Davanagere DHM Church Pastor Rajashekar, Marriage ; ದಾವಣಗೆರೆಯಲ್ಲಿ ದಲಿತ ಮಹಿಳೆಯರಿಗೆ ಮೋಸ, ಮದುವೆಯಾಗೋದಾಗಿ ನಂಬಿಸಿ ಕ್ರಿಸ್ತಿಯನ್ ಪಾದ್ರಿಯಿಂದಲೇ ವಂಚನೆ, ಮೂರನೇ ಮದುವೆಗೆ ಯತ್ನ, ತಂದೆಯ ಮೋಸದಾಟ ಬಯಲಿಗೆಳೆದ ಪಾಸ್ಟರ್ ಪುತ್ರಿ !

29-02-24 10:56 pm       HK NEWS   ಕ್ರೈಂ

ದಾವಣಗೆರೆಯಲ್ಲಿ ಕ್ರಿಸ್ತಿಯನ್ ಪಾದ್ರಿಯೊಬ್ಬ ಅಮಾಯಕ ಮಹಿಳೆಯರನ್ನು ವಂಚಿಸಿ ಮೂರನೇ ಮದುವೆಯಾಗಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ತನ್ನ ತಂದೆ ತನ್ನದೇ ಪ್ರಾಯದ ಯುವತಿಯನ್ನು ಮೂರನೇ ಮದುವೆಯಾಗುತ್ತಿರುವ ಬಗ್ಗೆ ತಿಳಿದ ಪಾದ್ರಿಯ ಪುತ್ರಿಯೇ ಘಟನೆಯನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

ದಾವಣಗೆರೆ, ಫೆ.29: ದಾವಣಗೆರೆಯಲ್ಲಿ ಕ್ರಿಸ್ತಿಯನ್ ಪಾದ್ರಿಯೊಬ್ಬ ಅಮಾಯಕ ಮಹಿಳೆಯರನ್ನು ವಂಚಿಸಿ ಮೂರನೇ ಮದುವೆಯಾಗಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ತನ್ನ ತಂದೆ ತನ್ನದೇ ಪ್ರಾಯದ ಯುವತಿಯನ್ನು ಮೂರನೇ ಮದುವೆಯಾಗುತ್ತಿರುವ ಬಗ್ಗೆ ತಿಳಿದ ಪಾದ್ರಿಯ ಪುತ್ರಿಯೇ ಘಟನೆಯನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.

ದಾವಣಗೆರೆ ಜಯನಗರ ಚರ್ಚ್ ಮುಖ್ಯಸ್ಥ ಬಿ.ರಾಜಶೇಖರ್(58) ಆರೋಪಿತ ಪಾದ್ರಿಯಾಗಿದ್ದು ಆತನ ಸ್ವಂತ ಪುತ್ರಿ ಡೈಸಿ ಪ್ರಿಯಾ ಪ್ರಕರಣ ಬಯಲಿಗೆಳೆದವರು. ಪಾದ್ರಿ ಚರ್ಚ್ ಪ್ರಾರ್ಥನೆಗೆ ಬರುತ್ತಿದ್ದ ಅಮಾಯಕ ಮಹಿಳೆಯರನ್ನೇ ಪುಸಲಾಯಿಸಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು. ಇದೀಗ ದಲಿತ ಸಮುದಾಯದ 33 ವರ್ಷದ ಯುವತಿಯನ್ನು ಮೂರನೇ ಮದುವೆಯಾಗಲು ಉಪ ನೊಂದಣಿ ಕಚೇರಿಗೆ ಪಾದ್ರಿ ಅರ್ಜಿ ಸಲ್ಲಿಸುತ್ತಿದ್ದಂತೆ ಪ್ರಕರಣ ಹೊರಬಂದಿದೆ.

58 ವರ್ಷದ ವ್ಯಕ್ತಿ ನನಗಿಂತ ಚಿಕ್ಕ ವಯಸ್ಸಿನ ಯುವತಿ ಜೊತೆ ಮದುವೆಗೆ ಮುಂದಾಗಿದ್ದಾರೆ. ನನಗೆ 33 ವರ್ಷ, ಮದುವೆಯಾಗೋ ಹುಡುಗಿಗೆ 30 ವರ್ಷ. 58 ವರ್ಷದ ಇವರಿಗೆ ಏನಾದರೂ ಹೆಚ್ಚು ಕಡಿಮೆಯಾದರೆ ಆ 30 ವರ್ಷದ ಹುಡುಗಿ ಕತೆ ಏನೆಂದು ಪುತ್ರಿ ಡೈಸಿ ಪ್ರಶ್ನೆ ಮಾಡಿದ್ದಾರೆ. ಪಾದ್ರಿ ರಾಜಶೇಖರ್ ಹಲವು ವರ್ಷಗಳಿಂದ ಈ ರೀತಿಯ ಕೃತ್ಯ ಮಾಡಿಕೊಂಡು ಬಂದಿದ್ದಾರೆ. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ, ಕ್ರಿಶ್ಚಿಯನ್ ಸಮುದಾಯದ ಪಾಸ್ಟರ್ ಅಸೋಸಿಯೇಷನ್, ಕ್ರಿಶ್ಚಿಯನ್ ಪೋರಂ ಫಾರ್ ಹ್ಯೂಮನ್ ರೈಟ್ಸ್ ಮತ್ತು ದಾವಣಗೆರೆ ಜಿಲ್ಲಾ ಕ್ರಿಶ್ಚಿಯನ್ ವೆಲ್ಫೇರ್ ಆಸೋಷಿಯೇಶನ್  ಘಟನೆಯನ್ನು ಖಂಡಿಸಿವೆ.

ಇದೇ ರೀತಿ ಆರು ಜನ ಮಹಿಳೆಯರಿಗೆ ವಂಚನೆ ಮಾಡಿದ್ದಾರೆಂದು ಸ್ವತಃ ಆತನ ಪುತ್ರಿ ಡೈಸಿ ಗಂಭೀರ ಆರೋಪ ಮಾಡಿದ್ದಾರೆ. ಪಾದ್ರಿ ರಾಜಶೇಖರ್ ದುರ್ವರ್ತನೆಯ ಬಗ್ಗೆ ಆತನ ಮಗಳ ಬಳಿ ಮಹಿಳೆಯರು ಸಂಕಟ ತೋಡಿಕೊಂಡಿದ್ದರು. ಓರ್ವ ಶಿಕ್ಷಕಿಗೂ ಅನ್ಯಾಯ ಮಾಡಿದ್ದಾರೆ. ಅವರ ಬಾಳಲ್ಲೂ ಆಟ ಆಡಿದ್ದಾರೆ. ಆ ಶಿಕ್ಷಕಿಯ ಸರ್ವಿಸ್ ರಿಜಿಸ್ಟರ್ ನಲ್ಲಿ ನಾಮಿನಿ ಆಗಿ ರಾಜಶೇಖರ್ ಹೆಸರು ಇರುವ ದಾಖಲೆಯನ್ನೂ ಪುತ್ರಿ ಬಿಡುಗಡೆ ಮಾಡಿದ್ದಾರೆ.  

ಇದೇ ವೇಳೆ, ದಲಿತ ಮಹಿಳೆಯನ್ನು ಆಮಿಷ ಒಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾನೆಂದು ರಾಜಶೇಖರ್ ವಿರುದ್ಧ ಬಂಜಾರ ಸಮಾಜ ಸಂಘದವರು ಆರೋಪ ಮಾಡಿದ್ದಾರೆ. ರಾಜಶೇಖರ್ 33 ವರ್ಷದ ಜ್ಯೋತಿಬಾಯಿ ಅವರನ್ನು ಮತಾಂತರಗೊಳಿಸಿ ವಿವಾಹಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ಚರ್ಚ್ ಪಾದ್ರಿ ವಿರುದ್ಧ ಶಿಕ್ಷಕಿ ದೂರು;

ಇದೇ ವೇಳೆ, ಮದುವೆ ಆಗುತ್ತೇನೆ ಎಂದು ಎಲ್ಲ ರೀತಿ ಬಳಸಿಕೊಂಡು ಈಗ ಬೇರೊಬ್ಬಳ ಜೊತೆ ವಿವಾಹ ಆಗುತ್ತಿದ್ದಾರೆಂದು ಆರೋಪಿಸಿ ಶಿಕ್ಷಕಿ ಶ್ಯಾಮಲಮ್ಮ ಎಂಬವರು ರಾಜಶೇಖರ್ ವಿರುದ್ಧ ದಾವಣಗೆರೆ ಎಸ್ಪಿ ಕಚೇರಿಯಲ್ಲಿ ದೂರು ನೀಡಿದ್ದಾರೆ. ಗಂಡನಿಂದ ಬೇರ್ಪಡಿಸಿ ನನ್ನ ಜೊತೆ ದೈಹಿಕ ಸಂಪರ್ಕ ಹೊಂದಿದ್ದರು. ನನ್ನ ಮಕ್ಕಳು ಮತ್ತು ನನಗೆ ಹಲ್ಲೆ ಮಾಡುತ್ತಿದ್ದರು. ದಲಿತ ಕುಟುಂಬದವಳಾಗಿದ್ದರಿಂದ ನನಗೆ ಜಾತಿ ನಿಂದನೆ ಮತ್ತು ಅನೈತಿಕ ಸಂಬಂಧವಿದೆ ಎಂದು ಆರೋಪ ಮಾಡುತ್ತಾರೆ. ಬ್ಯಾಂಕ್ ಖಾತೆ ನಿಭಾಯಿಸುವ ನೆಪದಲ್ಲಿ 30 ಲಕ್ಷದಷ್ಟು ಹಣ ಬಂಗಾರ ಬೆಳ್ಳಿ ತೆಗೆದುಕೊಂಡಿದ್ದಾರೆ. ನನ್ನ ಗಂಡನೆಂದು ಸರ್ವಿಸ್ ಪುಸ್ತಕದಲ್ಲಿ ಹಲ್ಲೆ ಮಾಡಿ ತಮ್ಮ ಹೆಸರು ಸೇರಿಸಿದ್ದಾರೆ ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ.

Davanagere DHM Church Pastor Rajashekar was accused of cheating in marriage; a third marriage was exposed; and daughter Daisy filed a complaint against her own father, Pastor Rajashekar. Pastor Rajashekar runs a church called Hosanna Church Jayanagar (DHM Church).