Mangalore Valachil police raid: ವಳಚ್ಚಿಲ್ ; ಮನೆಯ ಶೆಡ್ ನಲ್ಲಿ ಗೋವುಗಳನ್ನು ಕಡಿದು ಮಾಂಸ ಮಾಡುತ್ತಿದ್ದಾಗ ಪೊಲೀಸ್ ದಾಳಿ, ಮೂವರ ಸೆರೆ

28-03-24 10:30 pm       Mangalore Correspondent   ಕ್ರೈಂ

ನಗರದ ವಳಚ್ಚಿಲ್ ನಲ್ಲಿ ಮನೆಯೊಂದರ ಶೆಡ್ ನಲ್ಲಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದಾರೆಂದು ಮಾಹಿತಿ ತಿಳಿದ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದು, 180 ಕೇಜಿ ದನದ ಮಾಂಸವನ್ನು ವಶಕ್ಕೆ ಪಡೆದು ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಮಂಗಳೂರು, ಮಾ.28: ನಗರದ ವಳಚ್ಚಿಲ್ ನಲ್ಲಿ ಮನೆಯೊಂದರ ಶೆಡ್ ನಲ್ಲಿ ದನಗಳನ್ನು ಕಡಿದು ಮಾಂಸ ಮಾಡುತ್ತಿದ್ದಾರೆಂದು ಮಾಹಿತಿ ತಿಳಿದ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿದ್ದು, 180 ಕೇಜಿ ದನದ ಮಾಂಸವನ್ನು ವಶಕ್ಕೆ ಪಡೆದು ಮೂವರನ್ನು ಅರೆಸ್ಟ್ ಮಾಡಿದ್ದಾರೆ.

ಮನೆಯ ಮಾಲೀಕ ವಳಚ್ಚಿಲ್ ಖಾದರ್ ಮಹಮ್ಮದ್ ಮೋನು (32), ಮಾರಿಪಳ್ಳ ನಿವಾಸಿ ಇಸ್ಮಾಯಿಲ್ (27), ಅಡ್ಯಾರ್ ಪದವು ನಿವಾಸಿ ಮಹಮ್ಮದ್ ಶಮೀರ್ (18) ಬಂಧಿತರು.

ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸ್ ನಿರೀಕ್ಷಕರಾದ ಶಿವಕುಮಾರ್, ಅರುಣ್ ಕುಮಾರ್, ಪಿಎಸ್ಐ ರಾಮ ನಾಯ್ಕ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ -2020ರಂತೆ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಸಿಲಾಗಿದೆ.

Police raid illegal slaughter house at Valachil in Mangalore, three arrested. The arrested has been identified as khader Mohammad monu, Ismail and Mohammad Shameer.