Belagavi News, Murder: ಬೆಳಗಾವಿ ; ವರದಕ್ಷಿಣೆಗಾಗಿ ಪತ್ನಿಯ ಕೊಲೆ, ಪತಿಗೆ 10 ವರ್ಷ ಜೈಲುಶಿಕ್ಷೆ

02-04-24 11:01 am       HK News Desk   ಕ್ರೈಂ

ಪತ್ನಿ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ 10 ವರ್ಷ ಸಾದಾ ಜೈಲುಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಬೆಳಗಾವಿಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಪ್ರಕಟಿಸಿದೆ.

ಬೆಳಗಾವಿ, ಏ 02: ಪತ್ನಿ ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪತಿಗೆ 10 ವರ್ಷ ಸಾದಾ ಜೈಲುಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಬೆಳಗಾವಿಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಪ್ರಕಟಿಸಿದೆ.

ಮೂಡಲಗಿ ತಾಲ್ಲೂಕಿನ ಬಿಸನಕೊಪ್ಪ ಗ್ರಾಮದ ರಮೇಶ ಬಸಪ್ಪ ಹೊಂಗಲ ಜೈಲು ಶಿಕ್ಷೆಗೊಳಗಾದ ವ್ಯಕ್ತಿ. ಪತ್ನಿ ಶ್ರೀದೇವಿ ಆವರನ್ನು ಮದುವೆ ಆಗಿದ್ದ ರಮೇಶ ಪದೇ ಪದೇ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ, ಅಲ್ಲದೇ ವಿಪರೀತ ಮದ್ಯ ಸೇವಿಸುತ್ತಿದ್ದ. ತನ್ನ ಪತ್ನಿಗೆ ತವರು ಮನೆಯಿಂದ ಹಣ, ಬಂಗಾರದ ಒಡವೆ ತರುವಂತೆ ಆಗ್ರಹಿಸುತ್ತಿದ್ದ. ಇದಕ್ಕೆ ಪತ್ನಿ ಶ್ರೀದೇವಿ ನಿರಾಕರಿಸಿದಾಗ 2021ರ ಜ.12ರಂದು ಸೀರೆಯಿಂದ ಕುತ್ತಿಗೆಗೆ ಬಿಗಿದು, ಉಸಿರುಗಟ್ಟಿಸಿ ಹತ್ಯೆಗೈದಿದ್ದ. ಈ ಸಂಬಂಧ ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್‌. ಎಸ್‌. ಮಂಜುನಾಥ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ನಸರೀನ್‌ ಬಂಕಾಪುರ ವಾದ ಮಂಡನೆ ಮಾಡಿದ್ದರು.

Belagavi Dowry case murder, husband sentenced to 10 years of imprisonment.