ಸಂದರ್ಭದಲ್ಲಿ ವಾಮಂಜೂರು ಪ್ರವೀಣನೂ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರಿಂದ ಗಲ್ಲು ಶಿಕ್ಷೆಯಿಂದ ಪಾರಾಗಿದ್ದ.
ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿರುವ ಪ್ರವೀಣ್ ಕುಮಾರ್, ತನ್ನ ಕುಟುಂಬಸ್ಥರ ನಿರಾಕರಣೆಯಿಂದಾಗಿ ಬೆಳಗಾವಿ ಜೈಲಿನ ಉಳಿದುಕೊಂಡಿದ್ದ. ಜೈಲಿನಲ್ಲಿದ್ದಾಗ ಸಿಬಂದಿಯ ಬಟ್ಟೆ ಹೊಲಿದು ಕೊಡುತ್ತಿದ್ದ ಪ್ರವೀಣನಿಗೆ ಜೈಲಿನಲ್ಲಿ ಕೆಲಸ ಮಾಡಿದ್ದಕ್ಕಾಗಿ ಬಿಡುಗಡೆ ಸಂದರ್ಭದಲ್ಲಿ ಆರು ಲಕ್ಷ ರೂಪಾಯಿ ದುಡಿಮೆಯ ಹಣ ಸಿಕ್ಕಿತ್ತು. ಅದೇ ಹಣದಲ್ಲೀಗ ಜೈಲು ಎದುರಲ್ಲೇ ಟೈಲರಿಂಗ್ ಶಾಪ್ ಆರಂಭಿಸಿದ್ದಾನೆ. ಇದಲ್ಲದೆ, ಜೈಲಿನಲ್ಲಿದ್ದಾಗ ಸಿಬಂದಿಯ ಒಡನಾಟವನ್ನೂ ಗಳಿಸಿದ್ದ. ಈಗ ಜೈಲಿನ ಪಕ್ಕದಲ್ಲೇ ಟೈಲರಿಂಗ್ ಶಾಪ್ ಹಾಕಿದ್ದರಿಂದ ಸಿಬಂದಿಯ ಹೊಲಿಗೆಯೂ ಸಿಕ್ಕಿದ್ದು, ನಾಲ್ವರನ್ನು ಕೆಲಸಕ್ಕಿಟ್ಟು ಸ್ವಂತ ವಹಿವಾಟು ಆರಂಭಿಸಿದ್ದಾನೆ. ದಿನಕ್ಕೆ ಮೂರು ಸಾವಿರದಷ್ಟು ಕಮಾಯಿ ಆಗುತ್ತಿದ್ದು, ತಿಂಗಳಿಗೆ 90 ಸಾವಿರದಷ್ಟು ಆದಾಯ ಗಳಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ.
ಅಂದು ನಾನು ಕೊಲೆ ಮಾಡಿದ್ದೆ. ಅದಕ್ಕೆ 24 ವರ್ಷ ಶಿಕ್ಷೆಯನ್ನೂ ಅನುಭವಿಸಿದ್ದೇನೆ. ಜೈಲಿನಲ್ಲಿಯೂ ಬಟ್ಟೆ ಹೊಲಿಯುವುದನ್ನು ಮಾಡುತ್ತಿದ್ದೆ. ಜೈಲು ಸೇರುವುದಕ್ಕೂ ಮೊದಲು ಬಾಂಬೆಯಲ್ಲಿದ್ದಾಗ ಟೈಲರಿಂಗ್ ಕಲಿತಿದ್ದೆ. ಜೈಲಿನಲ್ಲಿದ್ದಾಗ ಸಿಬಂದಿ ಮತ್ತು ಅವರ ಮಕ್ಕಳ ಬಟ್ಟೆಗಳನ್ನು ಹೊಲಿದು ಕೊಡುತ್ತಿದ್ದೆ. ಅದಕ್ಕಾಗಿ ಜೈಲಿನಿಂದ ಹೊರಬಂದಾಗ ನನಗೆ ಸಂಬಳ ಕೊಟ್ಟಿದ್ದಾರೆ. ನಾನಿನ್ನು ಊರಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ. ಮನೆಯವರಿಗೆ ಬೇಡ ಅಂದ್ರೆ, ನಾನು ಅವರನ್ನು ಹುಡುಕಿ ಹೋಗಲ್ಲ ಎಂದು ಪ್ರವೀಣ ಬೆಳಗಾವಿಯಲ್ಲಿ ಮಾಧ್ಯಮಕ್ಕೆ ತಿಳಿಸಿದ್ದಾನೆ.
ಜೈಲಿನಿಂದ ಬಿಡುಗಡೆಗೊಂಡ ಬಳಿಕ ತನ್ನದೇ ಹೆಸರಿನಲ್ಲಿ ಮೊಬೈಲ್ ಮತ್ತು ಸಿಮ್ ಖರೀದಿಸಿದ್ದು, ಅದರಲ್ಲಿ ತನ್ನ ಸಹೋದರನಿಗೆ ಕರೆ ಮಾಡಿದ್ದಾನೆ. ನನ್ನನ್ನು ಇಷ್ಟು ಬೇಗ ಮರೆತಿರಲ್ಲಾ.. ತೊಂದರೆ ಇಲ್ಲ, ನೀವು ಚೆನ್ನಾಗಿರಿ ಎಂದು ಹೇಳಿದ್ದ. ಇದರಿಂದ ಮನೆಯವರಿಗೆ ಮತ್ತಷ್ಟು ಆತಂಕವಾಗಿದ್ದು, ಊರಿಗೆ ಬಂದು ಇನ್ನೇನಾದ್ರು ಅನಾಹುತ ಮಾಡುತ್ತಾನೆ ಎಂಬ ಭಯಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮತ್ತೆ ಪೊಲೀಸ್ ವರಿಷ್ಠರನ್ನು ಭೇಟಿಯಾಗಿ ಪ್ರವೀಣನಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಬಿಡಬಾರದು. ನಮಗೆ ಜೀವ ಭಯ ಇದೆ. ರಕ್ಷಣೆ ಕೊಡಬೇಕೆಂದು ಕೇಳಿಕೊಂಡಿದ್ದಾರೆ.
Mangalore notorious killer Vamanjoor Praveen turns tailor at belagavi, Family members ple for protection. Family members of the notorious killer Praveen Kumar (60), who murdered four of his close relatives in Vamanjoor in 1994 and was recently released from prison, have requested police protection due to threats on their lives by the ex-convict.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm