ಬ್ರೇಕಿಂಗ್ ನ್ಯೂಸ್
09-03-24 10:20 pm HK News Desk ಕ್ರೈಂ
ನವದೆಹಲಿ, ಮಾ.9: ವ್ಯಕ್ತಿಯೊಬ್ಬ ತನ್ನ ಪತ್ನಿ ತನ್ನನ್ನು ಕ್ಯಾರ್ ಮಾಡುತ್ತಿಲ್ಲ. ಉದ್ದೇಶಪೂರ್ವಕ ದೂರ ಮಾಡುತ್ತಿದ್ದಾಳೆ, ಮಗನ ಜೊತೆ ಐಷಾರಾಮಿ ಜೀವನ ಮಾಡುತ್ತಿದ್ದಾಳೆಂಬ ಹೊಟ್ಟೆಕಿಚ್ಚಿನಿಂದಾಗಿ ಜಿಮ್ ಟ್ರೈನರ್ ಆಗಿದ್ದ ಮಗನನ್ನೇ ಕ್ರೂರವಾಗಿ ಕೊಲೆ ಮಾಡಿಸಿದ ಘಟನೆ ರಾಜಧಾನಿ ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ಫೆ.6-7ರ ರಾತ್ರಿ ದೆಹಲಿಯ ಅಪಾರ್ಟ್ಮೆಂಟ್ ಒಂದರಲ್ಲಿ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಗೌರವ್ ಸಿಂಘಾಲ್ ಎಂಬ 29 ವರ್ಷದ ಯುವಕ 15ಕ್ಕೂ ಹೆಚ್ಚು ಬಾರಿ ಇರಿಯಲ್ಪಟ್ಟು ಕೊಲ್ಲಲ್ಪಟ್ಟಿದ್ದ. ತನಿಖೆ ನಡೆಸಿದ ಪೊಲೀಸರು ಘಟನೆ ಸಂದರ್ಭದಲ್ಲಿ ಕಾಣೆಯಾಗಿದ್ದ ತಂದೆ ರಂಗ ಲಾಲ್ (54)ನನ್ನು ಕೆಲವು ದಿನಗಳ ಬಳಿಕ ವಶಕ್ಕೆ ಪಡೆದಿದ್ದರು. ವಿಚಾರಣೆ ಸಂದರ್ಭದಲ್ಲಿ ರಂಗಲಾಲ್ ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವೂ ಇಲ್ಲದೆ ಕೊಲೆಯನ್ನು ಒಪ್ಪಿಕೊಂಡಿದ್ದಾನೆ. ತಾನು ಮಾಡಿದ್ದೇ ಸರಿ ಎನ್ನುವಂತೆ ಪೊಲೀಸರಲ್ಲಿ ಹೇಳಿದ್ದಾನೆ.
ಅಂದು ರಾತ್ರಿ ಮಗನ ಜೊತೆಗೆ ತೀವ್ರ ಜಗಳ ಆಗಿತ್ತು. ಮಾತಿಗೆ ಮಾತು ಬೆಳೆದು ಮಗನೇ ತಂದೆಯ ಮೇಲೆ ಕೈಮಾಡಿದ್ದ. ಇದರಿಂದ ಸಿಟ್ಟುಗೊಂಡು ತಾನು ಸುಪಾರಿ ಕೊಟ್ಟಿದ್ದವರಿಗೆ ಹೇಳಿ ಮಗ ಗೌರವ್ ನನ್ನು ಕೊಲೆ ಮಾಡಿಸಿದ್ದಾನೆ. ರಂಗಲಾಲ್ ಜೊತೆಗೆ ಆತನ ಪತ್ನಿಗೆ ಸಂಬಂಧ ಸರಿ ಇರಲಿಲ್ಲ. ಹಾಗಾಗಿ ಆತನಿಂದ ದೂರವಾಗಿದ್ದಲ್ಲದೆ, ಮಗನ ಜೊತೆಗೆ ವಾಸವಿದ್ದಳು. ಮಗ ಜಿಮ್ ಟ್ರೈನರ್ ಆಗಿದ್ದರಿಂದ ಆತನ ಜೊತೆಯಲ್ಲೇ ಇದ್ದಳು. ಇದರಿಂದ ಪತಿ- ಪತ್ನಿಯ ನಡುವೆ ಗಲಾಟೆ ಆಗಿತ್ತು.
ಪತ್ನಿಗೆ ಬುದ್ಧಿ ಕಲಿಸಬೇಕು, ಆಕೆಗೆ ಹಣದ ಬೆಲೆ ತಿಳಿಯುವಂತೆ ಮಾಡಬೇಕು ಎಂಬ ಉದ್ದೇಶದಿಂದ ರಂಗಲಾಲ್ ಸಂಚು ಹೂಡಿದ್ದ. ಮೂವರನ್ನು 75 ಸಾವಿರ ರೂ. ಕೊಟ್ಟು ನೇಮಿಸಿದ್ದು, ಮೂರ್ನಾಲ್ಕು ತಿಂಗಳಿನಿಂದ ಮಗನ ಕೊಲೆಗೆ ಸ್ಕೆಚ್ ಹಾಕಿದ್ದ. ಕೊನೆಗೆ, ತನ್ನ ಮೇಲೆ ಮಗನೇ ಕೈಮಾಡಿದ ಕೋಪದಲ್ಲಿ ಆವತ್ತೇ ಕೊಲೆ ಮಾಡುವಂತೆ ತನ್ನ ಸಹಚರರಿಗೆ ಸೂಚನೆ ನೀಡಿದ್ದ. ನಡುರಾತ್ರಿಯಲ್ಲಿ ಕೊಲೆಗೈದು ಬಳಿಕ ಮಗನ ಮನೆಯಲ್ಲಿ ಮದುವೆ ಉದ್ದೇಶಕ್ಕಾಗಿ ರೆಡಿ ಮಾಡಿಕೊಂಡಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 15 ಲಕ್ಷ ನಗದನ್ನು ಕದ್ದೊಯ್ದಿದ್ದರು. ತಿಂಗಳ ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಆಭರಣ ವಶಕ್ಕೆ ಪಡೆದಿದ್ದಾರೆ.
The man who killed his 29-year-old son, a gym trainer, in Delhi committed the crime to "teach his estranged wife a lesson", police said on Friday. He had been planning the murder for three to four months, the investigation revealed.
24-01-26 08:31 pm
Mangaluru Staffer
ಸಿದ್ದರಾಮಯ್ಯ ಆಪ್ತ ಮರಿಗೌಡ ಮುಡಾದಿಂದ ಅಕ್ರಮ ನಿವೇಶನ...
23-01-26 03:21 pm
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
24-01-26 08:38 pm
HK staffer
ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ; ಕೆಎಸ...
23-01-26 06:44 pm
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
24-01-26 11:23 pm
Mangaluru Staffer
ದೇಶದ ಅತಿ ಹಳೆಯ ತಾಂತ್ರಿಕ ಶಿಕ್ಷಣ ಸಂಸ್ಥೆ ಮಂಗಳೂರಿನ...
24-01-26 08:14 pm
ಬಹುಮುಖ ಪ್ರತಿಭೆಯ ಕಲಾವಿದ ಸ್ವಾತಿ ಸತೀಶ್ ಆತ್ಮಹತ್ಯೆ...
24-01-26 08:04 pm
ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗ...
23-01-26 09:21 pm
National Conference on Neuropsychiatry Held a...
23-01-26 09:08 pm
25-01-26 09:48 am
HK News Desk
ರಾಮಕುಂಜ ; ತಂದೆ - ಮಗನ ಜಗಳ ದುರಂತ ಅಂತ್ಯ, ಚೂರಿ ಇರ...
24-01-26 11:18 pm
ಜನಾರ್ದನ ರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ; ಎಂಟು ಮಂ...
24-01-26 08:53 pm
ಅವಧಿ ಮೀರಿದ ಮಾತ್ರೆ ನೀಡಿದ್ದಾಗಿ ವಿಡಿಯೋ ವೈರಲ್ ; ಕ...
24-01-26 02:13 pm
ಬೈಕ್ ಕದ್ದೊಯ್ಯುತ್ತಿದ್ದ ಇಬ್ಬರನ್ನು ಮರಕ್ಕೆ ಕಟ್ಟಿ...
23-01-26 09:36 pm