ಬ್ರೇಕಿಂಗ್ ನ್ಯೂಸ್
24-04-24 03:41 pm Bangalore Correspondent ಕ್ರೈಂ
ಬೆಂಗಳೂರು, ಏ.24: ಆನ್‌ಲೈನ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಜನಸಾಮಾನ್ಯರಿಂದ ದೊಡ್ಡ ಶ್ರೀಮಂತರ ವರೆಗೆ ಎಲ್ಲಾ ವರ್ಗದವರನ್ನು ಸೈಬರ್ ಕ್ರಿಮಿನಲ್‌ಗಳು ವಂಚಿಸುತ್ತಿದ್ದಾರೆ. ಕೋಟಿಗಳ ಲೆಕ್ಕದಲ್ಲಿ ವಂಚನೆ ಪ್ರಕರಣಗಳು ಬಯಲಾಗುತ್ತಿವೆ. ಜನರು ಕೂಡ ದುರಾಸೆ ಹಾಗೂ ಆಮಿಷಗಳಿಗೆ ಒಳಗಾಗಿ ಲಕ್ಷ, ಕೋಟಿಗಳಲ್ಲಿ ಹಣವನ್ನು ಕಳೆದು ಕೊಳ್ಳುತ್ತಲೇ ಇದ್ದಾರೆ. ಬೆಂಗಳೂರಿನ ನಿವಾಸಿಯೊಬ್ಬರು ದುಪ್ಪಟ್ಟು ಲಾಭದ ಆಸೆಗೆ ಬಿದ್ದು ಬರೊಬ್ಬರಿ 5.18 ಕೋಟಿ ರೂ. ಕಳೆದುಕೊಂಡಿದ್ದಾರೆ.
ಬೆಂಗಳೂರಿನ ನಿವಾಸಿಯೊಬ್ಬರಿಗೆ ಆನ್‌ಲೈನ್ ವಂಚಕರು ಷೇರು ವ್ಯವಹಾರದಲ್ಲಿ ಹಣ ಹೂಡಿದರೆ ದುಪ್ಪಟ್ಟು ಲಾಭ ಗಳಿಸಬಹುದೆಂದು ಆಸೆ ಹುಟ್ಟಿಸಿದ್ದಾರೆ. ಇದನ್ನು ನಂಬಿಕೊಂಡು ವ್ಯಕ್ತಿ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದಾರೆ. ಇವರಿಂದ ಹಂತಹಂತವಾಗಿ 5.18 ಕೋಟಿ ರೂ. ಪಡೆದು ವಂಚಿಸಿದ್ದಾರೆ.
ವಂಚನೆ ಸಂಬಂಧ ವ್ಯಕ್ತಿ ನಗರದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ದೂರು ನೀಡಿರುವ ವ್ಯಕ್ತಿಯ ಮೊಬೈಲ್‌ಗೆ ವಾಟ್ಸಾಪ್ ಮೂಲಕ ಕೆಲವು ದಿನಗಳ ಹಿಂದೆ ಷೇರು ವ್ಯವಹಾರದಲ್ಲಿ ಹಣ ತೊಡಗಿಸಿ, ದುಪ್ಪಟ್ಟು ಲಾಭಗಳಿಸಿ ಎಂಬ ಸಂದೇಶವೊಂದು ಬಂದಿರುತ್ತದೆ. ಹಣ ಹೂಡಿಕೆಯ ಲಿಂಕ್ ಅನ್ನೂ ಕಳುಹಿಸಿ ನೋಂದಣಿ ಮಾಡಿಕೊಳ್ಳುವಂತೆ ಹೇಳಿರುತ್ತಾರೆ.
ಈ ಮೆಸೇಜ್ ನಂಬಿದ ದೂರುದಾರ ಲಾಭದ ಆಸೆಯಿಂದ ಹೆಸರು, ಆಧಾರ್, ಪ್ಯಾನ್ ನಂಬರ್ ಮತ್ತಿತರ ದಾಖಲೆಗಳನ್ನು ಹಂಚಿಕೊಂಡು ನೋಂದಣಿ ಮಾಡಿಕೊಂಡಿದ್ದರು. ಆರೋಪಿಗಳಿಗೆ ಇಷ್ಟು ಸಾಕಾಗಿತ್ತು. ದುಪ್ಪಟ್ಟು ಲಾಭ ನೀಡುವ ಷೇರುಗಳನ್ನು ಖರೀದಿಸುವಂತೆ ಮತ್ತೊಂದು ಸಂದೇಶ ಕಳುಹಿಸುತ್ತಾರೆ. ಈ ಸಂದೇಶವನ್ನು ನಂಬಿದ್ದ ದೂರುದಾರ ಹಲವಾರು ಷೇರುಗಳನ್ನು ಖರೀದಿಸುತ್ತಾರೆ. ಆದರೆ ಯಾವುದೇ ಲಾಭ ಬಂದಿರಲಿಲ್ಲ. ಮತ್ತಷ್ಟು ಷೇರುಗಳನ್ನು ಖರೀದಿಸಿದರೆ ಒಟ್ಟಿಗೆ ಹೆಚ್ಚಿನ ಲಾಭ ಸಿಗಲಿದೆ ಎಂದು ಆರೋಪಿಗಳು ಪುಸಲಾಯಿಸುತ್ತಾರೆ. ದೂರುದಾರ ಅದನ್ನೂ ನಂಬಿ ಮತ್ತಷ್ಟು ಷೇರುಗಳನ್ನು ಖರೀದಿಸುತ್ತಾರೆ.
ಆಗಲೂ ಲಾಭ ಬಂದಿರಲಿಲ್ಲ. ಮತ್ತಷ್ಟು ಹಣ ಹೂಡಿಕೆ ಮಾಡಿದರೆ ಷೇರಿನ ಮೊತ್ತ ಮತ್ತು ಲಾಭಾಂಶವನ್ನು ಹಿಂತಿರುಗಿಸುವುದಾಗಿ ಭರವಸೆ ನೀಡುತ್ತಾರೆ. ಈ ಮಾತನ್ನು ನಂಬಿದ ದೂರುದಾರ ಮಹಾಶಯ ಹಂತ ಹಂತವಾಗಿ 5.18 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಾ ಹೊಡಿದ್ದಾರೆ. ಆರೋಪಿಗಳು ಮತ್ತೆ ಹೂಡಿಕೆ ಮಾಡುವಂತೆ ಕೇಳಿದಾಗ ದೂರುದಾರ ಅನುಮಾನಗೊಂಡು ಸೈಬರ್ ಕ್ರೈಂ ಠಾಣೆಗೆ ದೂರು ನೀಡಲು ಓಡಿ ಹೋಗಿದ್ದಾರೆ. ದುರಾಸೆಗೆ ಬಿದ್ದ ದೂರುದಾರ ಚಿನ್ನಾಭರಣಗಳನ್ನು ಮಾರಿದ್ದಾನೆ. ವಿವಿಧ ಮೂಲಗಳಿಂದ ಸಾಲ ಮಾಡಿ ಹೂಡಿಕೆ ಮಾಡಿ 5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
Scams on social media platforms are on a rise and reports of people losing their hardearned money after falling for frauds are not new. In a latest incident, a resident of Bengaluru allegedly lost a whopping Rs 5.18 crore lakh to cyber fraudsters in a fake share trading scam.
12-09-25 03:04 pm
HK News Desk
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 05:34 pm
Mangalore Correspondent
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
ಗುಂಡಿ ಬಿದ್ದ ಹೆದ್ದಾರಿ ತಕ್ಷಣ ದುರಸ್ತಿ ; ಸುರತ್ಕಲ್...
12-09-25 11:32 am
ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಹೆಣಗಳ ಅವಶೇಷ,...
11-09-25 10:42 pm
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm