ಬ್ರೇಕಿಂಗ್ ನ್ಯೂಸ್
30-04-24 10:16 pm HK News Desk ಕ್ರೈಂ
ಮುಂಬೈ, ಎ.30: ಮುಂಬೈ ಪೊಲೀಸರು ಅತಿ ದೊಡ್ಡ ಸೈಬರ್ ಮೋಸದ ಕಳ್ಳಾಟವನ್ನು ಪತ್ತೆ ಮಾಡಿದ್ದಾರೆ. ಎಂಎನ್ ಸಿ ಕಂಪನಿಯಲ್ಲಿ ಡೈರೆಕ್ಟರ್ ಆಗಿ ನಿವೃತ್ತರಾಗಿದ್ದ ಮಹಿಳೆಯೊಬ್ಬರಿಗೆ ತಾವು ಪೊಲೀಸ್, ಸಿಬಿಐ ಅಧಿಕಾರಿಗಳೆಂದು ಹೇಳಿ ಬರೋಬ್ಬರಿ 25 ಕೋಟಿ ರೂಪಾಯಿ ಪೀಕಿಸ್ಕೊಂಡು ವಂಚನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಹಿಳೆಗೆ ಕಳೆದ ಫೆಬ್ರವರಿ ತಿಂಗಳಲ್ಲಿ ವಾಟ್ಸಪ್ ಕರೆಯೊಂದು ಬಂದಿತ್ತು. ಟೆಲಿಕಾಂ ಡಿಪಾರ್ಟ್ಮೆಂಟ್ ನಿಂದ ಎಂದು ಫೋನ್ ಮಾಡಿದ್ದವರು ತಿಳಿಸಿದ್ದು, ನಿಮ್ಮ ಮೂರು ಮೊಬೈಲ್ ನಂಬರ್ ಡಿ ಏಕ್ಟಿವೇಟ್ ಆಗುತ್ತೆ ಎಂದಿದ್ದರು. ನಿವೃತ್ತಿ ಬದುಕಿನಲ್ಲಿರುವ ಮಹಿಳೆ ಕೂಡಲೇ ಯಾಕಪ್ಪಾ, ನನ್ನ ಮೊಬೈಲ್ ಸಂಖ್ಯೆಯನ್ನು ಹಾಗೆ ಮಾಡ್ತೀಯಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಆ ವ್ಯಕ್ತಿ ನಿಮ್ಮ ಮೇಲೆ ಕೇಸು ಆಗಿದೆ, ಆ ಬಗ್ಗೆ ತಿಳಿದುಕೊಳ್ಳಬೇಕೆಂದಿದ್ದರೆ ನಾನು ಪೊಲೀಸರಿಗೆ ಕನೆಕ್ಟ್ ಮಾಡ್ತೀನಿ ಎಂದಿದ್ದಾನೆ.
ಆನಂತರ, ಮತ್ತೊಬ್ಬ ವ್ಯಕ್ತಿ ಸಂಪರ್ಕಕ್ಕೆ ಬಂದಿದ್ದು, ತಾನು ಪೊಲೀಸ್ ಅಧಿಕಾರಿಯೆಂದು ಪರಿಚಯ ಮಾಡಿಕೊಂಡಿದ್ದಾನೆ. ಹಣಕಾಸು ವಂಚನೆ ಪ್ರಕರಣ ಒಂದರಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಂಡುಬಂದಿದೆ. ಹಾಗಾಗಿ, ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾನೆ. ಅದೇ ಸಂದರ್ಭದಲ್ಲಿ ಪೂರಕವಾಗಿ ತನಿಖೆಯನ್ನು ಸಿಬಿಐನವರು ಮಾಡುತ್ತಿದ್ದು ಬೇಕಾದ್ರೆ ಅವರಿಗೂ ಸಂಪರ್ಕ ಕಲ್ಪಿಸುತ್ತೇನೆ ಎಂದು ಹೇಳಿ ಸಿಬಿಐ ಅಧಿಕಾರಿಯ ಸೋಗಿನಲ್ಲಿದ್ದ ಮತ್ತೊಬ್ಬನಿಗೆ ಸಂಪರ್ಕ ಕೊಡಿಸಿದ್ದಾನೆ.
ಸಿಬಿಐ ಅಧಿಕಾರಿ ದರ್ಪದಿಂದ ಮಾತನಾಡಿದ್ದಲ್ಲದೆ, ಮಹಿಳೆಯನ್ನು ಮನೆಗೆ ಬಂದು ಬಂಧಿಸುವುದಾಗಿ ಹೇಳಿ ಹೆದರಿಸಿದ್ದಾನೆ. ಅಷ್ಟರಲ್ಲಿ ಪೊಲೀಸ್ ಆಗಿದ್ದ ವ್ಯಕ್ತಿ ನಿಮ್ಮನ್ನು ನಾವು ಒಂದಷ್ಟು ಹಣ ಕೊಟ್ಟರೆ ಬಚಾವ್ ಮಾಡ್ತೀವಿ ಎಂದು ಹೇಳಿ ಮಹಿಳೆಯನ್ನು ಪುಸಲಾಯಿಸಿದ್ದಾನೆ. ನಿಮ್ಮದೇ ಹೆಸರಲ್ಲಿ ಪ್ರತ್ಯೇಕ ಖಾತೆ ಓಪನ್ ಮಾಡಿ ಒಂದಷ್ಟು ಹಣವನ್ನು ನೀವು ಡಿಪಾಸಿಟ್ ಮಾಡಬೇಕು. ಆನಂತರ, ಆ ಹಣ ನಿಮಗೆ ರಿಟರ್ನ್ ಆಗುತ್ತದೆ ಎಂದು ನಂಬಿಸಿದ್ದಾನೆ. ಅಲ್ಲದೆ, ಆ ಹಣ ನೇರವಾಗಿ ಆರ್ ಬಿಐ ಖಾತೆಗೆ ಹೋಗುತ್ತದೆ, ಅಲ್ಲಿ ಸೇಫ್ ಆಗಿರುತ್ತದೆ ಎಂದೂ ಹೇಳಿದ್ದಾನೆ. ಆನಂತರ ಸೈಬರ್ ಕಳ್ಳರೇ ಆಕೆಯ ಆಧಾರ್ ಕಾರ್ಡ್ ಪಡೆದು ಮಹಿಳೆಯ ಹೆಸರಿನಲ್ಲೇ ಕರೆಂಟ್ ಎಕೌಂಟ್ ಓಪನ್ ಮಾಡುತ್ತಾರೆ. ಮಹಿಳೆಯ ಬಳಿ ಆ ಖಾತೆಗೆ ಹಣ ಹಾಕುವಂತೆ ಹೇಳಿದ್ದಲ್ಲದೆ, ಇದರ ರಶೀದಿಯನ್ನು ನೀವು ಸ್ಥಳೀಯ ಠಾಣೆಯಲ್ಲಿ ಪಡೆದುಕೊಳ್ಳಬಹುದು ಎಂದು ನಂಬಿಸಿದ್ದಾರೆ.
ಮಹಿಳೆ ಮೋಸಗಾರರು ಹೇಳಿದಂತೆ, 25 ಕೋಟಿಯಷ್ಟು ಮೊತ್ತವನ್ನು ಆ ಖಾತೆಗೆ ಡಿಪಾಸಿಟ್ ಮಾಡಿದ್ದರು. ಹಣವನ್ನು ಡಿಪಾಸಿಟ್ ಮಾಡಿದ ಬಳಿಕ ಮೋಸಗಾರರು ಸಂಪರ್ಕಕ್ಕೆ ಬಾರದೇ ಇದ್ದುದರಿಂದ ಸಂಶಯಗೊಂಡು ಮುಂಬೈ ಸೈಬರ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಸದ್ಯಕ್ಕೆ 31 ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ಜಾಡು ಹಿಡಿದು ತನಿಖೆಯನ್ನು ಉತ್ತರ ಭಾರತಕ್ಕೆ ವಿಸ್ತರಣೆ ಮಾಡಿದ್ದಾರೆ.
THE MUMBAI cyber police registered an FIR earlier this month when the former director of a corporate firm lost nearly Rs 25 crore in a cyber fraud that took place between February 6 and April 3.
13-01-25 10:48 am
Bangalore Correspondent
Minister Parameshwara, Yatnal: 'ನೀವು ಸಾಬರಿಗೆ...
11-01-25 10:53 pm
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
CT Ravi,Threat, Lakshmi Hebbalkar; ಬೆಳಗಾವಿ ಅಭ...
11-01-25 02:11 pm
13-01-25 09:58 am
HK News Desk
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
13-01-25 10:48 am
Bengaluru correspondent
Historian Vikram Sampath, Lit Fest Mangalore...
12-01-25 11:03 pm
PLD bank election, MLA Ashok Rai, Puttur: ಪಿಎ...
12-01-25 10:06 pm
Hardeep Singh Puri, Brijesh Chowta, Mangalore...
12-01-25 12:33 pm
CM Siddaramaiah, Kambala Mangalore, Naringana...
11-01-25 10:34 pm
11-01-25 10:21 pm
Mangalore Correspondent
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm