Petrol robbery, Mangalore, Hassan, crime: ಬೆಳ್ತಂಗಡಿ ; ಮಂಗಳೂರು- ಹಾಸನ ಪೆಟ್ರೋನೆಟ್ ಡೀಸೆಲ್ ಪೈಪ್ ಲೈನಿಗೆ ಕನ್ನ, ಎರಡೇ ದಿನದಲ್ಲಿ 12 ಸಾವಿರ ಲೀಟರ್ ಡೀಸೆಲ್ ಕಳವು 

22-03-24 12:01 pm       Mangalore Correspondent   ಕ್ರೈಂ

ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ  ಆಲಡ್ಕ ಎಂಬಲ್ಲಿಂದ ಹಾದು ಹೋಗುವ ಡಿಸೇಲ್‌ ಪೈಫ್‌ ಲೈನ್‌ ಅನ್ನು ಯಾರೋ ಕಳ್ಳರು ರಂಧ್ರ ಕೊರೆದು 9.60 ಲಕ್ಷ ಮೌಲ್ಯದ ಡೀಸೆಲ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬೆಳ್ತಂಗಡಿ, ಮಾ.22: ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ  ಆಲಡ್ಕ ಎಂಬಲ್ಲಿಂದ ಹಾದು ಹೋಗುವ ಡಿಸೇಲ್‌ ಪೈಫ್‌ ಲೈನ್‌ ಅನ್ನು ಯಾರೋ ಕಳ್ಳರು ರಂಧ್ರ ಕೊರೆದು 9.60 ಲಕ್ಷ ಮೌಲ್ಯದ ಡೀಸೆಲ್ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೇರಳದ ಅಲಪ್ಪುಝ ಜಿಲ್ಲೆ ಮಾವೇಲಿಕ್ಕರ ನಿವಾಸಿ ರಾಜನ್‌ ಜಿ ಎಂಬವರು ದೂರು ನೀಡಿದ್ದಾರೆ. ಸದ್ರಿಯವರು ಪೆಟ್ರೊನೆಟ್‌ ಎಮ್‌ ಹೆಚ್‌ ಬಿ ಲಿಮಿಟೆಡ್‌ ನೆರಿಯಾದ ಸ್ಟೇಶನ್‌ ಇನ್ಚಾರ್ಜ್‌ ಆಗಿದ್ದಾರೆ. ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್‌ ಪೈಪ್ ಮೂಲಕ ಡಿಸೇಲ್‌ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ 19ರಂದು ರಾತ್ರಿಯ ಮಧ್ಯದ ಅವಧಿಯಲ್ಲಿ ಪುದುವೆಟ್ಟು ಗ್ರಾಮದ  ಆಲಡ್ಕ ಎಂಬಲ್ಲಿ ಡೀಸೆಲ್ ಪೈಪ್ ಲೈನಿಗೆ ಕನ್ನ ಕೊರೆಯಲಾಗಿದೆ. 

ಪೈಪ್ ಲೈನಿಗೆ 2.5 ಇಂಚು ಗಾತ್ರದ ರಂಧ್ರ ಕೊರೆದು ಹೆಚ್‌ ಡಿ ಪಿ ಇ ಪೈಪ್‌ ಮೂಲಕ ಅಂದಾಜು 12,000 ಲೀಟರ್‌ ಡಿಸೇಲ್‌ ಕಳವು ಮಾಡಿರುತ್ತಾರೆ. ಅದರ ಅಂದಾಜು ಮೌಲ್ಯ ರೂ 9,60,000/ ಆಗಬಹುದು ಎಂಬುದಾಗಿ ದೂರು ನೀಡಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಸೆಕ್ಷನ್ 427, 285, 379  ಐ ಪಿ ಸಿ ಕಲಂ 15(2) ಪೆಟ್ರೊನೆಟ್‌ ಕಾಯ್ದೆ ಕಲಂ 3(2) ಪ್ರಿವೆನ್ಸೆನ್‌ ಆಫ್‌ ಡ್ಯಾಮೆಜ್‌ ಟು ಪಬ್ಲಿಕ್‌ ಪ್ರಾಪರ್ಟಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Mangalore Hassan 12 thousand litres of petrol stolen from pipe near Dharmsthala.