ಬ್ರೇಕಿಂಗ್ ನ್ಯೂಸ್
08-04-24 10:45 pm HK News Desk ಕ್ರೈಂ
ಮಹಾರಾಷ್ಟ್ರ, ಏ 08: ಆಕೆ ರಸ್ತೆ ಬದಿಯ ಬೀಡಾ ಅಂಗಡಿ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದಳು. ಆಕೆಯ ಜೊತೆ ಆಕೆಯ ಗೆಳತಿಯೂ ಇದ್ದರು. ಈ ವೇಳೆ ಅಂಗಡಿ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಸಿಗರೇಟ್ ಸೇದುತ್ತಿದ್ದ ಯುವತಿಯನ್ನೇ ಗುರಾಯಿಸುತ್ತಿದ್ದ. ಅಷ್ಟೇ.. ಯುವತಿ ಬುಲಾವ್ ಕೊಟ್ಟಿದ್ದೇ ತಡ ಸ್ಥಳಕ್ಕಾಗಮಿಸಿದ ಆಕೆಯ ಗೆಳೆಯರ ಜೊತೆ ಸೇರಿದ ಯುವತಿ ತನ್ನನ್ನು ಕೆಣಕಿದ ವ್ಯಕ್ತಿಯನ್ನು ಕೊಂದು ಮುಗಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ನಾಗಪುರ ಜಿಲ್ಲೆಯಲ್ಲಿ ನಡೆದ ಶಾಕಿಂಗ್ ಘಟನೆ ಇದು. 24 ವರ್ಷದ ಯುವತಿ ಪಾನ್ ಶಾಪ್ ಬಳಿ ಸಿಗರೇಟ್ ಸೇದುತ್ತಾ ನಿಂತಿದ್ದ ವೇಳೆ ಈ ಘಟನೆ ನಡೆದಿದೆ. ಆಕೆ ತನ್ನ ಇಬ್ಬರು ಪುರುಷ ಗೆಳೆಯರ ಜೊತೆ ಸೇರಿ 28 ವರ್ಷ ವಯಸ್ಸಿನ ರಂಜಿತ್ ರಾಥೋಡ್ ಎಂಬಾತನನ್ನ ಹತ್ಯೆ ಮಾಡಿದ್ದಾರೆ. ಮೃತ ವ್ಯಕ್ತಿ 4 ಹೆಣ್ಣು ಮಕ್ಕಳ ತಂದೆ ಎಂದು ತಿಳಿದು ಬಂದಿದೆ.
ಕಳೆದ ಶನಿವಾರ ತಡ ರಾತ್ರಿ ನಡೆದ ಈ ಘಟನೆಯ ಸಿಸಿಟಿವಿ ವಿಡಿಯೋ ಇದೀಗ ವೈರಲ್ ಆಗಿದೆ. ನಾಗಪುರದ ಮನೇವಾಡ ಸಿಮೆಂಟ್ ರಸ್ತೆಯ ಪಾನ್ ಶಾಪ್ ಬಳಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಗುದ್ದಾಟದ ದೃಶ್ಯ ದಾಖಲಾಗಿದೆ. ಈ ವಿಡಿಯೋ ನೋಡಿ ಸ್ಥಳೀಯರು ಆಘಾತಕ್ಕೀಡಾಗಿದ್ದಾರೆ.
ಸಿಗರೇಟ್ ಸೇದುತ್ತಾ ನಿಂತಿದ್ದ ಯುವತಿ ಜಯಶ್ರೀ ಪಂಧಾರೆ ಅವರಿಗೆ ತಮ್ಮನ್ನು ರಾಥೋಡ್ ಗುರಾಯಿಸುತ್ತಿದ್ದ ರೀತಿ ಕಿರಿಕಿರಿ ಮೂಡಿಸಿದೆ. ಹೀಗಾಗಿ, ಆಕೆ ತನ್ನ ಗೆಳೆಯರಿಗೆ ಈ ವಿಷಯ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಮೃತ ವ್ಯಕ್ತಿ ರಾಥೋಡ್ ತನ್ನ ಮೊಬೈಲ್ ಫೋನ್‌ನಲ್ಲಿ ಜಯಶ್ರೀ ಸಿಗರೇಟ್ ಖರೀದಿಸುವ, ಸಿಗರೇಟ್ ಸೇದುವ ಹಾಗೂ ಉಂಗುರಾಕೃತಿಯಲ್ಲಿ ಹೊಗೆಯನ್ನು ಬಿಡುವ ದೃಶ್ಯಗಳನ್ನ ಸೆರೆ ಹಿಡಿದ ಎನ್ನಲಾಗಿದೆ. ಈ ವೇಳೆ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ರಾಥೋಡ್‌ಗೆ ಜಯಶ್ರೀ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವೇಳೆ ವಿಡಿಯೋ ಮಾಡೋದನ್ನು ಮುಂದುವರೆಸಿದ ರಾಥೋಡ್, ಜಯಶ್ರೀಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಜಯಶ್ರೀ ಜೊತೆಗಿದ್ದ ಆಕೆಯ ಸ್ನೇಹಿತೆ ಸವಿತಾ ಸಯಾರೆ, ತಮ್ಮ ಗೆಳೆಯರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೂಡಲೇ ಜಯಶ್ರೀ ಗೆಳೆಯರಾದ ಆಕಾಶ್ ರಾವತ್ ಹಾಗೂ ಜೀತು ಜಾಧವ್ ಅವರು ಸ್ಥಳಕ್ಕೆ ಧಾವಿಸಿದರು. ವಿಡಿಯೋ ಮಾಡುತ್ತಿದ್ದ ರಾಥೋಡ್ ಜೊತೆ ಜಗಳಕ್ಕೆ ಇಳಿದರು. ಈ ವೇಳೆ ಯುವಕರಿಂದ ತಪ್ಪಿಸಿಕೊಂಡ ರಾಥೋಡ್, ತನ್ನ ಮನೆ ಕಡೆಗೆ ಹೊರಟ. ಮನೆಗೆ ಹೋಗುವ ದಾರಿಯಲ್ಲಿ ಮಹಾಲಕ್ಷ್ಮಿ ನಗರ ಎಂಬಲ್ಲಿ ಬಾರ್ ಒಂದರ ಬಳಿ ಬಿಯರ್ ಖರೀದಿ ಮಾಡಲು ಮುಂದಾದ. ಈ ವೇಳೆ ಇಬ್ಬರೂ ಯುವಕರ ಜೊತೆ ಆಗಮಿಸಿದ ಯುವತಿ ಜಯಶ್ರೀ ರಾಥೋಡ್‌ನ ಬೆನ್ನು ಹತ್ತಿ ಹೋಗಿ ದಾಳಿ ನಡೆಸಿದ್ದಾರೆ.
ಜಯಶ್ರೀ ಹಾಗೂ ಆಕೆಯ ಗೆಳೆಯರು ರಾಥೋಡ್ ಮೇಲೆ ಹಲ್ಲೆ ನಡೆಸುವ, ಚಾಕುವಿನಿಂದ ಚುಚ್ಚುವ ವಿಡಿಯೋ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಅದರಲ್ಲೂ ಆರೋಪಿ ಯುವತಿ ಜಯಶ್ರೀ ತನ್ನನ್ನು ಕೆಣಕಿದ ರಾಥೋಡ್‌ಗೆ ಚಾಕುವಿನಿಂದ ಹಲವು ಬಾರಿ ಚುಚ್ಚುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.
ಇದಾದ ಕೂಡಲೇ ಜಯಶ್ರೀ, ಆಕೆಯ ಸ್ನೇಹಿತೆ ಸವಿತಾ ಹಾಗೂ ಇಬ್ಬರು ಪುರುಷ ಗೆಳೆಯರೂ ಸೇರಿದಂತೆ ನಾಲ್ವರೂ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಪ್ಪಿಸಿಕೊಂಡು ಹೋಗುತ್ತಿದ್ದ ವೇಳೆ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಮೃತ ರಾಥೋಡ್‌ನ ಮೊಬೈಲ್ ಫೋನ್‌ನಲ್ಲಿ ಆತ ಯುವತಿ ಸಿಗರೇಟ್ ಸೇದುತ್ತಿದ್ದ ದೃಶ್ಯ ಸೆರೆ ಹಿಡಿದಿದ್ದ. ಅದನ್ನೂ ಸಾಕ್ಷ್ಯವಾಗಿ ಪರಿಗಣಿಸಿರುವ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನೂ ಸಾಕ್ಷ್ಯವಾಗಿ ಪರಿಗಣಿಸಿದ್ದಾರೆ.
A 26-year-old man was murdered on Saturday after he allegedly stared at two women smoking at a cigarette shop in Maharashtra’s Nagpur. According to the Nagpur police, they have arrested the two women along with the killer and are looking for another accused.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm