ಬ್ರೇಕಿಂಗ್ ನ್ಯೂಸ್
07-02-24 11:12 pm Bengaluru Correspondent ಕ್ರೈಂ
ಬೆಂಗಳೂರು, ಫೆ 07: ಜಮೀನು ಕಬಳಿಸಿದ ಕೇಸ್‌ನಲ್ಲಿ ರಾಜಕೀಯ ಮುಖಂಡ ಜೇಡರಹಳ್ಳಿ ಕೃಷ್ಣಪ್ಪನನ್ನು ಬಂಧಿಸಲಾಗಿದೆ. ಬೆಂಗಳೂರಿನ ಬ್ಯಾಡರಹಳ್ಳಿ ಠಾಣೆ ಪೊಲೀಸರು ಕೃಷ್ಣಪ್ಪನನ್ನು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಹೇರೋಹಳ್ಳಿ ಬಳಿ 16 ಎಕರೆ 37 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಜಮೀನು ಕಬಳಿಸಿರೋ ಆರೋಪ ಜೇಡರಹಳ್ಳಿ ಕೃಷ್ಣಪ್ಪ ಮೇಲಿದೆ.
ಕೃಷ್ಣಪ್ಪ ವಿರುದ್ಧ ಶಂಕರಪ್ಪ ಎಂಬುವರು ದೂರು ನೀಡಿದ್ದು, ಅದರ ಅನ್ವಯ ಪೊಲೀಸರು ಜೇಡರಹಳ್ಳಿ ಕೃಷ್ಣಪ್ಪನನ್ನ ಅರೆಸ್ಟ್ ಮಾಡಿದ್ದಾರೆ.
16 ಎಕರೆ ಜಮೀನು ಕಬಳಿಸಿದ ಆರೋಪ ;
ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಹೇರೋಹಳ್ಳಿ ಬಳಿ 16 ಎಕರೆ 37 ಗುಂಟೆ ಜಮೀನಿಗೆ ನಕಲಿ ದಾಖಲೆ ಸೃಷ್ಠಿ ಆರೋಪ ಇದೆ. ಅದು ಪಿತ್ರಾರ್ಜಿತ ಅಸ್ತಿಯಾಗಿದ್ದು, ಮರಣ ಹೊಂದಿದವರ ಹೆಸರನ್ನ ಕ್ರಿಯೆಟ್ ಮಾಡಿ ಆ ವ್ಯಕ್ತಿಯ ಮೂಲಕ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕ್ರಯ ಪತ್ರ ಮಾಡಿಸಿದ್ದಾರೆ ಅಂತ ಆರೋಪಿಸಲಾಗಿದೆ.
ಜೇಡರಹಳ್ಳಿ ಕೃಷ್ಣಪ್ಪ ಸೇರಿ 8 ಮಂದಿ ವಿರುದ್ಧ ಎಫ್‌ಐಆರ್ ;
ಶಂಕರಪ್ಪ ಎಂಬುವರ ಜಮೀನಿನ ಮೇಲೆ ನಕಲಿ ದಾಖಲೆ ಸೃಷ್ಠಿಸಿರೋ ಬಗ್ಹೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ಜೇಡರಹಳ್ಳಿ ಕೃಷ್ಣಪ್ಪ ಸೇರಿ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಬೇರೆಯವರ ಪಿತ್ರಾರ್ಜಿತ ಆಸ್ತಿ ಕಬಳಿಕೆ ;
ಬೆಂಗಳೂರು ಉತ್ತರ ತಾಲೂಕಿನ ಹೇರೋಹಳ್ಳಿ ಗ್ರಾಮದ ಜಮೀನಿನ ಮಾಲೀಕ ಶಂಕರಪ್ಪ ಎಂಬವರು, 16 ಎಕರೆ 37 ಗುಂಟೆ ಜಮೀನು ಹೊಂದಿದ್ದರಂತೆ. ಇದು ಶಂಕರಪ್ಪ ಅವರ ಪಿತ್ರಾರ್ಜಿತ ಆಸ್ತಿಯಾಗಿದ್ದು, ಇತ್ತೀಚಿಗೆ ಇದನ್ನು ಜೇಡರಹಳ್ಳಿ ಕೃಷ್ಣಪ್ಪ ಕಬಳಿಸಿದ್ದಾರೆ ಅಂತ ಆರೋಪಿಸಿದ್ದಾರೆ.
ಜಮೀನು ಕೆಲಸ ಮಾಡಿಸುತ್ತಿದ್ದಾಗ ಬೆದರಿಕೆ ;
ತಮ್ಮ ಪಾಲಿನ ನಾಲ್ಕು ಎಕರೆ 13 ಗುಂಟೆ ಜಾಗವನ್ನು ಕೃಷ್ಣಪ್ಪ ಅಭಿವೃದ್ಧಿ ಮಾಡಿಸ್ತಿದ್ರು. ಈ ನಡುವೆ ಅಲ್ಲಿಗೆ ಬಂದಿದ್ದ ಜೇಡರಹಳ್ಳಿ ಕೃಷ್ಣಪ್ಪ, ಗೋವಿಂದರಾಜು ಹಾಗೂ ಇತರರು ಶಂಕ್ರಪ್ಪಗೆ ಜೀವ ಬೆದರಿಕೆ ಹಾಕಿದ್ದಾರಂತೆ. ನಮ್ಮ ಹೆಸ್ರಲ್ಲಿ ಜಮೀನಿದೆ, ಅಭಿವೃದ್ಧಿ ಕೆಲಸ ನಿಲ್ಲಿಸಿ, ಜಾಗ ಖಾಲಿ ಮಾಡುವಂತೆ ಬೆದರಿಕೆ ಹಾಕಿದ್ರಂತೆ.
ಜೇಡರಹಳ್ಳಿ ಕೃಷ್ಣಪ್ಪ ಎ 1 ಆರೋಪಿ ;
ಇದರಿಂದ ಭಯಭೀತರಾಗಿರೋ ಶಂಕ್ರಪ್ಪರಿಂದ ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿದ್ರು. ಈ ದೂರಿನ ಅನ್ವಯ ಜೇಡರಹಳ್ಳಿ ಕೃಷ್ಣಪ್ಪನನ್ನ ಬಂಧಿಸಿರುವ ಬ್ಯಾಡರಹಳ್ಳಿ ಪೊಲೀಸರು, ವಿಚಾರಣೆ ನಡೆಸ್ತಿದ್ದಾರೆ. ಜೇಡರಹಳ್ಳಿ ಕೃಷ್ಣಪ್ಪ ಎ 1 ಆರೋಪಿಯಾಗಿದ್ದು, ಕೃಷ್ಣಪ್ಪ ವಿರುದ್ದ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲು ;
ಇದೀಗ ಜೇಡರಹಳ್ಳಿ ಕೃಷ್ಣಪ್ಪ ಸೇರಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸೆಕ್ಷನ್ 506, 341, 34, 504, 406, 420, 465, 468, 471 ಮತ್ತು 323ರ ಅಡಿಯಲ್ಲಿ 8 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ
Former Don Jedarahalli Krishnappa has been arrested by byadarahalli police for faking land documents of 16 acres in Bangalore. A case was filed by orginal owner Shankarappa.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 12:33 pm
Mangalore Correspondent
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm