Vande Bharat Mangalore; ಕಾಸರಗೋಡು - ತಿರುವನಂತಪುರಂ ವಂದೇ ಭಾರತ್ ರೈಲು ಮಂಗಳೂರಿಗೆ ವಿಸ್ತರಣೆ ; ಮಾ.12ರಂದು ಮೋದಿ ಹಸಿರು ನಿಶಾನೆ 

11-03-24 12:51 pm       Mangaluru Correspondent   ಕ್ರೈಂ

ಮಂಗಳೂರು ನಗರಕ್ಕೆ ಮತ್ತೊಂದು ವಂದೇ ಭಾರತ್ ರೈಲು ಜೋಡಣೆಯಾಗಿದೆ. ಕಾಸರಗೋಡು - ತಿರುವನಂತಪುರಂ ನಡುವೆ ಸಂಚರಿಸುತ್ತಿದ್ದ ರೈಲು ಮಾರ್ಚ್ 12ರಿಂದ ಮಂಗಳೂರಿಗೆ ವಿಸ್ತರಣೆಗೊಳ್ಳಲಿದೆ. 

ಮಂಗಳೂರು, ಮಾ.11: ಮಂಗಳೂರು ನಗರಕ್ಕೆ ಮತ್ತೊಂದು ವಂದೇ ಭಾರತ್ ರೈಲು ಜೋಡಣೆಯಾಗಿದೆ. ಕಾಸರಗೋಡು - ತಿರುವನಂತಪುರಂ ನಡುವೆ ಸಂಚರಿಸುತ್ತಿದ್ದ ರೈಲು ಮಾರ್ಚ್ 12ರಿಂದ ಮಂಗಳೂರಿಗೆ ವಿಸ್ತರಣೆಗೊಳ್ಳಲಿದೆ. 

ರೈಲ್ವೆ ಸಚಿವಾಲಯ ಇತ್ತೀಚೆಗೆ ಕಾಸರಗೋಡು- ತಿರುವನಂತಪುರಂ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್‌ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿತ್ತು. ಈ ರೈಲು ಸೇವೆಗೆ ಮಾರ್ಚ್‌ 12ರಂದು ಚಾಲನೆ ಸಿಗಲಿದೆ. 

ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು 'ನಮ್ಮ ಮನವಿಯ ಮೇರೆಗೆ ಮಂಗಳೂರಿನ ವರೆಗೂ ವಿಸ್ತರಣೆ ಮಾಡಲಾದ ತಿರುವನಂತಪುರ- ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಇದೇ ಮಾರ್ಚ್ 12ರಂದು ಬೆಳಗ್ಗೆ 8 ಗಂಟೆಗೆ ಮಂಗಳೂರು ಕೇಂದ್ರ ರೈಲು ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದಾರೆ. 

ಇದೇ ಸಂದರ್ಭದಲ್ಲಿ ಮಂಗಳೂರು ಕೇಂದ್ರ ರೈಲು ನಿಲ್ದಾಣ ಹಾಗೂ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಪ್ರಾರಂಭಿಸಲಿರುವ 'ಒನ್ ಸ್ಟೇಷನ್- ಒನ್ ಪ್ರಾಡಕ್ಟ್' ಮಳಿಗೆಗಳಿಗೂ ಮೋದಿಯವರು ಚಾಲನೆ ನೀಡಲಿದ್ದಾರೆ' ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. 

ಮಂಗಳೂರು- ತಿರುವನಂತಪುರಂ ನಡುವಿನ ವಂದೇ ಭಾರತ್ ರೈಲು ಬುಧವಾರ ಹೊರತು ಪಡಿಸಿ ವಾರದ 6 ದಿನಗಳಲ್ಲಿ ಸಂಚಾರ ನಡೆಸಲಿದೆ. ಮಂಗಳೂರಿನಿಂದ ಬೆಳಗ್ಗೆ 6.15ಕ್ಕೆ ಹೊರಡುವ ರೈಲು ಮಧ್ಯಾಹ್ನ 3.05ಕ್ಕೆ ತಿರುವನಂತಪುರ ತಲುಪಲಿದೆ. ಹಾಗೆಯೇ ತಿರುವನಂತಪುರದಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 12.40ಕ್ಕೆ ಮಂಗಳೂರು ತಲುಪಲಿದೆ.

ಈಗಾಗಲೇ ಮಂಗಳೂರು- ಗೋವಾ ಮಧ್ಯೆ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು ಇದೀಗ  ಕಾಸರಗೋಡು-ತಿರುವನಂತಪುರಂ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲಾಗಿದೆ. ಈ ಮೂಲಕ ಮಂಗಳೂರು ನಗರಕ್ಕೆ 2 ವಂದೇ ಭಾರತ್ ರೈಲುಗಳು ಸಿಕ್ಕಂತಾಗಿದೆ.

Prime Minister Narendra Modi will flag off the inaugural service of the extended Vande Bharat Service from Mangaluru Central to Thiruvananthapuram Central and a new Kollam–Tirupati Express on March 12 through videoconferencing. Train No. 02631 Mangaluru–Thiruvananthapuram Vande Bharat Express will leave Mangaluru Central at 9.15 a.m. and reach Thiruvananthapuram Central at 6.30 p.m. for the inaugural service.