ಬ್ರೇಕಿಂಗ್ ನ್ಯೂಸ್
21-02-24 09:49 pm Bangalore Correspondent ಕ್ರೈಂ
ಬೆಂಗಳೂರು, ಫೆ 21: ಫೇಸ್‌ಬುಕ್‌ನಲ್ಲಿ ಪರಿಚಯವಾದವರನ್ನು ನಂಬಿ ಉದ್ಯಮಿಯೊಬ್ಬರು ಬರೋಬ್ಬರಿ 6.01 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಂಪನಿ ಷೇರು ಮತ್ತು ಐಪಿಒಗಳನ್ನು ರಿಯಾಯಿತಿ ದರದಲ್ಲಿ ನೀಡುವುದಾಗಿ ಉದ್ಯಮಿಯೊಬ್ಬರಿಂದ ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
72 ವರ್ಷದ ದೂರುದಾರ ಉದ್ಯಮಿಗೆ ಕಂಪನಿಯ ಪ್ರತಿನಿಧಿಗಳೆಂದು ಫೇಸ್‌ಬುಕ್ ಮೂಲಕ ಪರಿಚಯವಾದ ಆರೋಪಿಗಳು ವಿವಿಧ ಕಂಪನಿಗಳ ಷೇರುಗಳು ಹಾಗೂ ಐಪಿಒಗಳನ್ನು ರಿಯಾಯಿತಿ ದರದಲ್ಲಿ ಕೊಡುವುದಾಗಿ ನಂಬಿಸಿದ್ದಾರೆ. ವಾಟ್ಸ್ಯಾಪ್ ಮೂಲಕ ಸಂಪರ್ಕದಲ್ಲಿದ್ದ ಆರೋಪಿಗಳು ಇದಕ್ಕೆ ಪ್ರತಿಯಾಗಿ ಕಳೆದ ಡಿಸೆಂಬರ್‌ನಿಂದ ಫೆಬ್ರವರಿ 8ರ ವರೆಗಿನ ಅವಧಿಯಲ್ಲಿ ಹಂತ ಹಂತವಾಗಿ 6.01 ಕೋಟಿ ರೂ. ವರ್ಗಾಯಿಸಿಕೊಂಡಿದ್ದಾರೆ. ಆದರೆ, ಈ ಕಂಪನಿಗಳ ವಿರುದ್ಧ ಕೇರಳದ ಹೂಡಿಕೆದಾರರೊಬ್ಬರು ದೂರು ಸಲ್ಲಿಸಿರುವುದು ತಿಳಿದಾಗ ಇದು ವಂಚನೆಯ ಜಾಲವೆಂದು ಅನುಮಾನಗೊಂಡ ಉದ್ಯಮಿ ತಮ್ಮ ಹಣವನ್ನು ವಾಪಸ್ ಕೇಳಿದ್ದಾರೆ. ಆದರೆ, ಆರೋಪಿತ ಕಂಪನಿಗಳು ಹಣ ನೀಡದೇ, ಅನೇಕ ಕಾರಣ ನೀಡಿ ವಿಳಂಬ ಮಾಡುತ್ತಿವೆ ಎಂದು ದೂರು ನೀಡಿದ್ದಾರೆ.
ಸದ್ಯ ಹಣ ಕಳೆದುಕೊಂಡಿರುವ ಉದ್ಯಮಿ ಆರೋಪಿ ಕಂಪನಿಗಳ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾತನಾಡಿ, ''ಫೇಸ್‌ಬುಕ್ ಜಾಹೀರಾತಿನ ಮೂಲಕ ದೂರುದಾರರಿಗೆ ಆರೋಪಿಗಳ ಪರಿಚಯವಾಗಿದೆ. ನಂತರ ಷೇರುಗಳು, ಐಪಿಒಗಳನ್ನು ಕೊಡಿಸುವುದಾಗಿ ಸುಮಾರು 26 ಖಾತೆಗಳಿಗೆ ಹಣ ಹಾಕಿಸಿಕೊಂಡು ವಂಚಿಸಲಾಗಿದೆ. ಪ್ರತಿನಿತ್ಯ ಈ ರೀತಿ ಷೇರು ಟ್ರೇಡಿಂಗ್ ಹೆಸರಿನಲ್ಲಿ ವಂಚಿಸುತ್ತಿರುವ 3ರಿಂದ 4 ಪ್ರಕರಣಗಳು ವರದಿಯಾಗುತ್ತಿವೆ. ಇಂಥಹ ಪ್ರಕರಣಗಳಲ್ಲಿ ಪರಿಚಯವಾಗುವ ಆರೋಪಿಗಳು ವಾಟ್ಸ್ಯಾಪ್ ಗ್ರೂಪ್‌ಗಳಿಗೆ ಆಹ್ವಾನಿಸುತ್ತಾರೆ.
ಅಲ್ಲಿರುವ ಬೇರೆ ಸದಸ್ಯರು ತಮಗೆ ಲಾಭ ಬಂದಿರುವಂತೆ ಸಂದೇಶಗಳನ್ನು ಕಳುಹಿಸಿ ಇತರರನ್ನ ಹುರಿದುಂಬಿಸುತ್ತಾರೆ. ಅಂತಹ ಗ್ರೂಪ್‌ಗಳಲ್ಲಿ ಬೇರೆ ಸದಸ್ಯರು ಇರಬಹುದು, ಇರದೆಯೂ ಇರಬಹುದು ಅಥವಾ ವಂಚಕರೇ ಅದರ ಸದಸ್ಯರೂ ಆಗಿರಬಹುದು. ಬೇರೆ ಬೇರೆ ಖಾತೆಗಳಿಗೆ ಹಣ ಹಾಕಿಸಿಕೊಂಡು ಲಾಭ ಬಂದಂತೆ ತೋರಿಸಿ ವಂಚಿಸುತ್ತಿದ್ದಾರೆ. ಆದ್ದರಿಂದ ನಾವು ಈಗ ಇಂಥಹ ಇತರೆ ಪ್ರಕರಣಗಳನ್ನು ಪರಿಶೀಲಿಸಿ, ಈ ವಂಚಿಸುವಂತಹ ಯಾವ್ಯಾವ ಆ್ಯಪ್ಗಳಿವೆ, ವೆಬ್‌ಸೈಟ್‌ಗಳಿವೆ? ಅವು ಪ್ಲೇ ಸ್ಟೋರ್ ನಲ್ಲಿವೆಯಾ? ಆರ್ಬಿಐ ಅಥವಾ ಸೆಬಿಯಿಂದ ಅನುಮೋದಿಸಲ್ಪಟ್ಟಿವೆಯಾ ಎಂದು ಪರಿಶೀಲನೆ ಮಾಡುತ್ತಿದ್ದೇವೆ'' ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.
A businessman in Bengaluru has been duped of Rs 6.01 crore by trusting people he met on Facebook. The incident took place in Bengaluru. The company was duped of money by transferring money from a businessman offering shares and IPOs at discounted rates. An FIR has been registered at the cyber crime police station in this regard.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm