ಬ್ರೇಕಿಂಗ್ ನ್ಯೂಸ್
01-05-24 06:44 pm Mangalore Correspondent ಕ್ರೈಂ
ಬಂಟ್ವಾಳ, ಮೇ 1: ಮೆಲ್ಕಾರ್ ಬಳಿ ನಡೆದ ಕೋಮು ದ್ವೇಷದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳಿಗೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂ. ದಂಡ ವಿಧಿಸಿದೆ.
ಬಂಟ್ವಾಳ ತಾಲೂಕು ಮಂಚಿ ಗ್ರಾಮದ ವಿಜಿತ್ ಕುಮಾರ್ (31), ಅಭಿ ಯಾನೆ ಅಭಿಜಿತ್ (33) ಮಂಗಳೂರು ತಾಲೂಕು ಬಡಗ ಉಳಿಪ್ಪಾಡಿ ಗ್ರಾಮದ ಮಳಲಿ ಮಟ್ಟಿಮನೆ ಕಿರಣ್ ಪೂಜಾರಿ (33), ತಿರುವೈಲು ಗ್ರಾಮದ ಅನೀಶ್ ಯಾನೆ ಧನು (32) ಶಿಕ್ಷೆಗೊಳಗಾದವರು.
ಪ್ರಕರಣದಲ್ಲಿ ಒಟ್ಟು 29 ಸಾಕ್ಷಿದಾರರನ್ನು ವಿಚಾರಿಸಿದ್ದು, 40 ಸಾಕ್ಷಿಗಳನ್ನು ಗುರುತಿಸಲಾಗಿತ್ತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ವಾದ-ಪ್ರತಿವಾದವನ್ನು ಆಲಿಸಿ, ನಾಲ್ವರು ಆರೋಪಿಗಳು ದೋಷಿಗಳೆಂದು ಎ. 8ರಂದು ತೀರ್ಪು ನೀಡಿದ್ದರು. ಎ.30ರಂದು ಶಿಕ್ಷೆ ಪ್ರಕಟಿಸಿದ್ದಾರೆ.
ಐಪಿಸಿ ಕಲಂ 302 ಮತ್ತು ಕಲಂ 120 (ಬಿ)ಯಡಿ ಜೀವಾವಧಿ ಶಿಕ್ಷೆ ಮತ್ತು ತಲಾ 25 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲರಾದರೆ 1 ವರ್ಷ ಹೆಚ್ಚುವರಿ ಜೈಲು, ಕಲಂ 307 ಮತ್ತು ಸಹವಾಚಕ ಕಲಂ120 (ಬಿ)ಯಡಿ 5 ವರ್ಷ ಜೈಲು ಮತ್ತು ತಲಾ 5 ಸಾವಿರ ರೂ. ದಂಡ, ದಂಡ ಪಾವತಿಗೆ ವಿಫಲನಾದರೆ 6 ತಿಂಗಳ ಹೆಚ್ಚುವರಿ ಜೈಲು, ಕಲಂ 341 ಮತ್ತು ಸಹವಾಚಕ ಕಲಂ120 (ಬಿ)ಯಡಿ 1 ತಿಂಗಳ ಜೈಲು, ಕಲಂ 324, ಸಹವಾಚಕ ಕಲಂ 120 (ಬಿ)ಯಡಿ 1 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡದ ಮೊತ್ತ 1.20 ಲಕ್ಷ ರೂ. ವನ್ನು ಕೊಲೆಗೀಡಾದ ಮಹಮ್ಮದ್ ನಾಸಿರ್ ಅವರ ಪತ್ನಿ ರಹಮತ್ ಯಾನೆ ರಮ್ಲತ್‌ಗೆ ನೀಡಬೇಕು ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಸಂತ್ರಸ್ತ ಪರಿಹಾರ ಯೋಜನೆಯಡಿ ಮೃತರ ಪತ್ನಿ ಮತ್ತು ಗಾಯಾಳು ಮುಸ್ತಾಫ ಅವರಿಗೆ ಪರಿಹಾರ ನೀಡಬೇಕು ಎಂದು ತೀರ್ಪಿನಲ್ಲಿ ನಿರ್ದೇಶನ ನೀಡಲಾಗಿದೆ. ಸರಕಾರದ ಪರ ಶೇಖರ ಶೆಟ್ಟಿ ಸಾಕ್ಷಿ ವಿಚಾರಣೆ ಮಾಡಿದ್ದು, ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತ ಅವರು ವಾದ ಮಂಡಿಸಿದ್ದರು.
2015ರ ಆಗಸ್ಟ್ 6ರಂದು ಮೊಹಮ್ಮದ್ ಮುಸ್ತಫಾ ಮತ್ತು ಮಹಮ್ಮದ್ ನಾಸೀರ್ ಮೆಲ್ಕಾರ್ ಕಡೆಯಿಂದ ಆಟೋ ಹತ್ತಿದ್ದು ಮುಡಿಪು ಕಡೆಗೆ ಹೊರಟಿದ್ದರು. ಆಟೋದಲ್ಲಿ ತೆರಳುತ್ತಿದ್ದಾಗ ರಾತ್ರಿ 10.45ಕ್ಕೆ ಬಂಟ್ವಾಳ ತಾಲೂಕು ಸಜಿಪಮೂಡ ಗ್ರಾಮದ ಕೊಳಕೆ ಕಂದೂರು ಎಂಬಲ್ಲಿಗೆ ತಲುಪುತ್ತಿದ್ದಂತೆ ನಾಲ್ವರು ಆರೋಪಿಗಳು ಬೈಕಿನಲ್ಲಿ ಬಂದು ಅಡ್ಡಗಟ್ಟಿದ್ದು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ತೀವ್ರ ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಸೀರ್ ಅಹಮ್ಮದ್ ಮರುದಿನ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
Four persons sentenced to life imprisonment in communal murder case at Melkar Bantwal Mangalore. Those convicted are Vijeth Kumar, 22, from Manchi; Kiran Poojary, 24, from Badaga Ulipady; Anish alias Dhanu, 23, from Tiruvail; and Abhi alias Abhijith, 24, from Manchi. They have been convicted for the murder of Mohammed Naseer alias Naseer. Public prosecutor Judith OM Crasta said that the court sentenced the four accused under IPC section 302 to life imprisonment and imposed a fine of Rs 25,000 each.
23-11-24 07:43 pm
Bangalore Correspondent
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
Karnataka Bypolls Live Updates Congress: ಉಪ ಚ...
23-11-24 11:35 am
ಲಾರಿ ಡ್ರೈವರ್ ಎಡವಟ್ಟಿಗೆ ಫಾರ್ಚುನರ್ ಕಾರು ಡಿಕ್ಕ...
22-11-24 05:16 pm
Kodava News, children : ಕೊಡವ ಜನಸಂಖ್ಯೆ ಹೆಚ್ಚಿಸ...
22-11-24 03:53 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
23-11-24 10:37 pm
Mangalore Correspondent
Mangalore, Shiradi Ghat Accident: ಬೆಂಗಳೂರಿನ ಕ...
23-11-24 12:20 pm
Ut Khader, Mangalore: ನೇತ್ರಾವತಿ ತೀರದಲ್ಲಿ ತಡೆಗ...
22-11-24 10:33 pm
Kuthar, Mangalore News: ಕುತ್ತಾರಿನಲ್ಲಿ ಜೆಸಿಬಿ...
22-11-24 10:17 pm
Brijesh Chowta, MIR group, Mangalore: ಸಂಸದ ಕ್...
22-11-24 09:04 pm
23-11-24 10:49 am
Mangaluru Correspondent
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm
Bangalore crime, Stabbing: ಬೈಕ್ ಪಾರ್ಕಿಂಗ್ ವಿಚ...
22-11-24 04:14 pm
Belthangady, Mangalore, Crime : ಟೋರ್ನ್ ಜೀನ್ಸ್...
22-11-24 03:04 pm