ಬ್ರೇಕಿಂಗ್ ನ್ಯೂಸ್
15-02-24 03:01 pm HK News Desk ಕ್ರೈಂ
ಶಿವಮೊಗ್ಗ, ಫೆ.15: ಪ್ರೀತಿಸಿ ಮದುವೆಯಾಗಿ ಯುವಕರು ಕೆಲವೊಮ್ಮೆ ಕೈಕೊಡುವುದು ಕೇಳಿದ್ದೇವೆ. ಬೇರೆ ಮದುವೆಯಾಗಿ ವರದಕ್ಷಿಣೆ ಪಡೆದು ಮೋಸ ಮಾಡಿರೋದನ್ನೂ ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ಮೊದಲ ಮದುವೆ ಮುಚ್ಚಿಟ್ಟು ಯುವಕನ ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಕೈಕೊಟ್ಟ ಆರೋಪ ಕೇಳಿಬಂದಿದ್ದು ಯುವಕನೇ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಚೇತನ್ ಎಂಬ ಯುವಕ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ತನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ, ತನ್ನ ಬಳಿ ಇದ್ದ ಒಡವೆಯನ್ನೂ ಹೊತ್ತೊಯ್ದು ಮೋಸ ಮಾಡಿದ್ದಾಳೆಂದು ದೂರಿನಲ್ಲಿ ತಿಳಿಸಿದ್ದಾನೆ. ಯುವಕ ಶಿವಮೊಗ್ಗದಲ್ಲಿ ಸಣ್ಣ ಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡಿದ್ದು, ಈ ವೇಳೆ ಯುವತಿ ಪರಿಚಯ ಆಗಿತ್ತು. ಆನಂತರ, ಪ್ರೀತಿಗೆ ತಿರುಗಿ ಯುವಕ ತನ್ನ ಕುಟುಂಬಸ್ಥರನ್ನು ಒಪ್ಪಿಸಿ ಮದುವೆಗೆ ರೆಡಿಯಾಗಿದ್ದ. ಇದೇ ವೇಳೆ ತನ್ನ ವರಸೆ ಶುರು ಮಾಡಿದ್ದ ಯುವತಿ, ನಾವು ಊರಿನಲ್ಲಿ ಮನೆ ಕಟ್ಟುತ್ತಿದ್ದು, ಮನೆ ಕಟ್ಟುವ ವರೆಗೂ ಅಪ್ಪ ನನ್ನ ಮದುವೆ ಒಪ್ಪೋದಿಲ್ಲ. ಮನೆ ನಿರ್ಮಾಣಕ್ಕೆ ನಿನ್ನ ಬಳಿ ಹಣ ಇದ್ದರೆ ಕೊಡು, ಬೇಗ ಮದುವೆಯಾಗಬಹುದು ಕೇಳಿದ್ದಳಂತೆ. ಆದರೆ ಚೇತನ್ ಬಳಿ ಹಣ ಇಲ್ಲದ ಕಾರಣ ಆಕೆಯೇ ಬ್ಯಾಂಕ್ವೊಂದರಲ್ಲಿ ಆತನ ಹೆಸರಿನ ಮೇಲೆ 10 ಲಕ್ಷ ಲೋನ್ ಪಡೆದಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾನೆ.
ಇತ್ತ ಮನೆ ನಿರ್ಮಾಣ ಆಗುತ್ತಿದ್ದಂತೆ ಹೊಸ ವರಸೆ ತೆಗೆದಿದ್ದ ಯುವತಿ, ಅಪ್ಪ ನಮ್ಮ ಮದುವೆಗೆ ಒಪ್ಪುತ್ತಿಲ್ಲ. ನೀವೇ ಮದುವೆ ಎಲ್ಲಾ ಖರ್ಚು ಇಟ್ಟುಕೊಂಡರೆ ಮದುವೆ ಮಾಡಿಕೊಳ್ಳೋಣ ಅಂತ ಹೇಳಿ ಮದುವೆ ಒಪ್ಪಿಸಿದ್ದಳು. ಇನ್ನು ಪ್ರೀತಿಸಿದ ಯುವತಿಯ ಕೈ ಹಿಡಿಯಲು ಯುವಕ, ಮನೆಯವರ ಬಳಿ ಹೇಳಿ ಸಾಲ ಮಾಡಿ ಮದುವೆ ಮಾಡಿಕೊಂಡಿದ್ದಾನೆ. ಆದರೆ ಮದುವೆಯಾದ ಎರಡು ತಿಂಗಳು ಚೆನ್ನಾಗಿದ್ದ ಯುವತಿ, ಆ ಬಳಿಕ ಏಕಾಏಕಿ ಬೇರೆ ಯುವಕನ ಜೊತೆ ಮದುವೆಯಾಗಿರುವ ಫೋಟೋ ತೋರಿಸಿದ್ದು ನನಗೆ ನಿನ್ನ ಜೊತೆ ಇರೋದು ಇಷ್ಟ ಇಲ್ಲ ಎಂದಿದ್ದಾಳೆ. ಅಲ್ಲದೇ ಮನೆಯಲ್ಲಿದ್ದ ಒಡವೆ, ಸುಮಾರು 6 ಲಕ್ಷ ಹಣ ತೆಗೆದುಕೊಂಡು ತವರಿಗೆ ಎಸ್ಕೇಪ್ ಆಗಿದ್ದಾಳೆ.
ಇದರಿಂದ ಮನನೊಂದ ಯುವಕ ಹಿರಿಯರ ಸಮ್ಮುಖದಲ್ಲಿ ಆಕೆಯ ಕುಟುಂಬದ ಜೊತೆಗೆ ರಾಜಿ ನಡೆಸಿದ್ದಾನೆ. ಆದರೆ, ಈ ವೇಳೆ ನೀವು ನಮ್ಮ ಜಾತಿಯವರು ಅಲ್ಲ. ಕೆಳ ಜಾತಿಯವನು. ಮತ್ತೊಮ್ಮೆ ಮನೆಗೆ ಬಂದರೆ ಕೊಲೆ ಮಾಡುವುದಾಗಿ ಯುವತಿ ಪೋಷಕರು ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾನೆ. ಇಷ್ಟೆಲ್ಲ ಆದ ಮೇಲೆ ಯುವನ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮೊದಲೇ ತನ್ನ ಮದುವೆಯಾಗಿದ್ದ ವಿಚಾರ ಮುಚ್ಚಿಟ್ಟು ನನ್ನನ್ನು ಮದುವೆಯಾಗಿ ಮೋಸ ಮಾಡಿದ್ದಾಳೆ. ಮನೆ ನಿರ್ಮಾಣ, ಮದುವೆ ಖರ್ಚು, ಒಡವೆ ಅಂತ ಲಕ್ಷಾಂತರ ರೂಪಾಯಿ ತೆಗೆದುಕೊಂಡಿದ್ದಾಳೆ. ಮದುವೆ ಸಾಲ ತೀರಿಸಲು ಅಂತ ಮನೆಯಲ್ಲಿ ಇಟ್ಟಿದ್ದ ಹಣವನ್ನು ಎತ್ತಿಕೊಂಡು ತವರಿಗೆ ಹೋಗಿದ್ದಾಳೆ ಅಂತ ಆರೋಪಗಳನ್ನು ಮಾಡಿದ್ದಾನೆ.
Shivamogga married woman cheats youth with gold and cash case filed at Police station. Youth who got married didnt know that the girl he married was already married.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 12:33 pm
Mangalore Correspondent
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm