ಬ್ರೇಕಿಂಗ್ ನ್ಯೂಸ್
30-03-24 10:53 am Mangalore Correspondent ಕ್ರೈಂ
ಪುತ್ತೂರು, ಮಾ.30: ಪುತ್ತೂರಿನ ವೈದ್ಯರೊಬ್ಬರಿಗೆ ದೆಹಲಿಯ ಪೊಲೀಸ್ ಎಂದು ಹೇಳಿ ಕರೆ ಮಾಡಿದ ವಂಚಕ ನಿಮ್ಮ ವಿರುದ್ಧ ಕೇಸು ದಾಖಲಾಗಿದೆ ಎಂದು ಬೆದರಿಸಿ 16.50 ಲಕ್ಷ ರೂ. ಪೀಕಿಸಿದ ಘಟನೆ ಬೆಳಕಿಗೆ ಬಂದಿದೆ.
ವಂಚನೆಗೀಡಾದ ಪುತ್ತೂರು ಬೊಳುವಾರು ನಿವಾಸಿ ಡಾ.ಚಿದಂಬರ ಅಡಿಗ (69) ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಇವರ ದೂರವಾಣಿಗೆ ಮಾ.28ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಬಂದಿತ್ತು. ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದಾಗಿ ತಿಳಿಸಿದ್ದ ವ್ಯಕ್ತಿ, ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕೆ ಪ್ರಕರಣ ದಾಖಲಾಗಿದ್ದು, ಅರೆಸ್ಟ್ ಮಾಡಲು ಕೋರ್ಟಿನಿಂದ ವಾರಂಟ್ ಆಗಿದೆ. ನೀವು ದೆಹಲಿಯ ಸಿಬಿಐ ಕೋರ್ಟಿಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಲೈನ್ ಮೂಲಕ ಕೋರ್ಟ್ ಕೇಸ್ ನಡೆಸುತ್ತೇವೆ ಎಂದು ನಂಬಿಸಿದ್ದಾರೆ.
ಅದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಒಂದಷ್ಟು ಹಣವನ್ನು ವರ್ಗಾವಣೆ ಮಾಡಬೇಕು. ನಿಮ್ಮ ಕೋರ್ಟ್ ಕೇಸ್ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ. ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ಬೆದರಿಸಿದ್ದಾನೆ. ಅಲ್ಲದೆ, ವೈದ್ಯರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಮೊಬೈಲ್ ಫೋನ್ ವಾಟ್ಸ್ ಆಪ್ ಗೆ ಕಳುಹಿಸಿದ್ದ. ಇದರಿಂದ ಹೆದರಿದ ವೈದ್ಯರು, ಗಾಬರಿಗೊಂಡು ತನ್ನ ಬ್ಯಾಂಕ್ ಖಾತೆಯಿಂದ, RTGS ಮೂಲಕ ಅಪರಿಚಿತ ವ್ಯಕ್ತಿ ತಿಳಿಸಿದ ಬ್ಯಾಂಕ್ ಖಾತೆಗೆ ರೂ. 16,50,000/- ಹಣವನ್ನು ವರ್ಗಾವಣೆ ಮಾಡಿದ್ದಾರೆ.
ಸ್ವಲ್ಪ ಹೊತ್ತಿನ ಬಳಿಕ ಅದೇ ವ್ಯಕ್ತಿ ವೈದ್ಯರಿಗೆ ಕರೆ ಮಾಡಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆಗ ವೈದ್ಯರಿಗೆ ಅನುಮಾನ ಬಂದಿದ್ದು ದೂರವಾಣಿ ಕರೆ ಕಡಿತಗೊಳಿಸಿದ್ದಾರೆ, ತನ್ನ ಗೆಳೆಯರಿಗೆ ಈ ಬಗ್ಗೆ ತಿಳಿಸಿದಾಗ ಆನ್ ಲೈನ್ ವಂಚನೆಯ ಕೃತ್ಯದ ಬಗ್ಗೆ ತಿಳಿದುಬಂದಿತ್ತು. ಡಾ.ಚಿದಂಬರ ಅಡಿಗ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ, ಅ ಕ್ರ ನಂ :32-2024 ಕಲಂ:406, 419, 420 ಐಪಿಸಿ ಮತ್ತು 66 ( C) ,66 ( D ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Puttur doctor duped of Rs 16 lakha online fraud in the name of Delhi CBI. he caller claimed to be a police officer from Delhi and informed Dr Adiga that there was a case registered against him in Delhi related to narcotics, illegal money hoarding, and human trafficking, with an active arrest warrant issued against him.
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
20-01-25 11:05 pm
Mangalore Correspondent
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm