POCSO Case, Vidyachowdeshwari Mutt: ಸ್ವಾಮೀಜಿಗೆ ಗುಪ್ತಾಂಗದಲ್ಲಿ ಚರ್ಮ ರೋಗ ; ಆಪ್ತನಲ್ಲಿ ಹೇಳಿಕೊಂಡ ಸ್ವಾಮಿ, ಲೇಡಿ ಡಾಕ್ಟರ್ ಗೆ ಕನೆಕ್ಟ್ ಮಾಡ್ಸಿ ವಿಡಿಯೋ ರೆಕಾರ್ಡ್ ಮಾಡಿಕೊಂಡ ಕೇಡಿ, ದೂರು ಕೊಟ್ಟು ಸಿಕ್ಕಿಬಿದ್ದ ಮಂಜುನಾಥ ಸ್ವಾಮೀಜಿ

08-03-24 07:35 pm       HK News Desk   ಕ್ರೈಂ

ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರನಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ‌ ಮಂಜುನಾಥ ಸ್ವಾಮೀಜಿಯನ್ನು ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.

ತುಮಕೂರು, ಮಾ.08:  ತಾಲೂಕಿನ ಹುಲಿಯೂರುದುರ್ಗ ಹೋಬಳಿ ಹಂಗರನಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಹಾ ಸಂಸ್ಥಾನ ಮಠದ ಬಾಲ‌ ಮಂಜುನಾಥ ಸ್ವಾಮೀಜಿಯನ್ನು ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ. ತಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಆರೋಪಿಸಿ ಸ್ವಾಮೀಜಿ ಕಡೆಯಿಂದಲೇ ಕೆಲವರ ವಿರುದ್ಧ ದೂರು ದಾಖಲಾಗಿತ್ತು. ಆದರೆ, ಅದೇ ಆರೋಪಿಗಳು ಸ್ವಾಮೀಜಿಯವರ ಬೇರೊಂದು ಹಗರಣವೊಂದನ್ನು ವಿಚಾರಣೆ ವೇಳೆ ಬಯಲು ಮಾಡಿದ್ದಾರೆ. ಹಾಗಾಗಿ, ಪೊಲೀಸರು ಸ್ವಾಮೀಜಿಯವರನ್ನು ಬಂಧಿಸಿದ್ದಾರೆ, ಅಂದರೆ, ದೂರು ಕೊಟ್ಟ ಸ್ವಾಮೀಜಿಯೇ ಈಗ ಬೇರೊಂದು ಕೇಸ್ ನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ!

ಅಭಿಷೇಕ್ ನೀಡಿದ ಕೆಲವು ಮಾಹಿತಿಯ ಮೇರೆಗೆ, ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಮಠಕ್ಕೆ ಭೇಟಿ ನೀಡಿ ಗುರುವಾರ ಸಂಜೆಯಿಂದ ಪರಿಶೀಲನೆ ನಡೆಸಿದ್ದರು. ಎಸ್.ಪಿ.ಅಶೋಕ್ ಕೆ.ವಿ.ಸೇರಿದಂತೆ ನಾನಾ ಅಧಿಕಾರಿಗಳು ತಡರಾತ್ರಿವರೆಗೂ ತನಿಖೆ ನಡೆಸಿದ್ದರು. ಈ ವೇಳೆ ಸ್ವಾಮೀಜಿಯ 'ಅಸಲಿ ಕಥೆ' ಬಯಲಾಗಿದ್ದು ‌ಪೋಕ್ಸೊ ಕಾಯಿದೆಯಡಿ ಪೊಲೀಸರು ಬಂಧಿಸಿದ್ದಾರೆ.

ಅಭಿಷೇಕ್ ಮೇಲೆ ಸ್ವಾಮೀಜಿ ಕಡೆಯಿಂದ ದೂರು ನೀಡಿದ್ದೇಕೆ?

ಕೆಲವು ಮಾಧ್ಯಮಗಳಲ್ಲಿ ಬಂದ ವರದಿಗಳ ಪ್ರಕಾರ, ಸ್ವಾಮೀಜಿಯವರಿಗೆ ಬಹಿರಂಗವಾಗಿ ಹೇಳಿಕೊಳ್ಳದ ಜಾಗದಲ್ಲಿ ಚರ್ಮರೋಗದ ಸಮಸ್ಯೆಯಿತ್ತು. ಅದನ್ನು ಅವರು ತಮ್ಮ ಆಪ್ತರಾಗಿದ್ದ ಅಭಿಷೇಕ್ ಬಳಿ ಹೇಳಿಕೊಂಡಿದ್ದರು. ಕೆಲವು ದಿನಗಳ ನಂತರ ಅಭಿಷೇಕ್, ತಮಗೆ ಪರಿಚಯಸ್ಥರೆಂದು ಹೇಳಿ ಒಬ್ಬ ಮಹಿಳೆಯರನ್ನು ಭೇಟಿ ಮಾಡಿಸಿದ್ದರು. ಆ ಮಹಿಳೆ ಒಬ್ಬ ಚರ್ಮ ವೈದ್ಯರೆಂದೂ, ಅವರಲ್ಲಿ ಚರ್ಮರೋಗದ ಬಗ್ಗೆ ತೋರಿಸಿ ಚಿಕಿತ್ಸೆ ಪಡೆಯಬಹುದೆಂದು ಅಭಿಷೇಕ್ ಸಲಹೆ ನೀಡಿದ್ದರು

ಆದರೆ, ನೇರವಾಗಿ ಆ ಮಹಿಳೆಗೆ ಗೌಪ್ಯ ಜಾಗದಲ್ಲಿರುವ ತಮ್ಮ ಚರ್ಮದ ವ್ಯಾಧಿಯನ್ನು ತೋರಿಸಲು ಇಷ್ಟವಾಗಿರಲಿಲ್ಲ. ಹಾಗಾಗಿ, ಚರ್ಮರೋಗವಿರುವ ಜಾಗದ ಫೋಟೋ ತೆಗೆದು ಯುವತಿಯ ಮೊಬೈಲಿಗೆ ಕಳುಹಿಸಲಾಗಿತ್ತು. ಆನಂತರ, ವ್ಯಾಧಿಯ ಬಗ್ಗೆ ವೈದ್ಯರ ಬಳಿ ಹೇಳಿಕೊಳ್ಳಲು ಸ್ವಾಮೀಜಿಗೆ ವಿಡಿಯೋ ಕಾಲ್ ನಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆಗ, ಸ್ವಾಮೀಜಿಯವರು ಚರ್ಮ ವ್ಯಾಧಿಯಿರುವ ಜಾಗವನ್ನು ತೋರಿಸಿದ್ದರು.

ಅದೇ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಅಭಿಷೇಕ್ ಹಾಗೂ ಮತ್ತಿತರರು ಸ್ವಾಮೀಜಿಯವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರೆಂದು ಮಠದ ದೇವಸ್ಥಾನದ ಟ್ರಸ್ಟಿ ಕೆ. ಅಭಿಲಾಷ್ ಎಂಬುವರು ಪೊಲೀಸರಲ್ಲಿ ನ. 6ರಂದು ದೂರು ದಾಖಲಿಸಿದ್ದರು. ಕುಣಿಗಲ್ ತಾಲೂಕಿನ ಹೊಸಕೆರೆ ಗ್ರಾಮದ ಎಚ್.ಎಸ್. ಅಭಿಷೇಕ್, ಬೆಂಗಳೂರಿನಲ್ಲಿರುವ 30 ವರ್ಷದ ಯುವತಿ, ಪಾಂಡವಪುರ ಬಳಿಯ ವಿಜಯಕಾಳಿ ದೇವಸ್ಥಾನದ ರಾಜೇಶ್, ಶ್ರೀನಿವಾಸ್, ರಾಮನಗರ ಜಿಲ್ಲೆಯ ಕವನಪುರ ಗ್ರಾಮದ ಚೇತನ್, ಕುಣಿಗಲ್ ನ ನಂದೀಶ್ ಎಂಬುವರ ವಿರುದ್ದ ಪ್ರಕರಣ ದಾಖಲಾಗಿತ್ತು.

ದೇವಸ್ಥಾನದ ಟ್ರಸ್ಟಿ ನೀಡಿದ್ದ ದೂರಿನನ್ವಯ ಪೊಲೀಸರು ಅಭಿಷೇಕ್ ರನ್ನು ಕರೆಯಿಸಿ ವಿಚಾರಣೆ ನಡೆಸಿದಾಗ ಆತ, ಸ್ವಾಮೀಜಿಯವರು ಹಲವು ದಿನಗಳ ಹಿಂದೆ ಮಠದಲ್ಲಿ ಅಪ್ರಾಪ್ತೆಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟಿರುವುದಾಗಿ ಆರೋಪಿಸಿದ್ದ. ಈ ವಿಚಾರ ಪೋಕ್ಸೋ ಕಾಯ್ದೆಯಡಿ ಬರುವುದರಿಂದ ಮಠಕ್ಕೆ ಆಗಮಿಸಿದ ಮಠಕ್ಕೆ ಆಗಮಿಸಿದ ಪೊಲೀಸರು, ಗುರುವಾರ ಸಂಜೆಯಿಂದಲೇ ಮಠದಲ್ಲಿ ಪರಿಶೀಲನೆ ನಡೆಸಿದ್ದರು. ಆಗ ಸಿಕ್ಕ ಕೆಲವು ದಾಖಲೆಗಳನ್ನು ಆಧರಿಸಿ, ಸ್ವಾಮೀಜಿಯವರನ್ನು ಬಂಧಿಸಿದ್ದಾರೆ.

Tumkur Pontiff Of Vidyachowdeshwari Mutt, His Aide Arrested In POCSO Case. The pontiff of Vidyachowdeshwari Mutt at Hangarahalli in Kunigal taluk of Tumkur district, Balamanjunath Swami, was arrested late Thursday in a POCSO case. A POCSO case was registered against Balamanjunath Swami and his close aide Abhilash at Huliyurdurga Police Station. A complaint was lodged with the police about Swami allegedly sexually harassing a minor girl in the mutt.