Mangalore News, Video, Arkula: ಹಣ ಕದ್ದಿದ್ದಾನೆಂದು ಹೇಳಿ ಬಿಹಾರ ಮೂಲದ ಕಾರ್ಮಿಕನಿಗೆ ಮನೆಯಲ್ಲಿ ಕೂಡಿಹಾಕಿ ಹಲ್ಲೆ ; ವಿಡಿಯೋ ವೈರಲ್

29-03-24 06:17 pm       Mangalore Correspondent   ಕ್ರೈಂ

ಕೂಲಿ ಮಾಡುತ್ತಿದ್ದ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಕಳವು ಮಾಡಿದ್ದಾನೆಂದು ಹೇಳಿ ಆತನನ್ನು ಮನೆಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರ ಹೊರವಲಯದ ಅರ್ಕುಳದಲ್ಲಿ ನಡೆದಿದ್ದು, ಘಟನೆಯ ಸಿಸಿಟಿವಿ ವೈರಲ್ ಆಗಿದೆ.

ಮಂಗಳೂರು, ಮಾ.29: ಕೂಲಿ ಮಾಡುತ್ತಿದ್ದ ಉತ್ತರ ಭಾರತ ಮೂಲದ ವ್ಯಕ್ತಿಯೊಬ್ಬ ಕಳವು ಮಾಡಿದ್ದಾನೆಂದು ಹೇಳಿ ಆತನನ್ನು ಮನೆಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರ ಹೊರವಲಯದ ಅರ್ಕುಳದಲ್ಲಿ ನಡೆದಿದ್ದು, ಘಟನೆಯ ಸಿಸಿಟಿವಿ ವೈರಲ್ ಆಗಿದೆ.

ಎರಡು ದಿನಗಳ ಹಿಂದೆ ಅರ್ಕುಳದ ಮನೆಯೊಂದರಲ್ಲಿ ಕೆಲಸಕ್ಕಿದ್ದ ಬಿಹಾರ ಮೂಲದ ವ್ಯಕ್ತಿಗೆ ಮನೆಯವರು ಸೇರಿ ಹಲ್ಲೆ ನಡೆಸಿದ್ದಾರೆ. ಒಂದೂವರೆ ಲಕ್ಷ ನಗದು ಮತ್ತು ಚಿನ್ನದ ಬಳೆಯನ್ನು ಕಳವು ಮಾಡಿದ್ದಾನೆಂದು ಹೇಳಿ ಥಳಿಸಿದ್ದಾರೆ. ಒಬ್ಬ ಕುತ್ತಿಗೆಯಲ್ಲಿ ಹಿಡಿದುಕೊಂಡಿದ್ದರೆ, ಇನ್ನೊಬ್ಬ ವ್ಯಕ್ತಿ ಬೆಲ್ಟ್ ನಲ್ಲಿ ಹೊಡೆಯೋದು ಸಿಸಿಟಿವಿಯಲ್ಲಿ ದಾಖಲಾಗಿದೆ. ಮನೆಯಲ್ಲಿದ್ದ ಮಹಿಳೆಯರು ಎರಡು ಲಕ್ಷ ಎಲ್ಲಿಟ್ಟಿದ್ದೀಯಾ ಹೇಳು ಅಂತ ಜೋರು ಮಾಡುತ್ತಿರುವುದು ಕೇಳಿಬರುತ್ತದೆ. ಯುವಕನ ಜೊತೆಗೆ ಇನ್ನೊಬ್ಬ ವ್ಯಕ್ತಿಯೂ ಇದ್ದು, ಆತನಿಗೂ ಹೊಡೆದಿದ್ದಾರೆ.

ಮನೆಯ ವೆರಾಂಡಾದಲ್ಲಿ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಕೇಳಿದಾಗ, ವಿಡಿಯೋ ನಮಗೂ ಸಿಕ್ಕಿದೆ. ಆತ ಬಿಹಾರ ಮೂಲದವನಾಗಿದ್ದು, ಕದ್ದ ಹಣ ಮತ್ತು ಬಳೆಯನ್ನು ಕೊಟ್ಟಿದ್ದಾನಂತೆ. ಆನಂತರ ಮನೆಯವರು ಬಿಟ್ಟು ಕಳಿಸಿದ್ದಾರೆ. ಆತ ಬಿಹಾರಕ್ಕೆ ಮರಳಿ ಹೋಗಿದ್ದಾನೆ. ಹಾಗಾಗಿ ಕಂಪ್ಲೇಂಟ್ ಏನೂ ಆಗಿಲ್ಲ ಎಂದು ತಿಳಿಸಿದ್ದಾರೆ. ಕಂಪ್ಲೇಂಟ್ ಆಗದೇ ಇದ್ದರೂ, ಅಮಾನವೀಯ ರೀತಿಯಲ್ಲಿ ಹೊಡೆಯೋ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ಒಂದು ತಿಂಗಳಿನಿಂದ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಂದ ಸಿಕ್ಕಿದೆ. ಕಳವು ಮಾಡಿದ್ದರೆ ಪೊಲೀಸರಿಗೆ ಹಿಡಿದು ಕೊಡುವುದು ಬಿಟ್ಟು ಇವರೇ ಯಾಕೆ ಇಷ್ಟು ಹೊಡೆದಿದ್ದಾರೋ ಗೊತ್ತಿಲ್ಲ.

Video of man brutally being thrashed by family for stealing money at Arkula in Mangalore goes viral. Man from Bihar who was working at the house has been alleged for stealing cash and gold later which the family beat him with belt. No case has been registered Rural police station.