ಬ್ರೇಕಿಂಗ್ ನ್ಯೂಸ್
11-03-24 03:53 pm Mangaluru Correspondent ಕ್ರೈಂ
ಮಂಗಳೂರು, ಮಾ.11: ವೃದ್ಧ ಮಾವನನ್ನು ಮನೆಯಲ್ಲಿ ಕೂಡಿಹಾಕಿ ಸೊಸೆಯೇ ಹಲ್ಲೆ ನಡೆಸಿದ ಘಟನೆ ಮಂಗಳೂರು ನಗರದ ಕುಲಶೇಖರದಲ್ಲಿ ಬೆಳಕಿಗೆ ಬಂದಿದ್ದು, ಕಂಕನಾಡಿ ನಗರ ಠಾಣೆ ಪೊಲೀಸರು ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ.
ಕುಲಶೇಖರ ನಿವಾಸಿ ಪದ್ಮನಾಭ ಸುವರ್ಣ(76) ಹಲ್ಲೆಗೀಡಾದವರು. ಇವರ ಮಗ ಪ್ರೀತಂ ಸುವರ್ಣ ವಿದೇಶದಲ್ಲಿ ಕೆಲಸದಲ್ಲಿದ್ದು, ಮನೆಯ ಸಿಸಿಟಿವಿಯನ್ನು ತನ್ನ ಮೊಬೈಲಿಗೆ ಕನೆಕ್ಟ್ ಮಾಡಿಕೊಂಡಿದ್ದರು. ಎರಡು ದಿನಗಳ ಹಿಂದೆ ತನ್ನ ವೃದ್ಧ ತಂದೆಗೆ ಪತ್ನಿ ಉಮಾಶಂಕರಿ ವಾಕಿಂಗ್ ಸ್ಟಿಕ್ ನಲ್ಲಿ ಹಲ್ಲೆ ನಡೆಸಿರುವುದು ಸಿಸಿಟಿವಿಯಲ್ಲಿ ಮಗನ ಗಮನಕ್ಕೆ ಬಂದಿತ್ತು. ಅದರಂತೆ, ಪ್ರೀತಂ ಸುವರ್ಣ ತನ್ನ ತಂಗಿ ಮೂಡುಬಿದ್ರೆಯಲ್ಲಿ ಗಂಡನ ಮನೆಯಲ್ಲಿ ನೆಲೆಸಿರುವ ಪ್ರಿಯಾಗೆ ವಿಷಯ ತಿಳಿಸಿದ್ದರು.
ಅಲ್ಲದೆ, ಸಿಸಿಟಿವಿ ದೃಶ್ಯ ಮುಂದಿಟ್ಟು ಪೊಲೀಸ್ ದೂರು ಕೊಡುವಂತೆ ಸೂಚಿಸಿದ್ದರು. ಮಗಳು ಪ್ರಿಯಾ ಸುವರ್ಣ ಕಂಕನಾಡಿ ನಗರ ಠಾಣೆಯಲ್ಲಿ ದೂರು ನೀಡಿದ್ದಲ್ಲದೆ, ಹಲ್ಲೆಗೀಡಾದ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆರೋಪಿತ ಮಹಿಳೆ ಉಮಾಶಂಕರಿ ಅತ್ತಾವರ ಕೆಇಬಿ ವಿಭಾಗದಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದಾರೆ. ಸರಕಾರಿ ಅಧಿಕಾರಿ ಎನ್ನುವ ದರ್ಪದಿಂದಲೋ ಏನೋ ವೃದ್ಧ ವ್ಯಕ್ತಿಯನ್ನು ಮನೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ. ಪೊಲೀಸರು ಕೊಲೆಯತ್ನ ಕೇಸು ದಾಖಲಿಸಿದ್ದು, ಆರೋಪಿತ ಮಹಿಳೆಯನ್ನು ಬಂಧಿಸಿದ್ದಾರೆ.
Video;
#Mangalore daughter-in-law #assaults father-in-law with a walking stick; video goes viral; KEB officer #Umashankari has been arrested by Mangalore #Police after the video went viral on social media. #BreakingNews #daughter pic.twitter.com/T82lhr7m0V
— Headline Karnataka (@hknewsonline) March 11, 2024
Mangalore daughter-in-law assaults father-in-law with a walking stick; video goes viral; KEB officer Umashankari has been arrested after the video went viral on social media.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 11:03 pm
Mangalore Correspondent
PLD bank election, MLA Ashok Rai, Puttur: ಪಿಎ...
12-01-25 10:06 pm
Hardeep Singh Puri, Brijesh Chowta, Mangalore...
12-01-25 12:33 pm
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm