ಬ್ರೇಕಿಂಗ್ ನ್ಯೂಸ್
17-03-24 12:00 pm Bangalore Correspondent ಕ್ರೈಂ
ಬೆಂಗಳೂರು, ಮಾ 17: ಪತ್ನಿಯನ್ನು ತನ್ನೊಂದಿಗೆ ಒಂದು ರಾತ್ರಿ ಕಳುಹಿಸಿಕೊಂಡು ಎಂದ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕಾರಿನಲ್ಲಿ 14 ಬಾರಿ ಇರಿದು ಕೊಲೆಗೈದಿರುವ ಘಟನೆ ನಡೆದಿದೆ
ದಾಸರಹಳ್ಳಿ ಮರಿಯಣ್ಣಪಾಳ್ಯ ನಿವಾಸಿ ಸಂತೋಷ್ ಕುಮಾರ್(39) ಬಂಧಿತ ಆರೋಪಿ. ಮಾ.12ರಂದು ಈತ ಮಾರುತಿನಗರ ನಿವಾಸಿ ಕೃಷ್ಣಯಾದವ್(55) ಎಂಬಾತನನ್ನು ಕೊಲೆಗೈದು, ಮೃತದೇಹವನ್ನು ಕಾರಿನಲ್ಲಿ ಇರಿಸಿ ಪರಾರಿಯಾಗಿದ್ದ. ಬಟ್ಟೆ ಅಂಗಡಿಗೆ ಲಕ್ಷಾಂತರ ರೂ. ಹೂಡಿಕೆ ಮಾಡಲು ಪತ್ನಿಯನ್ನು ಒಂದು ರಾತ್ರಿ ತನ್ನೊಂದಿಗೆ ಕಳುಹಿಸುವಂತೆ ಕೇಳಿದಕ್ಕೆ ಆರೋಪಿ ಉದ್ಯಮಿಯನ್ನ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಕೃಷ್ಣಯಾದವ್ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ. ಈತನ ಸ್ನೇಹಿತ ತಮಿಳುನಾಡು ಮೂಲದ ಸಂತೋಷ್ ಮೊಬೈಲ್ ಅಂಗಡಿ ಮುಂಭಾಗದ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಒಂದೆರಡು ಬಾರಿ ಆರೋಪಿಯ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ್ದ ಕೃಷ್ಣಯಾದವ್, “ಉತ್ತಮ ಗುಣಮಟ್ಟದ ಬಟ್ಟೆ ಮಾರಾಟ ಮಾಡುತ್ತಿಯಾ, ಹೊಸ ಬಟ್ಟೆ ಅಂಗಡಿಗೆ ನಾನು ಹಣ ಹೂಡಿಕೆ ಮಾಡುತ್ತೇನೆ” ಎಂದು ಭರವಸೆ ನೀಡಿದ್ದ. ಆದರೆ, ನಾಲ್ಕೈದು ತಿಂಗಳಾದರೂ ಹಣ ಹೂಡಿಕೆ ಮಾಡಿರಲಿಲ್ಲ.
14 ಬಾರಿ ಇರಿತಕ್ಕೊಳಗಾದ ಉದ್ಯಮಿ:
ಈ ಮಧ್ಯೆ ಉದ್ಯಮಿ ಕೃಷ್ಣಯಾದವ್‌ಗೆ ಹೆಣ್ಣಿನ ಮೇಲೆ ಹೆಚ್ಚಿನ ವ್ಯಾಮೋಹ ಇತ್ತು. ಮಾ.11ರಂದು ಆರೋಪಿ ಸಂತೋಷ್ ಜತೆ ಕಾರಿನಲ್ಲಿ ಯಲಹಂಕದ ಬಾರ್‌ನಲ್ಲಿ ಮದ್ಯ ಸೇವಿಸಿ ವಿವಿಧೆಡೆ ಸುತ್ತಾಡಿದ್ದ ಕೃಷ್ಣಯಾದವ್‌ಗೆ ಆರೋಪಿ ಸಂತೋಷ್ ಕುಮಾರ್, ತನ್ನ ಮೊಬೈಲ್‌ನಲ್ಲಿದ್ದ 2ನೇ ಪತ್ನಿಯ ಫೋಟೋವನ್ನು ತೋರಿಸಿದ್ದಾನೆ. ಅದರಿಂದ ವ್ಯಾಮೋಹಕ್ಕೊಳಗಾದ ಕೃಷ್ಣಯಾದವ್, “ಬಟ್ಟೆ ಅಂಗಡಿಗೆ ಒಂದೆರಡು ದಿನದಲ್ಲೇ ಲಕ್ಷಾಂತರ ರೂ. ಹೂಡಿಕೆ ಮಾಡ್ತೀನಿ ಆದ್ರೆ ರಾತ್ರಿ ನಿನ್ನ ಹೆಂಡ್ತೀನ ನನ್ನೊಂದಿಗೆ ಕಳಿಸಿ ಕೊಡು ಎಂದು ಕೇಳಿದ್ದಾನೆ. ಅದರಿಂದ ಕೋಪಗೊಂಡು ಆರೋಪಿ, ಉದ್ಯಮಿ ಕೃಷ್ಣಯಾದವ್ ಜತೆ ಜಗಳ ಆರಂಭಿಸಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಆರೋಪಿ ಕಾರಿನಲ್ಲಿದ್ದ ಚಾಕುವಿನಿಂದ ಕೃಷ್ಣಯಾದವ್‌ನ ದೇಹದ ವಿವಿಧೆಡೆ 14 ಬಾರಿ ಇರಿದು ಪರಾರಿಯಾಗಿದ್ದ. ಇತ್ತ ಕೃಷ್ಣಯಾದವ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದ. ಬಳಿಕ ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
In a shocking incident, a real estate businessman was stabbed to death 14 times in a car after he asked his wife to send him one night with him The arrested has been identified as Santhosh Kumar (39), a resident of Mariyannapalya in Dasarahalli. On March 12, he killed Krishna Yadav (55), a resident of Maruti Nagar, and left his body in a car.
11-01-25 10:53 pm
HK News Desk
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
12-01-25 05:07 pm
HK News Desk
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
12-01-25 11:03 pm
Mangalore Correspondent
PLD bank election, MLA Ashok Rai, Puttur: ಪಿಎ...
12-01-25 10:06 pm
Hardeep Singh Puri, Brijesh Chowta, Mangalore...
12-01-25 12:33 pm
CM Siddaramaiah, Kambala Mangalore, Naringana...
11-01-25 10:34 pm
Mangalore Lit Fest 2025, Hardeep Singh Puri;...
11-01-25 07:19 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm