ಬ್ರೇಕಿಂಗ್ ನ್ಯೂಸ್
01-03-24 08:33 pm Bangalore Correspondent ಕ್ರೈಂ
ಬೆಂಗಳೂರು, ಮಾ.1: ಕರಾವಳಿಯಲ್ಲಿ ಭಾರೀ ಸಂಚಲನ ಮೂಡಿಸಿದ್ದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದಲ್ಲಿ ಆರೋಪಿಗಳು ಸಾಕ್ಷಿದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಹೀಗಾದಲ್ಲಿ ಸಂತ್ರಸ್ತನಿಗೆ ಪ್ರಕರಣದಲ್ಲಿ ನ್ಯಾಯ ದೊರಕಿಸಲು ಸಾಧ್ಯವಿಲ್ಲ. ಹಾಗಾಗಿ ಪ್ರಕರಣವನ್ನು ಬೆಂಗಳೂರಿನ ನ್ಯಾಯಾಲಯದಲ್ಲೇ ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ಆರೋಪಿಗಳಿಗೆ ರಾಜಕೀಯ ಪ್ರಭಾವಿಗಳ ಬೆಂಬಲ ಇರುವುದರಿಂದ ಸಾಕ್ಷಿದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅಲ್ಲದೆ, ಮಂಗಳೂರಿನ ಕೋರ್ಟಿನಲ್ಲಿ ಆರೋಪಿಗಳು, ಸಾಕ್ಷಿದಾರರು, ಪೊಲೀಸರು ಜೊತೆಯಾಗಿ ಇರುತ್ತಿದ್ದಾರೆ. ಇದರಿಂದ ಸಾಕ್ಷ್ಯದಾರರ ಮೇಲೆ ಆರೋಪಿಗಳು ಪ್ರಭಾವ ಬೀರಲು ಕಾರಣವಾಗುತ್ತದೆ. ಇದೇ ಕಾರಣದಿಂದ ಸಾಕ್ಷ್ಯದಾರರು ಹಿಂದೆ ಕೋರ್ಟಿನಲ್ಲಿ ನೀಡಿದ್ದ ಹೇಳಿಕೆಯನ್ನೂ ಒಪ್ಪುತ್ತಿಲ್ಲ ಎಂಬಿತ್ಯಾದಿ ಅಂಶಗಳನ್ನು ಮುಂದಿಟ್ಟು ಒಟ್ಟು ವಿಚಾರಣೆ ಪ್ರಕ್ರಿಯೆಯನ್ನು ಬೆಂಗಳೂರಿಗೆ ಒಯ್ಯಲು ವಿನಾಯಕ ಬಾಳಿಗಾ ಪರ ವಾದಿಸುತ್ತಿರುವ ಖ್ಯಾತ ವಕೀಲ, ಈ ಪ್ರಕರಣದಲ್ಲಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಎಸ್.ಬಾಲಕೃಷ್ಣನ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೈಕೋರ್ಟಿನಲ್ಲಿ ಅರ್ಜಿ ವಿಚಾರಣೆಗೆ ಬಂದಿದ್ದು, ಮಂಗಳೂರಿನ ಪೊಲೀಸರಿಗೆ ನೋಟೀಸ್ ಜಾರಿ ಮಾಡಿದೆ. ಅಲ್ಲದೆ, ಪ್ರತಿವಾದಿಗಳಿಗೂ ನೋಟೀಸ್ ಮಾಡಿದೆ ಎಂದು ತಿಳಿದುಬಂದಿದೆ.
2023ರ ಜನವರಿಯಿಂದ ಮಂಗಳೂರಿನ ಜಿಲ್ಲಾ 6ನೇ ಸೆಷನ್ಸ್ ಕೋರ್ಟಿನಲ್ಲಿ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಕುರಿತು ವಿಚಾರಣೆ ನಡೆದುಬಂದಿದೆ. 2024ರ ಜನವರಿ ತಿಂಗಳ 17-18ರಂದು ಆರು ಮಂದಿ ಸಾಕ್ಷ್ಯದಾರರ ವಿಚಾರಣೆ ನಡೆದಿತ್ತು. ಸಾಕ್ಷಿ ಎಂದು ಪರಿಗಣಿಸಲ್ಪಟ್ಟ ಮಂಗಳೂರಿನ ಬಿಲ್ಡರ್ ಒಬ್ಬರನ್ನೂ ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆಗೆ ಒಳಪಡಿಸಿದ್ದರು. ಕೃತ್ಯ ನಡೆಯುವ ಮುನ್ನಾ ದಿನ ಬಿಲ್ಡರ್ ಮತ್ತು ಆರೋಪಿಗೆ ಸಂಬಂಧಪಟ್ಟ ಮೂಲ್ಕಿಯಲ್ಲಿರುವ ಜಾಗ ಒಂದರಲ್ಲಿ ಆರೋಪಿಗಳು ಸೇರಿ ಒಳಸಂಚು ನಡೆಸಿದ್ದರೆಂದು ಚಾರ್ಜ್ ಶೀಟಿನಲ್ಲಿ ಉಲ್ಲೇಖಿಸಲಾಗಿದೆ. ಒಂದನೇ ಆರೋಪಿಗೂ ಆ ಬಿಲ್ಡರ್ ಗೂ ಹತ್ತಿರದ ನಂಟು ಇರುವ ವಿಚಾರವನ್ನು ವಕೀಲರು ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು.
