ಲಂಡನ್ ಡಾಕ್ಟರ್ ಎಂದು ಹೇಳಿ ಮಲ್ಪೆಯ ಮಹಿಳೆಗೆ ವಂಚನೆ ;  ದೆಹಲಿ ಏರ್ಪೋರ್ಟಲ್ಲಿ ಸಿಕ್ಕಿಬಿದ್ದ ನೆಪದಲ್ಲಿ 4.96 ಲಕ್ಷ ದೋಖಾ 

23-02-24 07:24 pm       Udupi Correspondent   ಕ್ರೈಂ

ಲಂಡನ್ ಮೂಲದ ಡಾಕ್ಟರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಮಲ್ಪೆಯ ಮಹಿಳೆಯೊಬ್ಬರನ್ನು ಯಾಮಾರಿಸಿ 4.96 ಲಕ್ಷ ರೂಪಾಯಿ ಪೀಕಿಸಿದ ಘಟನೆ ನಡೆದಿದೆ. ಹಣ ಕಳಕೊಂಡ ಮಹಿಳೆ ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ, ಫೆ.23: ಲಂಡನ್ ಮೂಲದ ಡಾಕ್ಟರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಮಲ್ಪೆಯ ಮಹಿಳೆಯೊಬ್ಬರನ್ನು ಯಾಮಾರಿಸಿ 4.96 ಲಕ್ಷ ರೂಪಾಯಿ ಪೀಕಿಸಿದ ಘಟನೆ ನಡೆದಿದೆ. ಹಣ ಕಳಕೊಂಡ ಮಹಿಳೆ ಮಲ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮಲ್ಪೆ ನಿವಾಸಿ ವಿನಿತಾ ಎಂಬ ಮಹಿಳೆಗೆ ಜನವರಿ 24ರಂದು ವಾಟ್ಸಪ್ ನಲ್ಲಿ ವ್ಯಕ್ತಿಯೊಬ್ಬ ಪರಿಚಯ ಆಗಿದ್ದು ನಿಮ್ಮ ಬಿಸಿನೆಸ್ನಲ್ಲಿ ಪಾಲುದಾರಿಕೆ ಮಾಡ್ತೀನಿ ಎಂದಿದ್ದ. ಅಲ್ಲದೆ, ತಾನು ಲಂಡನ್ನಲ್ಲಿ ಡಾಕ್ಟರ್ ಆಗಿದ್ದು, ಸದ್ಯದಲ್ಲೇ ಭಾರತಕ್ಕೆ ಬರಲು ಪ್ಲಾನ್ ಮಾಡಿಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದ. ಫೆ.2ರಂದು ಬೇರೊಂದು ನಂಬರಲ್ಲಿ ಫೋನ್ ಬಂದಿತ್ತು. ದೆಹಲಿ ಏರ್ಪೋರ್ಟ್ ಕಚೇರಿಯಿಂದ ಫೋನ್ ಮಾಡುತ್ತಿದ್ದೇನೆಂದು ಹೇಳಿದ್ದ ಆ ವ್ಯಕ್ತಿ, ಲಂಡನ್ ಡಾಕ್ಟರಿನ ಫ್ರೆಂಡ್ ಎಂದು ಹೇಳಿದ್ದ. ಡಾಕ್ಟರನ್ನು ಏರ್ಪೋರ್ಟ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಅವರನ್ನು ಬಿಡಿಸಿ ತರಲು ದಂಡ ಕಟ್ಟಬೇಕಾಗಿದೆ ಎಂದಿದ್ದ.

ಆನಂತರವೂ ಫೋನ್ ಬಂದಿದ್ದು, ಡಾಕ್ಟರ್ ಏರ್ಪೋರ್ಟಲ್ಲಿ ಸಿಕ್ಕಿಬಿದ್ದಿದ್ದಾರೆ. ದಂಡ ಕಟ್ಟಲು ಹಣ ಇಲ್ಲ, ಸಹಾಯ ಮಾಡಬಹುದೇ ಎಂದು ಆ ವ್ಯಕ್ತಿ ಕೇಳಿಕೊಂಡಿದ್ದ. ಅದರಂತೆ, ವಿನಿತಾ ಅವರು ಫೆ.16ರಿಂದ 20ರ ನಡುವೆ ತನ್ನ ಕೆನರಾ ಬ್ಯಾಂಕ್ ಖಾತೆಯಿಂದ ಫೋನ್ ಪೇ ಮೂಲಕ 4.96 ಲಕ್ಷ ರೂ. ಹಣ ಕಳಿಸಿದ್ದರು. ಹಣ ಕಳಿಸಿದ ಬಳಿಕ ಫೋನ್ ಸಂಪರ್ಕ ಕಡಿತ ಆಗಿತ್ತು. ಇದರಿಂದ ಮೋಸದ ಅರಿವಾದ ಮಹಿಳೆ ಮಲ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.

An unidentified individual, masquerading as a London-based doctor, has perpetrated a fraud, swindling a woman here of Rs 4.96 lac. Vinita, a Malpe resident and business partner, encountered this individual online in pursuit of continuing her business ventures.