ಇದಲ್ಲದೆ, ಕೆಲವು ಸಾಕ್ಷ್ಯದಾರರು ಕೋರ್ಟಿನಲ್ಲಿ ತಾವು ಈ ಹಿಂದೆ 164 ನಿಮಯದಡಿ ನೀಡಿದ್ದ ಹೇಳಿಕೆಯನ್ನು ನಿರಾಕರಿಸಿದ್ದನ್ನು ವಕೀಲರು ಪ್ರಶ್ನಿಸಿದ್ದರು. ಹಾಗಾದ್ರೆ ಕೋರ್ಟ್ ಮುಂದೆ ನೀವು ಸುಳ್ಳು ಹೇಳಿದ್ದೀರಾ ಎಂದು ಪ್ರಶ್ನೆ ಮಾಡಿದ್ದು, ಈಗ ಇಲ್ಲ ಎನ್ನುತ್ತಿರಲು ಆರೋಪಿಗಳು ರಾಜಕೀಯ ಪ್ರಭಾವಿಗಳು ಅಂತಲೇ ಎಂದು ತರಾಗೆತ್ತಿಕೊಂಡಿದ್ದರು. ಇದಲ್ಲದೆ, ಕೃತ್ಯ ನಡೆದ ಸಂದರ್ಭದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ವ್ಯಕ್ತಿಯೊಬ್ಬರು ಕೋರ್ಟಿಗೆ ಬರುವುದಕ್ಕೆ ನಿರಾಕರಿಸುತ್ತಿದ್ದರು. ಕೊನೆಗೆ, ಆ ವ್ಯಕ್ತಿಯನ್ನೂ ಕೋರ್ಟಿಗೆ ಕರೆಸಿ ಸಾಕ್ಷ್ಯ ಹೇಳಿಸಲಾಗಿತ್ತು. ಪ್ರಕರಣದಲ್ಲಿ ಸಾಕ್ಷ್ಯದಾರರನ್ನು ಕೋರ್ಟಿಗೆ ತರುವುದು ಪೊಲೀಸರ ಕರ್ತವ್ಯ ಆಗಿದ್ದರೂ, ಅದರಲ್ಲಿ ಎಡವುತ್ತಿದ್ದಾರೆ, ಆಸಕ್ತಿ ತೋರುತ್ತಿಲ್ಲ ಎಂದು ಸಂತ್ರಸ್ತ ವಕೀಲರು ನ್ಯಾಯಾಧೀಶರ ಮುಂದೆ ಆಕ್ಷೇಪಿಸಿದ್ದರು.
2016ರ ಮಾರ್ಚ್ 21ರಂದು ಬೆಳಗ್ಗೆ ಕೊಡಿಯಾಲ್ ಬೈಲಿನ ತನ್ನ ಮನೆಯಿಂದ ವೆಂಕಟರಮಣ ದೇವಸ್ಥಾನಕ್ಕೆ ತೆರಳುತ್ತಿದ್ದ ವಿನಾಯಕ ಬಾಳಿಗಾ ಅವರನ್ನು ಆರು ಮಂದಿಯ ತಂಡ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿತ್ತು. ಅಂದಿನ ಖಡಕ್ ಕಮಿಷನರ್ ಆಗಿದ್ದ ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸರು ಭಾರೀ ರಾಜಕೀಯ ಒತ್ತಡದ ನಡುವೆಯೂ ಆರೋಪಿಗಳನ್ನು ಎರಡು ತಿಂಗಳ ಬಳಿಕ ಬಂಧಿಸಿದ್ದರು. ನರೇಶ್ ಶೆಣೈ, ಶ್ರೀಕಾಂತ್, ಶಿವಪ್ರಸಾದ್, ಶಿವಪ್ರಸನ್ನ, ವಿನೀತ್ ಪೂಜಾರಿ, ನಿಶಿತ್ ದೇವಾಡಿಗ, ಶೈಲೇಶ್ ಮತ್ತು ಮಂಜುನಾಥ್ ಆರೋಪಿಗಳೆಂದು ಗುರುತಿಸಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗಬೇಕೆಂದು ಎಡಪಕ್ಷಗಳು ಸರಣಿ ಪ್ರತಿಭಟನೆ ನಡೆಸಿದ್ದರಿಂದ ಕೊಲೆ ಕೇಸಿಗೆ ಸಾರ್ವಜನಿಕ ಬೆಂಬಲವೂ ಸಿಕ್ಕಿತ್ತು.
ವಿನಾಯಕ ಬಾಳಿಗಾ ಆರ್ಟಿಐ ಮೂಲಕ ಮಂಗಳೂರಿನ ವೆಂಕಟರಮಣ ದೇವಸ್ಥಾನ, ಮೌರಿಷ್ಕಾ ಪಾರ್ಕ್ ಅಪಾರ್ಟ್ಮೆಂಟ್, ಶಾರದಾ ವಿದ್ಯಾಲಯ ಕಟ್ಟಡದ ಕುರಿತ ಅವ್ಯವಹಾರದ ಮಾಹಿತಿಗಳನ್ನು ಪಡೆದು ತನಿಖೆಗೆ ಆಗ್ರಹ ಮಾಡಿದ್ದರು. ಲೋಕಾಯುಕ್ತಕ್ಕೂ ಬಾಳಿಗಾ ಈ ಬಗ್ಗೆ ದೂರುಗಳನ್ನು ನೀಡಿದ್ದರು. ಇದೇ ಕಾರಣಕ್ಕೆ ಬಿಜೆಪಿ ಕಾರ್ಯಕರ್ತರೂ ಆಗಿದ್ದ ಬಾಳಿಗಾರನ್ನು ಆರೋಪಿಗಳು ಕೊಲೆ ಮಾಡಿದ್ದರೆಂದು ಹೇಳಲಾಗಿತ್ತು.
Mangalorr Vinayak Baliga Murder case, accused are influencing witnesses, lawyer request case to shift to High court. In the case, the accused have the support of political influencers, so they are influencing the witnesses. Also, accused, witnesses and police are present together in Mangalore court added lawyer.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm